Asianet Suvarna News Asianet Suvarna News

ಕೊರೋನಾದಿಂದ 2 ವರ್ಷ ರಕ್ಷಣೆ ನೀಡುತ್ತೆ ಈ ಲಸಿಕೆ!

ಕೊರೋನಾದಿಂದ 2 ವರ್ಷ ರಕ್ಷಣೆ ನೀಡುತ್ತೆ ರಷ್ಯಾ ಲಸಿಕೆ| ಫೈಝರ್‌ ಲಸಿಕೆಯಲ್ಲಿ 5 ತಿಂಗಳು ಸುರಕ್ಷೆ| ಸ್ಪುಟ್ನಿಕ್‌ ಲಸಿಕೆ ತಯಾರಿಕಾ ಕಂಪನಿ ಹೇಳಿಕೆ

Developers say Sputnik V likely to give 2 years Covid 19 immunity pod
Author
Bangalore, First Published Dec 16, 2020, 7:29 AM IST

ನವದೆಹಲಿ(ಡಿ.16): ಫೈಝರ್‌ ಹಾಗೂ ಬಯೋಎನ್‌ಟೆಕ್‌ ಕಂಪನಿಗಳು ಅಭಿವೃದ್ಧಿಪಡಿಸಿರುವ ಕೊರೋನಾ ಲಸಿಕೆ ಕೇವಲ 4-5 ತಿಂಗಳುಗಳ ಕಾಲ ಕೊರೋನಾದಿಂದ ರಕ್ಷಣೆ ಒದಗಿಸಿದರೆ, ರಷ್ಯಾದ ಸ್ಪುಟ್ನಿಕ್‌-5 ಲಸಿಕೆ ಬರೋಬ್ಬರಿ 2 ವರ್ಷಗಳ ಕಾಲ ವೈರಸ್‌ನಿಂದ ಸುರಕ್ಷೆಯನ್ನು ನೀಡುತ್ತದೆ ಎಂದು ಅದನ್ನು ತಯಾರಿಸಿರುವ ಗಾಮಲೆಯಾ ಸಂಶೋಧನಾ ಕೇಂದ್ರ ಹೇಳಿಕೊಂಡಿದೆ.

ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ, ಹೀಗಿದೆ ಕೇಂದ್ರದ ಮಾರ್ಗಸೂಚಿ!

ಬ್ರಿಟನ್‌ ಹಾಗೂ ಅಮೆರಿಕದಲ್ಲಿ ಫೈಝರ್‌ ಕಂಪನಿಯ ಮಾನವ ಬಳಕೆ ಆರಂಭವಾಗಿರುವ ಹೊತ್ತಿನಲ್ಲೇ ರಷ್ಯಾ ಕಂಪನಿ ಈ ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ. ‘ನಮ್ಮ ಲಸಿಕೆಯನ್ನು ಎಬೋಲಾ ಲಸಿಕೆ ಆಧರಿಸಿ ಅಭಿವೃದ್ಧಿಪಡಿಸಲಾಗಿದೆ. ಇದು ಕನಿಷ್ಠ 2 ವರ್ಷ, ಅದಕ್ಕಿಂತ ಹೆಚ್ಚು ರಕ್ಷಣೆಯನ್ನು ನೀಡುತ್ತದೆ. ಆದರೆ ಫೈಝರ್‌ ಲಸಿಕೆ 4ರಿಂದ 5 ತಿಂಗಳು ರಕ್ಷಣೆ ನೀಡಬಲ್ಲದು’ ಎಂದು ಗಾಮಲೆಯಾ ಸಂಶೋಧನಾ ಕೇಂದ್ರದ ಮುಖ್ಯಸ್ಥ ಅಲೆಕ್ಸಾಂಡರ್‌ ಗಿಂಟ್ಸ್‌ಬರ್ಗ್‌ ತಿಳಿಸಿದ್ದಾರೆ.

ಕೊರೋನಾ ಲಸಿಕೆ ಖರೀದಿಯಲ್ಲಿ ದಿಢೀರ್ 10 ಕೋಟಿ ಇಳಿಕೆ!

ಸ್ಪುಟ್ನಿಕ್‌ ಲಸಿಕೆಯನ್ನು ರಷ್ಯಾದಲ್ಲಿ ಈಗಾಗಲೇ ಮಾನವರಿಗೆ ನೀಡಲಾಗುತ್ತಿದೆ. ಆದರೆ ಈ ಲಸಿಕೆಯ ಮೂರು ಹಾಗೂ ಕೊನೆಯ ಹಂತದ ಪ್ರಯೋಗ ಇನ್ನೂ ನಡೆಯುತ್ತಿದೆ.

Follow Us:
Download App:
  • android
  • ios