Asianet Suvarna News Asianet Suvarna News

ಮದುವೆಯಾದ ಒಂದು ತಿಂಗಳಿಗೆ ಬಿಟ್ಟುಹೋದ ವಧು, ಡೈವೋರ್ಸ್‌ ಜೊತೆ ಮನಿ ರೀಫಂಡ್‌ ಕೇಳಿದ ವರ!

ಮದುವೆಯಾಗಿ ಒಂದೇ ತಿಂಗಳಿಗೆ ವಧು ಬಿಟ್ಟುಹೋದ ಕಾರಣಕ್ಕೆ, ವ್ಯಕ್ತಿಯೊಬ್ಬ ಡೈವೋರ್ಸ್‌ ಜೊತೆಗೆ ಮದುವೆ ಖರ್ಚು ಮಾಡಿದ್ದ ಹಣವನ್ನು ರೀಫಂಡ್‌ ಮಾಡುವಂತೆ ಕೇಳಿದ್ದಾನೆ. ಅದಕ್ಕಾಗಿ ವಧುವಿನ ಮನೆಯ ಮುಂದೆ ಪೋಸ್ಟರ್‌ ಅಂಟಿಸಿ, ಲೌಡ್‌ ಸ್ಪೀಕರ್‌ನಲ್ಲಿ ಘೋಷಣೆ ಕೂಗಿದ ಘಟನೆ ಚೀನಾದಲ್ಲಿ ನಡೆದಿದೆ.

Divorce after a month of marriage husband wants Money Refund in China san
Author
First Published Dec 6, 2022, 2:29 PM IST

ನವದೆಹಲಿ (ಡಿ.6): ಚೀನಾದಲ್ಲಿ ಮದುವೆಯಾದ ಒಂದು ತಿಂಗಳಲ್ಲೇ ವ್ಯಕ್ತಿಯೊಬ್ಬ ತನ್ನ ಪತ್ನಿಯಿಂದ ವಿಚ್ಚೇದನ ಬಯಸಿ ಕೋರ್ಟ್‌ಗೆ ಡೈವೋರ್ಸ್‌ ಅರ್ಜಿ ಸಲ್ಲಿಸಿದ್ದಾನೆ. ಮದುವೆಗಾಗಿ ನಾನು 50 ಲಕ್ಷಕ್ಕೂ ಅಧಿಕ ಹಣ ಖರ್ಚು ಮಾಡಿದ್ದೇನೆ. ತನ್ನ ಪತ್ನಿಯಿಂದ ಕನಿಷ್ಠ 16 ಲಕ್ಷ ಹಣವನ್ನು ವಾಪಾಸ್‌ ಕೊಡಿಸುವಂತೆ ಅರ್ಜಿಯಲ್ಲಿ ಮನವಿ ಮಾಡಿದ್ದೇನೆ. ಇದಲ್ಲದೆ, ಪತ್ನಿಯ ಮನೆಯ ಮುಂದೆ ಬ್ಯಾನರ್‌ ಅಂಟಿಸಿರುವ ವ್ಯಕ್ತಿ, ಮನೆಯ ಹೊರಗಡೆ ಧ್ವನಿವರ್ಧಕ ಬಳಸಿಕೊಂಡು, ತನ್ನ ಕುಟುಂಬದ ವಿಚಾರವನ್ನು ತಿಳಿಸುತ್ತಿದ್ದಾನೆ. ಮದುವೆಗಾಗಿ ನಾನು ಖರ್ಚು ಮಾಡಿದ ಹಣವನ್ನು ವಾಪಾಸ್‌ ಕೊಡುವಂತೆ ಧ್ವನಿವರ್ಧಕ ಬಳಸಿಕೊಂಡು ಕೂಗುತ್ತಿದ್ದಾನೆ. ಈತನ ಈ ವಿಚಾರ ಚೀನಾದ ಸೋಶಿಯಲ್‌ ಮೀಡಿಯಾ ವೆಬ್‌ಸೈಟ್‌ ವೈಬೋದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಜಿಮು ನ್ಯೂಸ್‌ನ ವರದಿಯ ಪ್ರಕಾರ, ಹೆನಾನ್‌ ಪ್ರಾಂತ್ಯದ 25 ವರ್ಷ ಹೌ ಎನ್ನುವ ವ್ಯಕ್ತಿ ಲಿ ಎನ್ನುವ ಮಹಿಳೆಯನ್ನು ವಿವಾಹವಾಗಿದ್ದ. ಇಬ್ಬರೂ 2021ರಲ್ಲಿ ಆನ್‌ಲೈನ್‌ಲ್ಲಿ ಭೇಟಿಯಾಗಿದ್ದರು. ಆ ಭೇಟಿ ಬಳಿಕ ಪ್ರೇಮಕ್ಕೆ ತಿರುಗು ಇಬ್ಬರೂ ವಿವಾಹವಾಗುವ ನಿರ್ಧಾರ ಮಾಡಿದ್ದರು. ವಿವಾಹದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ಆದರೆ ಮದುವೆಯಾದ ಒಂದು ತಿಂಗಳಿಗೆ ಇಬ್ಬರ ನಡುವೆ ವೈಮನಸ್ಯ ಆರಂಭವಾಗಿದೆ. ಇದರ ಬಳಿಕ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ.

ಆದರೆ ಆಕೆಯನ್ನು ಸಮಾಧಾನ ಮಾಡಿ ಮನೆಗೆ ಕರೆತರುವ ಹೌ ಪ್ರಯತ್ನ ಎನ್ನವೂ ವಿಫಲವಾಗಿದೆ. ಇದರಿಂದ ಬೇಸತ್ತ ಹೌ ಕೋರ್ಟ್‌ನಲ್ಲಿ ವಿಚ್ಛೇದನದ ಅರ್ಜಿ ಸಲ್ಲಿಸಿದ್ದಾನೆ. ಆನ ಅರ್ಜಿಯನ್ನು ಕೋರ್ಟ್‌ ಮೊದಲು ತಿರಸ್ಕರಿಸಿತ್ತು. ಆ ಬಳಿಕ ಮತ್ತೊಮ್ಮೆ ಹೌ ಅರ್ಜಿಯನ್ನು ಸಲ್ಲಿಸಿದ್ದು, ಮುಂದಿನ ತಿಂಗಳು ಇದರ ವಿಚಾರಣೆ ನಡೆಯಲಿದೆ.

ಪಗಡೆಯಾಟದಲ್ಲಿ ತನ್ನನ್ನೇ ಪಣಕಿಟ್ಟು ಸೋತ ನಾರಿ: ಎತ್ತಾಕ್ಕೊಂಡೋದ ಮನೆ ಮಾಲೀಕ

ಪತ್ನಿ ಮನೆಯ ಎದುರು, ಬ್ಯಾನರ್‌-ಲೌಡ್‌ಸ್ಪೀಕರ್:
ಹೌ ಹೇಳುವ ಪ್ರಕಾರ ಮದುವೆಗಾಗಿ ಅಂದಾಜು 58 ಲಕ್ಷ ರೂಪಾಯಿ ಖರ್ಚಾಗಿದೆ. ಆದರೆ, ಇಷ್ಟು ದೊಡ್ಡ ವೆಚ್ಚದಲ್ಲಿ ಮಾಡಿಕೊಂಡಿದ್ದ ಮದುವೆ ಈಗ ಬ್ರೇಕ್‌ ಆಗುವ ಹಂತದಲ್ಲಿದೆ. ಇದರಿಂದಾಗಿ ನಾನು ಖರ್ಚು ಮಾಡಿದ ಹಣದ ಸ್ವಲ್ಪ ಪ್ರಮಾಣವಾದರೂ ಆಕೆ ನೀಡಬೇಕು ಎಂದು ಒತ್ತಾಯಿಸಿದ್ದಾನೆ. ಪತ್ನಿ ಲಿ ನನಗೆ 16 ಲಕ್ಷ ರೂಪಾಯಿ ವಾಪಾಸ್‌ ನೀಡಬೇಕು. ಅದಕ್ಕಾಗಿ ಆತ ವಿಶಿಷ್ಟವಾದ ತಂತ್ರವನ್ನು ಮಾಡಿದ್ದಾನೆ. ಲೀ ಇರುವ ಮನೆಯ ಮುಂದೆ ಮದುವೆಯ ಬ್ಯಾನರ್‌ಅನ್ನು ಕಟ್ಟಿದ್ದು, ಅದರಲ್ಲಿ ಮದುವೆಗ ಖರ್ಚು ಮಾಡಿದ್ದ ಹಣವನ್ನು ವಾಪಾಸ್‌ ನೀಡುವ ಮನವಿಯನ್ನು ಹೌ ಬರೆದಿದ್ದಾರೆ. ಇಷ್ಟ ಮಾತ್ರವಲ್ಲದೆ ಅದರ ಪಕ್ಕದಲ್ಲಿಯೇ ಒಂದು ಲೌಡ್‌ ಸ್ಪೀಕರ್‌ ಇಟ್ಟಿದ್ದು, ಅದರಲ್ಲಿ ಪದೇ ಪದೇ ಮದುವೆಗೆ ಖರ್ಚು ಮಾಡಿದ ಹಣವನ್ನು ವಾಪಾಸ್‌ ಮಾಡುವಂತೆ ದೊಡ್ಡದಾಗಿ ಕೂಗುತ್ತಿದ್ದಾನೆ.

ಲೂಡೋ ಆಡ್ತಾ ಆನ್‌ಲೈನಲ್ಲಿ ಲವ್.! ಮನೆಬಿಟ್ಟು ಓಡಿದ ಗೇಮ್ ಸುಂದರಿ

ತನ್ನ ಸಂಬಂಧಿಗಳಿಂದ ಮದುವೆಗಾಗಿ ನಾನು 18 ಲಕ್ಷ ರೂಪಾಯಿ ಕೈಸಾಲ ಮಾಡಿದ್ದೇನೆ. ಉಳಿದ ಹಣವನ್ನು ತಾನು ಹಾಗೂ ತನ್ನ ಪಾಲಕರು ಹೊಂದಿಸಿದ್ದಾಗಿ ಹೌ ಹೇಳಿದ್ದಾನೆ.ಮದುವೆ ವಿಜೃಂಭಣೆಯಿಂದ ನಡೆದಿತ್ತು. ಮದುವೆಯ ವೇಳೆ ಲೀ ಅವರಿಗೆ ಕಾರು, ನಗದು ಮತ್ತು ಕೆಲವು ಉಡುಗೊರೆಗಳನ್ನು ನೀಡಲಾಗಿತ್ತು. ಇದೆಲ್ಲದರ ಲೆಕವನ್ನು ಮದುವೆಯ ಖರ್ಚಿಯಲ್ಲಿ ಕಳೆದಿದ್ದೇನೆ. ಆದರೆ, ನಾವು ಆಕೆಗೆ ಖರೀದಿಸಿ ಕೊಟ್ಟ ಆಭರಣಗಳು ವಾಪಸು ಮಾತ್ರ ನಮಗೆ ಬೇಕು. ಚಿನ್ನಾಭರಣದ ಬೆಲೆ 5 ಲಕ್ಷ ಮತ್ತು ನಗದು ರೂಪದಲ್ಲಿ ನೀಡಲಾದ ಮೊತ್ತ 11 ಲಕ್ಷ. ಈ ರೀತಿಯಾಗಿ, ನಾವು ಒಟ್ಟು 16 ಲಕ್ಷ ರೂಪಾಯಿಯನ್ನು ಆಕೆಯಿಂದ ಕೇಳಿದ್ದೇನೆ ಎಂದಿದ್ದಾನೆ. ಚೀನಾದಲ್ಲಿ ಲಿಂಗ ಅಸಮಾನತೆಯಿಂದಾಗಿ, ಹುಡುಗರು ಹುಡುಗಿಯರಿಗೆ 'ವರದಕ್ಷಿಣೆ' ನೀಡುತ್ತಾರೆ. ಪ್ರಸ್ತುತ, ಈ ದಂಪತಿಗಳ ಕಥೆ ಚೀನಾದ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ.

Follow Us:
Download App:
  • android
  • ios