ಅಜ್ಜಿ ಮನೆಗೆ ಪುಟ್ಟ ಮಕ್ಕಳನ್ನು ಪೋಸ್ಟ್‌ನಲ್ಲಿ ಕಳುಹಿಸುವ ಕಾಲವೊಂದಿತ್ತು ಗೊತ್ತ?
20ನೇ ಶತಮಾನದ ಆರಂಭದಲ್ಲಿ ಅಮೆರಿಕಾದಲ್ಲಿ ಮಕ್ಕಳನ್ನು ಅಂಚೆ ಮೂಲಕ ಕಳುಹಿಸುವ ಪದ್ಧತಿ ಇತ್ತು. ಕಡಿಮೆ ವೆಚ್ಚ ಮತ್ತು ನಂಬಿಕಸ್ತ ಅಂಚೆ ಸಿಬ್ಬಂದಿ ಈ ಪದ್ಧತಿಯ ಜನಪ್ರಿಯತೆಗೆ ಕಾರಣವಾಗಿದ್ದರು. 1915ರಲ್ಲಿ ಈ ಸೌಲಭ್ಯವನ್ನು ಅಂಚೆ ಇಲಾಖೆ ನಿಷೇಧಿಸಿತು.
ಹಿಂದೆಲ್ಲಾ ಪೋಸ್ಟ್ ಮೂಲಕ ಕೊರಿಯರ್‌ಗಳು, ಲೆಟರ್‌ಗಳು, ನೇಮಕಾತಿ ಪತ್ರಗಳು, ಸಂದರ್ಶನ ಪತ್ರಗಳು, ಟೆಲಿಗ್ರಾಂಗಳು ಬರುವುದನ್ನು ನೀವು ನೋಡಿದ್ದೀರಾ ಕೇಳಿದ್ದೀರಾ? ಆದರೆ ಪೋಸ್ಟಲ್ ಮೂಲಕ ಮಕ್ಕಳನ್ನು ಕೂಡ ಕಳುಹಿಸುತ್ತಿದ್ದರು ಎಂಬ ವಿಚಾರ ನಿಮಗೆ ಗೊತ್ತಾ. 20ನೇ ಶತಮಾನದಲ್ಲಿ ಅಮೆರಿಕಾದ ಪೋಸ್ಟಲ್ ಸರ್ವಿಸ್ ಜನವರಿ 1ರ 1913ರಂದು 11 ಪೌಂಡ್‌ನಷ್ಟು ತೂಕದ ಅಂದರೆ ಅಂದಾಜು 4 ಕೇಜಿ ತೂಕದ ಪಾರ್ಸೆಲನ್ನು ಪೋಸ್ಟ್ ಮೂಲಕ ಕಳುಹಿಸುವುದಕ್ಕೆ ಅಮೆರಿಕನ್ನರಿಗೆ ಅವಕಾಶ ನೀಡಿತ್ತು. ಈ ಬೆಳವಣಿಗೆಯೂ ಕೆಲವು ನಿರೀಕ್ಷಿಸದ ರೀತಿಯಲ್ಲಿ ಪೋಸ್ಟಲ್ ಸೇವೆಯನ್ನು ಬಳಸಿಕೊಳ್ಳುವುದಕ್ಕೆ ಕಾರಣವಾಯ್ತು. ಕೆಲವು ಪೋಷಕರು ತಮ್ಮ ಮಕ್ಕಳನ್ನು ಈ ಪೋಸ್ಟ್ ಮೂಲಕ ದೂರದ ಊರುಗಳಿಗೆ, ನೆಂಟರ ಮನೆಗೆ ಅಜ್ಜಿ ಮನೆಗೆ ಕಳುಹಿಸುವುದಕ್ಕೆ ನಿರ್ಧರಿಸಿದರು.
ಹೀಗಾಗಿ 1913ರಲ್ಲಿ ಅಮೆರಿಕಾದ ಓಹಿಯೋ ದಂಪತಿ ಜೆಸ್ಸಿ ಹಾಗೂ ಮಥಿಲ್ಡಾ ಬೀಗಲ್ ಅವರು ತಮ್ಮ 8 ತಿಂಗಳ ಮಗನ ಜೇಮ್ಸ್‌ನನ್ನು ಆತನ ಅಜ್ಜಿ ಮನೆಗೆ ಪೋಸ್ಟಲ್ ಸರ್ವೀಸ್ ಮೂಲಕ ಕಳುಹಿಸಿದರು. ಮಕ್ಕಳನ್ನು ಅಂಚೆಯಲ್ಲಿ ಕಳುಹಿಸಿದ ಮೊದಲ ನಿದರ್ಶನ ಇದಾಗಿತ್ತು. ಇದಕ್ಕೆ ತಗುಲಿದ ವೆಚ್ಚ 15 ಸೆಂಟ್ಸ್ (15 cents) ಹಾಗೂ ಪೋಷಕರು ಮಗುವಿಗೆ 50 ಡಾಲರ್ ನಿಗದಿ ಮಾಡಿದ್ದರು. ಇದಾದ ನಂತರ ಪೋಷಕರು ಹೀಗೆ ನಿರಂತರವಾಗಿ ಹಲವು ವರ್ಷಗಳ ಕಾಲ ಮಕ್ಕಳನ್ನು ಪೋಸ್ಟ್ ಮೂಲಕ ಪಾರ್ಸೆಲ್ ಮಾಡಿದ್ದರು. ಅದರಲ್ಲೂ ಕೆಲ ಗ್ರಾಮೀಣ ಪ್ರದೇಶಗಳಲ್ಲಿ ಈ ಅಂಚೆ ಪಾರ್ಸೆಲ್‌ನ ಬೆಲೆ ರೈಲು ಟಿಕೆಟ್‌ಗಿಂತಲೂ ಕಡಿಮೆ ಇತ್ತು.
ಪೋಸ್ಟ್ ಆಫೀಸ್ RD ಸ್ಕೀಂನಲ್ಲಿ ಕೇವಲ 5,000 ರೂ ಹೂಡಿಕೆ ಮಾಡಿದರೆ 8.54 ಲಕ್ಷ ರೂ ಆದಾಯ!
ಅದರಲ್ಲೂ 1914 ರ ಫೆಬ್ರವರಿಯಲ್ಲಿ 4 ವರ್ಷದ ಮಗು ಚಾರ್ಲೊಟ್ ಮೇ ಪಿಯರ್‌ಸ್ಟಾರ್ಫ್ ಅವರನ್ನು ಇಡಾಹೊದ ಗ್ರ್ಯಾಂಜ್‌ವಿಲ್ಲೆಯಿಂದ 73 ಮೈಲುಗಳಷ್ಟು ದೂರ ಇರುವ ಆಕೆಯ ಅಜ್ಜಿ ಮನೆಗೆ ಕಳುಹಿಸಲಾಗಿತ್ತು. ಇದು ದೂರದ ಕಾರಣಕ್ಕೆ ಅತ್ಯಂತ ಪ್ರಸಿದ್ಧ ಪೋಸ್ಟಲ್ ಪಾರ್ಸೆಲ್ ಪ್ರಕರಣವಾಗಿ ಗಮನ ಸೆಳೆಯಿತು.
ಈಕೆಯನ್ನು ಪಾರ್ಸೆಲ್ ಮಾಡುವ ವೇಳೆ ಕೋಳಿ ದರದ ಅಡಿಯಲ್ಲಿ ವರ್ಗೀಕರಿಸಿ, ಆಕೆಯನ್ನು 54 ಪೌಂಡ್ ತೂಗುವ ಬೇಬಿ ಕೋಳಿ ಮರಿ ಎಂದು ಟ್ಯಾಗ್ ಮಾಡಲಾಗಿತ್ತು. ಜೊತೆಗೆ ಆಕೆಯ ಕೋಟ್‌ಗೆ ಅಂಚೆ ಸ್ಟಾಂಪ್‌ನ್ನು ಅಂಟಿಸಲಾಗಿತ್ತು. ರೈಲ್ವೆ ಅಂಚೆ ಸೇವೆಯಲ್ಲಿ ಕೆಲಸ ಮಾಡುತ್ತಿದ್ದ ಆಕೆಯ ತಾಯಿಯ ಸೋದರಿಯೇ ಆಕೆಯ ಈ ಪೋಸ್ಟಲ್ ಸರ್ವೀಸ್‌ಗೆ ಜೊತೆಯಾದರು. ಈ ಘಟನೆ ಇತಿಹಾಸದ ಪುಟ ಸೇರುವುದರ ಜೊತೆಗೆ 'ಮೇಲಿಂಗ್ ಮೇ' (Mailing May) ಎಂಬ ಮಕ್ಕಳ ಪುಸ್ತಕ ಬರೆಯುವುದಕ್ಕೂ ಪ್ರೇರಣೆಯಾಯ್ತು. ಮಕ್ಕಳನ್ನು ಅಂಚೆ ಚೀಲದಲ್ಲಿ ತುಂಬಿಸದೇ ಇದ್ದರೂ ಅವರ ಬಟ್ಟೆಗಳಿಗೆ ಅಂಚೆ ಚೀಟಿಗಳನ್ನು ಅಂಟಿಸಿ ರೈಲಿನ ಮೂಲಕ ಕಳುಹಿಸಲಾಗುತ್ತಿತ್ತು. ಸಾಮಾನ್ಯವಾಗಿ ಪೋಷಕರು ನಂಬುವರ ಅಂಚೆ ಇಲಾಖೆಯ ಸಿಬ್ಬಂದಿ ಜೊತೆ ಮಕ್ಕಳನ್ನು ಕಳುಹಿಸಲಾಗುತ್ತಿತ್ತು.
ಮಹಿಳಾ ಸಮ್ಮಾನ್ ಉಳಿತಾಯ ಖಾತೆ ತೆರೆದ ಒಂದೇ ಕುಟುಂಬದ 5 ತಲೆಮಾರಿನ ಮಹಿಳೆಯರು;ಅಪೂರ್ವ ಕ್ಷಣಕ್ಕೆ ಅಂಚೆ ಇಲಾಖೆ ಸಾಕ್ಷಿ
ಮಕ್ಕಳನ್ನು ಮೇಲ್ ಕಳುಹಿಸುವ ಈ ಅಭ್ಯಾಸವೂ ಅನೇಕರಿಗೆ ಆರ್ಥಿಕವಾಗಿ ಲಾಭದಾಯಕ ಎನಿಸಿದರು. ಈ ಸೇವೆಯನ್ನು ಅಧಿಕೃತವಾಗಿ ಅಂಚೆ ಇಲಾಖೆ 1915 ರಲ್ಲಿ ನಿಷೇಧಿಸಿತ್ತು. ಆದರೂ ಈ ಪ್ರಕ್ರಯಿಯೆಯೂ ತಕ್ಷಣವೇ ನಿಲ್ಲಲಿಲ್ಲ, ಅದೇ ವರ್ಷದ ಆಗಸ್ಟ್‌ನಲ್ಲಿ, ಮೌಡ್ ಸ್ಮಿತ್ ಎಂಬ ಮೂರು ವರ್ಷದ ಹುಡುಗಿಯನ್ನು ಕೆಂಟುಕಿಗೆ 40 ಮೈಲುಗಳಷ್ಟು ದೂರಕ್ಕೆ ಕಳುಹಿಸಲಾಯ್ತು. ಇದು ಹೀಗೆ ಅಂಚೆ ಕೊರಿಯರ್ ಮೂಲಕ ಪ್ರಯಾಣಿಸಿದ ಕೊನೆಯ ಮಗುವಾಗಿದೆ. ಈ ಅಂಚೆ ಪ್ರಯಾಣದ ಸಮಯದಲ್ಲಿ ಮಕ್ಕಳಿಗೆ ಹಾನಿ ಅಥವಾ ವಿಳಂಬವಾದ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಅಮೆರಿಕನ್ನರು ತಮ್ಮ ಅಂಚೆ ಕೆಲಸಗಾರರ ಮೇಲೆ ಇಟ್ಟಿರುವ ನಂಬಿಕೆ, ಅಂಚೆ ವೆಚ್ಚದ ಕೈಗೆಟುಕುವಿಕೆಯ ದರ ಈ ಸೇವೆಯನ್ನು ಬಹಳಷ್ಟು ಜನಪ್ರಿಯಗೊಳಿಸಿತ್ತು. 1915ರಲ್ಲಿ ಅಂಚೆ ಇಲಾಖೆ ಈ ಸೌಲಭ್ಯವನ್ನು ನಿಷೇಧಿಸಿತ್ತು.