ಸಮುದ್ರ ತೀರದಲ್ಲಿ ಯೋಗ ಮಾಡುತ್ತಿದ್ದ ಖ್ಯಾತ ನಟಿ ದುರಂತ ಅಂತ್ಯ, ದೈತ್ಯ ಅಲೆಗೆ ಬಲಿ!

ಸಮುದ್ರ ತೀರದ ಕಲ್ಲು ಬಂಡೆ ಮೇಲೆ ಕುಳಿತು ಯೋಗದಲ್ಲಿ ತಲ್ಲೀನಳಾಗಿದ್ದ ಖ್ಯಾತ ನಟಿ ಕೊಚ್ಚಿ ಹೋದ ಘಟನೆ ನಡೆದಿದೆ. ನಟಿಯ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.
 

Russia actress swept away by a giant wave while practicing Yoga at Thailand beach ckm

ಥಾಯ್ಲೆಂಡ್ (ಡಿ.02)  ಸಮುದ್ರದ ತೀರದಲ್ಲಿನ ಬಂಡೆಗಳ ಮೇಲೆ ಕುಳಿತು ಪ್ರಾಣಾಯಾಮ ಸೇರಿದಂತೆ ಯೋಗಾಭ್ಯಾಸದಲ್ಲಿ ನಿರತಳಾಗಿದ್ದ ಖ್ಯಾತ ನಟಿ ಮೇಲೆ ಭೀಕರ ಸಮುದ್ರದ ಅಲೆಗಳು ಅಪ್ಪಳಿಸಿದೆ. ನೋಡ ನೋಡುತ್ತಿದ್ದಂತೆ ನಟಿ ಅಲೆಯ ರಭಸಕ್ಕೆ ಕೊಚ್ಚಿ ಹೋಗಿ ಸಾವನ್ನಪ್ಪಿದ ಘಟನೆ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪದಲ್ಲಿ ನಡೆದಿದೆ. 24 ವರ್ಷದ ರಷ್ಯಾದ ಖ್ಯಾತ ನಟಿ ಕ್ಯಾಮಿಲ್ಲಾ ಬೆಲ್ಲಾಟಸ್ಕಾಯ ದುರಂತ ಅಂತ್ಯಕಂಡಿದ್ದಾಳೆ. ಯೋಗದಲ್ಲಿ ನಿರತಳಾಗಿದ್ದ ನಟಿ ಮೇಲೆ ಭೀಕರ ಅಲೆ ಅಪ್ಪಳಿಸಿದ ಪರಿಣಾಮ ನೋಡ ನೋಡುತ್ತಿದ್ದಂತೆ ನಟಿ ಕೊಚ್ಚಿ ಹೋಗಿದ್ದಾರೆ. ನಟಿಯ ಕೊನೆಯ ಕ್ಷಣದ ವಿಡಿಯೋ ಸೆರೆಯಾಗಿದೆ.

ನಟಿ ಕ್ಯಾಮಿಲ್ಲಾ ಪ್ರತಿ ದಿನ ಯೋಗ ಮಾಡುತ್ತಾರೆ. ದೈಹಿಕವಾಗಿ ಹಾಗೂ ಮಾನಸಿಕವಾಗಿ ಫಿಟ್ ಆಗಿರುವ ಯೋಗದ ಮೋರೆ ಹೋಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕ್ಯಾಮಿಲ್ಲಾ ಯೋಗ ಮಾಡುತ್ತಿದ್ದಾರೆ. ಇದರಿಂದ ತನ್ನ ಜೀವನ ಸಂಪೂರ್ಣ ಬದಲಾಗಿರುವುದಾಗಿ ಕ್ಯಾಮಿಲ್ಲಾ ಹೇಳಿಕೊಂಡಿದ್ದರು. ರಷ್ಯಾ ನಟಿ ಕ್ಯಾಮಿಲ್ಲಾ ತನ್ನ ಬಾಯ್‌ಫ್ರೆಂಡ್ ಜೊತೆ ಸೇರಿ ಥಾಯ್ಲೆಂಡ್ ಪ್ರವಾಸದಲ್ಲಿರುವಾಗ ಈ ಘಟನೆ ನಡೆದಿದೆ.  ಚಿತ್ರ ಸೇರಿದಂತೆ ಹಲವು ಬ್ಯೂಸಿ ಶೆಡ್ಯೂಲ್ ಬಳಿಕ ನಟಿ ಥಾಯ್ಲೆಂಡ್‌ನ ಇದೇ ಕೊಹ್ ಸಮುಯಿ ದ್ವೀಪಕ್ಕೆ ಭೇಟಿ ನೀಡುವುದು ಹೆಚ್ಚಾಗಿತ್ತು. ಇದರಂತೆ ಈ ಬಾರಿಯೂ ಪ್ರವಾಸ ಮಾಡಿದ್ದಾರೆ. ಆದರೆ ದುರಂತ ನಡೆದುಹೋಗಿದೆ.

ಶೋಭಿತಾ ಶಿವಣ್ಣ ಸಾವಿನ ಸುತ್ತ ಅನುಮಾನ, ಪತಿ ಫೋಟೋ ಇನ್‌ಸ್ಟಾದಿಂದ ಡಿಲೀಟ್ ಮಾಡಿದ್ದ ನಟಿ!

ಕೊಹ್ ಸಮುಯಿ ದ್ವೀಪದ ಸಮುದ್ರದ ತೀರದಲ್ಲಿನ ಬಂಡೆ ಕಲ್ಲಿನ ಮೇಲೆ ಕುಳಿತು ಪ್ರಾಣಾಯಾಮ ಮಾಡುತ್ತಿದ್ದ ವೇಳೆ ಭೀಕರ ಅಲೆ ಅಪ್ಪಳಿಸಿದೆ. ಏನಾಗುತ್ತಿದೆ ಅನ್ನುವಷ್ಟರಲ್ಲಿ ನಟಿ ಸಮುದ್ರ ಅಲೆಗೆ ಕೊಚ್ಚಿ ಹೋಗಿದ್ದಾರೆ. ಪಕ್ಕದ ಬಂಡೆ ಕಲ್ಲಿನ ಮೇಲಿದ್ದ ಪ್ರವಾಸಿಗರು ನಟಿಯನ್ನು ರಕ್ಷಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ಸಾಧ್ಯವಾಗಿಲ್ಲ. ದೈತ್ಯ ಅಲೆಯಿಂದ ನಟಿ ಕೊಚ್ಚಿ ಹೋಗಿದ್ದಾರೆ. ತಕ್ಷಣವೆ ಕೋಸ್ಟಲ್ ಪೊಲೀಸರು ಆಗಮಿಸಿ ಶೋಧ ಕಾರ್ಯ ಆರಂಭಿಸಿದ್ದಾರೆ. ಆದರೆ ರಕ್ಕಸ ಅಲೆಗಳ ಪ್ರಮಾಣ ಹೆಚ್ಚಾದ ಕಾರಣ ಕಾರ್ಯಾಚರಣೆಗೂ ಅಡ್ಡಿಯಾಗಿದೆ.

 

 

ಸತತ ಕಾರ್ಯಾಚರಣೆ ಬಳಿಕ ಪೊಲೀಸರು ಕೆಲ ಕಿಲೋಮೀಟರ್ ದೂರದಲ್ಲಿ ರಷ್ಯಾ ನಟಿ ಕ್ಯಾಮಿಲ್ಲಾ ಮೃತದೇಹ ಪತ್ತೆ ಹಚ್ಚಿ ಹೊರತೆಗಿದಿದ್ದಾರೆ. ಕ್ಯಾಮಿಲ್ಲಾ ದುರಂತ ಅಂತ್ಯ ಕಂಡ ಇದೇ ಬಂಡೆ ಕಲ್ಲಿನ ಮೇಲೆ ಹಲವು ಬಾರಿ ಯೋಗ ಮಾಡಿದ್ದರೆ. ಇದೇ ಬಂಡೆ ಕಲ್ಲಿನ ಮೇಲೆ ಕುಳಿತು ಕಾಲ ಕಳೆದಿದ್ದಾರೆ. ಕ್ಯಾಮಿಲ್ಲಾ ಅತೀ ಹೆಚ್ಚು ಪ್ರವಾಸ ಮಾಡಿದ ಪ್ರದೇಶದಲ್ಲಿ ಥಾಯ್ಲೆಂಡ್‌ನ ಕೊಹ್ ಸಮುಯಿ ದ್ವೀಪ ಮೊದಲ ಸ್ಥಾನದಲ್ಲಿದೆ. ಹೀಗಾಗಿ ಹಲವು ಬಾರಿ ಈ ದ್ವೀಪ ನನ್ನ ಎರಡನೇ ತವರು ಎಂದು ಹೇಳಿಕೊಂಡಿದ್ದರು. 

ಇದುವರೆಗೂ ಸಮುದ್ರದ ರಕ್ಕಸ ಅಲೆಗಳು ನಟಿಯ ಯೋಗ, ಧ್ಯಾನಕ್ಕೆ ಧಕ್ಕೆ ತಂದಿರಲಿಲ್ಲ. ಆದರೆ ಈ ಬಾರಿಯ ಅಲೆ ಮಾತ್ರ ಪ್ರಾಣವನ್ನೇ ತೆಗಿದಿದೆ. ತಂಗಿದ್ದ ಹೋಟೆಲ್‌ನಿಂದ ಕೆಂಪು ಬಣ್ಣದ ಕಾರಿನ ಮೂಲಕ ಸಮುದ್ರ ತೀರಕ್ಕೆ ಆಗಮಿಸಿದ್ರು. ಬಳಿಕ ಯೋಗ ಮ್ಯಾಟ್ ಹಿಡಿದು ಸಮುದ್ರ ತೀರಕ್ಕೆ ತೆರಳಿದ್ದಾರೆ. ಸಂಜೆ ವೇಳೆ ಯೋಗ ಮಾಡಿ ವಾಪಸ್ ಬರುವುದಾಗಿ ಬಾಯ್‌ಫ್ರೆಂಡ್‌ಗೆ ಹೇಳಿ ಹೊಟೆಲ್‌ನಿಂದ ಹೊರಟಿದ್ದಾರೆ. ಆದರೆ ಮರಳಿ ಬರಲೇ ಇಲ್ಲ. 

ಕ್ಯಾಮಿಲಾ ಕೊನೆಯ ಕ್ಷಣಗಳ ವಿಡಿಯೋ ದಾಖಲಾಗಿದೆ. ನಟಿ ಸಾವಿನ ಬೆನ್ನಲ್ಲೇ ಸಮುದ್ರ ತೀರದ ಬಂಡೆ ಕಲ್ಲಿನ ಮೇಲೆ ಪ್ರವೇಶ ನಿರಾಕರಿಸಲಾಗಿದೆ. ಸಮುದ್ರದ ದೈತ್ಯ ಅಲೆಗಳು ಅಪ್ಪಳಿಸುತ್ತಿರುವ ಕಾರಣ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ. ಹೆಚ್ಚಿನ ಸುರಕ್ಷತಾ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.


 

Latest Videos
Follow Us:
Download App:
  • android
  • ios