'ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು': ವಿವಾದ ಸೃಷ್ಟಿಸಿದ RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ
ಸಮುದಾಯದ ಉಳಿವಿಗಾಗಿ ಎಲ್ಲರೂ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕರೆಕೊಟ್ಟಿದ್ದು, ಇದು ವಿವಾದಕ್ಕೆ ಕಾರಣವಾಗಿದೆ.
ನಾಗ್ಪುರ: ಸಮುದಾಯದ ಉಳಿವಿಗಾಗಿ ಕನಿಷ್ಠ 3 ಮಕ್ಕಳನ್ನಾದರೂ ಪಡೆಯಬೇಕು. ಹಾಗಾಗಿ ಸಮಾಜದ ವಿನಾಶ ತಪ್ಪಿಸಲು ಇದು ಅತ್ಯಗತ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘಟದ ಮುಖ್ಯಸ್ಥ ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ನಾಗ್ಪುರದಲ್ಲಿ ನಡೆದ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಮೋಹನ್ ಭಾಗವತ್, ಜನಸಂಖ್ಯೆ ಬೆಳವಣಿಗೆ ಇಳಿಮುಖದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಸಮುದಾಯ ಉಳಿಯಬೇಕಾದ್ರೆ 3 ಮಕ್ಕಳನ್ನು ಹೊಂದಬೇಕು ಎಂದು ಕರೆಕೊಟ್ಟಿದ್ದಾರೆ. ಜನಸಂಖ್ಯಾಶಾಸ್ತ್ರದ ಅಧ್ಯಯನಗಳೇ ಈ ವಿಚಾರ ಹೇಳಿದೆ. ಸಮುದಾಯದ ಫಲವತ್ತತೆ ಪ್ರಮಾಣ 2.1 ಕ್ಕಿಂತ ಕಡಿಮೆಯಾಗಬಾರದು, ಕಡಿಮೆಯಾದರೆ ಸಮುದಾಯ ಅಳಿವಿನಂಚಿಗೆ ಹೋಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಅವಳು ಹೋರಾಟಗಾರ್ತಿ, ಆತ ಯೋಧ! ದೇಶ ಕಾಯೋ ಯೋಧ ಹೀಗ್ಯಾಕೆ ಮಾಡಿದ?
ಇನ್ನು ಭಾಗವತ್ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದು, 3 ಮಕ್ಕಳನ್ನು ಮಾಡಿಕೊಳ್ಳುವ ದಂಪತಿಗೆ ನಗದು ಪುರಸ್ಕಾರ ಕೊಡುತ್ತಾರಾ? ದಂಪತಿಗೆ ಪ್ರತಿ ತಿಂಗಳು 1,500 ರೂ. ಕೊಡುತ್ತಾರಾ ಎಂದು ಪ್ರಶ್ನೆ ಮಾಡಿದ್ದಾರೆ