ನವದೆಹಲಿ(ಡಿ.15): ಇತ್ತೀಚಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸಿದ್ಧಪಡಿಸಿದ ಮತದಾರರ ಪಟ್ಟಿಯನ್ನು ಆಧರಿಸಿ ದೇಶದಲ್ಲಿ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ಪಡೆಯುವ 50 ವರ್ಷಕ್ಕಿಂತ ಮೇಲ್ಪಟ್ಟ ಜನರ ಯಾದಿ ತಯಾರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜೊತೆಗೆ, ಲಸಿಕೆ ಪಡೆಯಲು ಕೋ-ವಿನ್ ವೆಬ್‌ಸೈಟಿನಲ್ಲಿ ಜನರು ನೋಂದಣಿ ಮಾಡಿಕೊಳ್ಳುವುದಕ್ಕೂ ಮತದಾನ ಮಾಡಲು ತೋರಿಸಬಹುದಾದ 12 ದಾಖಲೆಗಳನ್ನೇ ಪರಿಗಣಿಸಲು ಮುಂದಾಗಿದೆ. ಈ ಸಂಬಂಧ ಕೇಂದ್ರ ಬಿಡುಗಡೆ ಮಾಡಿರುವ ಮಾರ್ಗ ಸೂಚಿ ಹೀಗಿದೆ.

"

1 ಮೊದಲ ಹಂತದಲ್ಲಿ ಲಸಿಕೆ ಪಡೆಯುವವರಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕೆಲಸ ಮಾಡುವವರು, ಹೈ-ರಿಸ್‌ಕ್ ವರ್ಗದವರು, ಅನಾರೋಗ್ಯ ವುಳ್ಳವರು ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟವರು ಸೇರಿ ಒಟ್ಟು 30 ಕೋಟಿ ಜನರಿರುತ್ತಾರೆ. ಇವರಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆಯೇ ಹೆಚ್ಚಿರುತ್ತದೆ. ಅವರನ್ನು ಇತ್ತೀಚಿನ ಮತದಾರರ ಪಟ್ಟಿ ನೋಡಿ ಆಯ್ಕೆ ಮಾಡಲಾಗುತ್ತದೆ.

2 ಕೋ-ವಿನ್ ವೆಬ್‌ಸೈಟಿನಲ್ಲಿ ಮೊದಲೇ ನೋಂದಣಿ ಮಾಡಿಕೊಂಡವರಿಗೆ ಮಾತ್ರ ಲಸಿಕೆ ವಿತರಣಾ ಕೇಂದ್ರದಲ್ಲಿ ಲಸಿಕೆ ಸಿಗುತ್ತದೆ. ನೇರವಾಗಿ ಕೇಂದ್ರಕ್ಕೆ ಹೋದರೆ ಲಸಿಕೆ ನೀಡುವುದಿಲ್ಲ

3 ವೆಬ್‌ಸೈಟಿನಲ್ಲಿ ನೋಂದಣಿ ಮಾಡಿ ಕೊಳ್ಳಲು ವೋಟರ್ ಐಡಿ, ಆಧಾರ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಪಿಂಚಣಿ ದಾಖಲೆ ಇತ್ಯಾದಿ ಚುನಾವಣೆಯಲ್ಲಿ ಪರಿಗಣಿಸುವ 12 ದಾಖಲೆಗಳನ್ನು ಬಳಸಬಹುದು.

4 ಪ್ರತಿ ಲಸಿಕಾ ಕೇಂದ್ರದಲ್ಲಿ ಒಂದು ದಿನಕ್ಕೆ 100 ಜನರಿಗೆ ಲಸಿಕೆ ನೀಡಲಾಗುತ್ತದೆ. ಅದಕ್ಕಾಗಿ ಅಲ್ಲಿ 5 ಸಿಬ್ಬಂದಿ ಇರುತ್ತಾರೆ. ಲಸಿಕೆ ಹೆಚ್ಚು ಲಭ್ಯವಿದ್ದರೆ ಮತ್ತು ಕೇಂದ್ರದಲ್ಲಿ ಹೆಚ್ಚು ಜಾಗವಿದ್ದರೆ 6 ಸಿಬ್ಬಂದಿಯನ್ನು ನಿಯೋಜಿಸಿ ದಿನಕ್ಕೆ 200 ಜನರಿಗೆ ಲಸಿಕೆ ನೀಡಬಹುದು.

ಹತ್ತೂವರೆ ತಿಂಗಳು, ಒಂದು ಕೋಟಿ ಸನಿಹಕ್ಕೆ ಸೋಂಕಿತರ ಸಂಖ್ಯೆ!

5 ಲಸಿಕೆಯ ಮೇಲೆ ಎಕ್‌ಸ್ಪೈರಿ ಡೇಟ್ ಇಲ್ಲದೇ ಇರಬಹುದು. ಅದರ ಬಗ್ಗೆ ಯೋಚಿಸುವ ಅಗತ್ಯವಿಲ್ಲ.

6 ಒಂದು ಜಿಲ್ಲೆಗೆ ಒಂದೇ ಕಂಪನಿಯ ಲಸಿಕೆ ಪೂರೈಕೆಯಾಗುವಂತೆ ರಾಜ್ಯ ಸರ್ಕಾರ ನೋಡಿಕೊಳ್ಳಬೇಕು. ದಿನದ ಅಂತ್ಯಕ್ಕೆ ಉಳಿಯುವ ಲಸಿಕೆಯನ್ನು ಸರಿಯಾಗಿ ಕೋಲ್‌ಡ್-ಪ್ಯಾಕ್ ಮಾಡಿ ಶೈತ್ಯಾಗಾರಕ್ಕೆ ಕಳುಹಿಸಬೇಕು.

ಕೊರೋನಾ ಲಸಿಕೆ ಖರೀದಿಯಲ್ಲಿ ದಿಢೀರ್ 10 ಕೋಟಿ ಇಳಿಕೆ!

7 ಲಸಿಕೆ ನೀಡಿದ ಮೇಲೆ ಜನರನ್ನು 30 ನಿಮಿಷ ಲಸಿಕೆ ವಿತರಣಾ ಕೇಂದ್ರದಲ್ಲೇ ಇರಿಸಿಕೊಂಡು, ಅವರ ಆರೋಗ್ಯದಲ್ಲೇನೂ ವ್ಯತ್ಯಾಸವಾಗಿಲ್ಲವೆಂಬುದನ್ನು ಖಾತ್ರಿಪಡಿಸಿಕೊಂಡೇ ಮನೆಗೆ ಕಳುಹಿಸಬೇಕು.

8 ಮೊದಲ ಹಂತದಲ್ಲಿ ಲಸಿಕೆ ಪಡೆಯುವ 50 ವರ್ಷಕ್ಕಿಂತ ಮೇಲ್ಪಟ್ಟವರನ್ನು ಗುರುತಿ ಸುವಾಗ 60 ವರ್ಷ ಮೇಲ್ಪಟ್ಟವರು ಹಾಗೂ 50-60 ವರ್ಷ ವಯೋಮಾನದವರು ಎಂದು ವಿಭಾಗ ಮಾಡಬಹುದು.