BSNLಗೆ ಠಕ್ಕರ್, ಜಿಯೋಗೆ ನಡುಕ, ಏರ್‌ಟೆಲ್‌ನಿಂದ 99 ರೂ.ಗೆ ಅನ್‌ಲಿಮಿಟೆಡ್ ಡೇಟಾ ಆಫರ್!
ಬಿಎಸ್ಎನ್ಎಲ್, ಜಿಯೋ, ವೋಡಾಫೋನ್ ಐಡಿಯಾಗೆ ಏರ್‌ಟೆಲ್ ಆಘಾತ ನೀಡಿದೆ. ಕೇವಲ 99 ರೂಪಾಯಿ ರೀಚಾರ್ಜ್ ಪ್ಲಾನ್ ಘೋಷಿಸಿದೆ. ವಿಶೇಷ ಅಂದರೆ ಇದು ಅನ್‌ಲಿಮಿಟೆಡ್ ಡೇಟಾ ಆಫರ್. ಅತೀ ಕಡಿಮೆ ಬೆಲೆಗೆ ಎಷ್ಟು ಬೇಕಾದರೂ ಡೇಟಾ ಬಳಸಬಹುದು.
ಬಿಎಸ್ಎನ್ಎಲ್ ಕಡಿಮೆ ರೀಚಾರ್ಜ್ ಪ್ಲಾನ್ ಮೂಲಕ ಗ್ರಾಹಕರ ಸೆಳೆಯುತ್ತಿದ್ದಂತೆ ಏರ್ಟೆಲ್, ಜಿಯೋ ಸೇರಿ ಖಾಸಗಿ ಟೆಲಿಕಾಂ ಕಂಪನಿಗಳಿಗೆ ನಡುಕ ಶುರುವಾಗಿದೆ. ಹೀಗಾಗಿ ಹಲವು ಆಫರ್ ಮೂಲಕ ಗ್ರಾಹಕರ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದೀಗ ಏರ್‌ಟೆಲ್ ಅತೀ ಕಡಿಮೆ ಬೆಲೆಯ ಆಫರ್ ಬಿಡುಗಡೆ ಮಾಡುವ ಮೂಲಕ ರಿಲಯನ್ಸ್ ಜಿಯೋ, ಬಿಎಸ್ಎನ್ಎಲ್, ವೋಡಾಫೋನ್ ಐಡಿಯಾಗೆ ಠಕ್ಕರ್ ನೀಡಿದೆ.
ಬೆಲೆ ಏರಿಕೆ ಬಿಸಿ ಏರ್ಟೆಲ್‌ಗೂ ತಟ್ಟಿದೆ. ಹೀಗಾಗಿ ಇದೀಗ ಏರ್‌ಟೆಲ್ ಎಚ್ಚರಿಕೆ ಹೆಜ್ಜೆ ಇಡುತ್ತಿದೆ. ಇಷ್ಟೇ ಅಲ್ಲ ಗ್ರಾಹಕರನ್ನು ಉಳಿಸಿಕೊಂಡು ಬೇರೆ ಟೆಲಿಕಾಂ ಗ್ರಾಹಕರನ್ನು ಸೆಳೆಯಲು ಅತೀ ಕಡಿಮೆ ಬೆಲೆಯ ಪ್ಲಾನ್ ಘೋಷಿಸಿದೆ. ಇದು ಕೇವಲ 99 ರೂಪಾಯಿ ರೀಚಾರ್ಜ್ ಪ್ಲಾನ್. ಆದರೆ ಸೌಲಭ್ಯ ಹೆಚ್ಚು. ಕಾರಣ 99 ರೂಪಾಯಿ ರೀಚಾರ್ಜ್ ಪ್ಲಾನ್ ಆ್ಯಕ್ಟೀವೇಟ್ ಮಾಡಿದರೆ ನಿಮಗೆ ಅನ್‌ಲಿಮಿಟೆಡ್ ಡೇಟಾ ಸಿಗಲಿದೆ.
ಬಳಕೆದಾರರು ಈ 99 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಿದರೆ ಪ್ರತಿ ದಿನ 20 ಜಿಬಿ ಡೇಟಾ ಬಳಕೆ ಮಾಡಬಹುದು. ಬಳಿಕ ಡೇಟಾ ಸ್ಪೀಡ್ ಇಳಿಕೆಯಾಗಲಿದೆ. ಆದರೆ ಈ ಪ್ಲಾನ್ ವ್ಯಾಲಿಟಿಡಿ 2 ದಿನ ಮಾತ್ರ. ಅಂದರೆ 2 ದಿನ ಒಟ್ಟು 40 ಜಿಬಿ ಉಚಿತವಾಗಿ ಸಿಗಲಿದೆ. ಕೇವಲ 99 ರೂಪಾಯಿಗೆ 40 ಜಿಬಿ ಡೇಟಾ ಸಿಗಲಿದೆ. ಬಳಕೆದಾರರು ಹೈಸ್ಪೀಡ್ ಇಂಟರ್ನೆಟ್ ಸೇವೆಯನ್ನು ಎಂಜಾಯ್ ಮಾಡಬಹುದು.
ಈ 99 ರೂಪಾಯಿ ರೀಚಾರ್ಜ್ ಪ್ಲಾನ್‌ನ್ನು ಬಳಕೆದಾರರು ತಮ್ಮ ಇರುವ ಪ್ಲಾನ್‌ಗೆ ಆ್ಯಡ್ ಮಾಡಿಕೊಳ್ಳಬಹುದು. ಅಂದರೆ ಈಗಾಗಲೇ ತಿಂಗಳ ಅಥವ ಹೆಚ್ಚುವರಿ ದಿನದ ರೀಚಾರ್ಜ್ ಮಾಡಿಕೊಂಡಿದ್ದಲ್ಲಿ, 99 ರೂಪಾಯಿ ರೀಚಾರ್ಜ್ ಮಾಡಿದರೆ ಹೆಚ್ಚುವರಿಯಾಗಿ ಉಚಿತ ಡೇಟಾ ಸಿಗಲಿದೆ. ಇದರಿಂದ ಡೇಟಾ ಹೆಚ್ಚು ಬಳಕೆ ಮಾಡುವ ಗ್ರಾಹಕರು, ಅಥವಾ ವಿಶೇಷ ಸಂದರ್ಭಗಳಲ್ಲಿ ಹೆಚ್ಚು ಡೇಟಾ ಅವಶ್ಯಕತೆ ಇದ್ದರೆ ಈ ಪ್ಲಾನ್ ಸೂಕ್ತವಾಗಲಿದೆ.
ಇಂಟರ್ನೆಟ್ ಬಳಕೆದಾರರ ಗಮನದಲ್ಲಿಟ್ಟುಕೊಂಡು ಏರ್‌ಟೆಲ್ ಈ ಹೊಸ ಪ್ಲಾನ್ ಜಾರಿಗೆ ತಂದಿದೆ. ಇದರಿಂದ ಬಳಕೆದಾರರು ಉಚಿತವಾಗಿ ಹಾಗೂ ಯಥೇಚ್ಚವಾಗಿ ಡೇಟಾ ಬಳಕೆ ಮಾಡಬಹುದು. ಹೊಸ ಪ್ಲಾನ್ ಮೂಲಕ ಏರ್‌ಟೆಲ್ ಟೆಲಿಕಾಂ ಮಾರುಕಟ್ಟೆಯಲ್ಲಿ ಮತ್ತೆ ಅಬ್ಬರಿಸಲು ಸಜ್ಜಾಗಿದೆ. ಆದರೆ ಪ್ಪತಿಸ್ಪರ್ಧಿಗಳು ಇದೇ ರೀತಿಯ ಪ್ಲಾನ್ ಬಿಡುಗಡೆಗೆ ಸಜ್ಜಾಗಿದೆ.