Asianet Suvarna News Asianet Suvarna News

ಮನೆ ಕೆಡವುತ್ತಿರುವಾಗ ಮಲಗುವ ಕೋಣೆಯ ಗೋಡೆಯೊಳಗೆ ಪತ್ತೆಯಾಯ್ತು 5 ಕಾಳಿಂಗ ಸರ್ಪ, ಬಿಚ್ಚಿಬಿದ್ದ ಶಿಕ್ಷಕ

ಬಿಹಾರದಲ್ಲಿ  ಶಿಕ್ಷಕನೋರ್ವ  ತನ್ನ ಮನೆ ಕಡೆವುತ್ತಿದ್ದ ಸಂದರ್ಭದಲ್ಲಿ ಗೋಡೆಯಲ್ಲಿ ಜೀವಿಸುತ್ತಿದ್ದ ಐದು  ಕಾಳಿಂಗ ಸರ್ಪ ಇರುವುದು ಕಂಡು ಬೆಚ್ಚಿಬಿದ್ದಿದ್ದಾನೆ. 

Man finds 5 King Cobras in his bedroom while demolishing house in bihar gow
Author
First Published Feb 12, 2024, 4:03 PM IST

ಮನುಷ್ಯನಿಗೆ ಹಾವುಗಳು ಎಂದರೆ ಅತ್ಯಂತ ಅಪಾಯಕಾರಿ ಸರೀಸೃಪ ಜೀವಿ ಎಂಬ ಭಯ ಇದ್ದೇ ಇದೆ. ಪ್ರಪಂಚದಲ್ಲಿ 3 ಸಾವಿರಕ್ಕೂ ಅಧಿಕ ವಿವಿಧ ಹಾವುಗಳಿದ್ದು  ಇದರಲ್ಲಿ ಕೆಲ ಹಾವುಗಳು ಅತ್ಯಂತ ಅಪಾಯಕಾರಿ ಎಂದೆನಿಸಿಕೊಂಡಿದೆ. ಅಂತಹದರಲ್ಲಿ ನಾಗರಹಾವು ಕೂಡ ಒಂದು ಬಿಹಾರದಲ್ಲಿ  ಇತ್ತೀಚೆಗೆ ಬಬನ್ ಕುಮಾರ್ ಎಂಬ ಸ್ಥಳೀಯ ಶಿಕ್ಷಕ ತನ್ನ ಮನೆಯಲ್ಲಿ ಐದು  ಕಾಳಿಂಗ ಸರ್ಪ ಇರುವುದು ಕಂಡು ಬೆಚ್ಚಿಬಿದ್ದಿದ್ದಾನೆ.

ಬಬನ್ ಅವರು ಬಿಹಾರದ ಡುಮ್ರಿ ಅಡ್ಡಾದ ಚಾಪ್ರಾ ಸದರ್ ಬ್ಲಾಕ್ ಕಚೇರಿಯ ಸಮೀಪ ಇದ್ದು, ತಮ್ಮ ಮನೆ ನವೀಕರಿಸಲು ಮುಂದಾದಾಗ ತನ್ನ ಬೆಡ್‌ ರೋಮ್‌ನಲ್ಲಿ ಬರೋಬ್ಬರಿ 5 ಕಾಳಿಂಗ ಸರ್ಪ ಕಂಡು ಬೆಚ್ಚಿಬಿದ್ದಿದ್ದಾನೆ.  ಕಟ್ಟಡ ಕಾರ್ಮಿಕನು ಮನೆಯ ಮಹಡಿಯನ್ನು ಒಡೆಯುತ್ತಿದ್ದಾಗ, ಅಲ್ಲೇ ಇದ್ದ ಕಾಳಿಂಗ ಸರ್ಪದ ಮೇಲೆ ಎಡವಿ ಬಿದ್ದನು. ಬಿದ್ದ ಮೇಲೆ ನೆಲದ ಕೆಳಗೆ ಇನ್ನೂ ಐದು ನಾಗರಹಾವುಗಳು ಇದ್ದಿದ್ದನ್ನು  ಕಂಡು ಎಲ್ಲರೂ ಆಘಾತಕ್ಕೊಳಗಾದರು. ಅತ್ಯಂತ ಭಯಾನಕ ವಿಷಯವೆಂದರೆ ಈ ವಿಷಪೂರಿತ ಕಾಳಿಂದ ಸರ್ಪಗಳು ಪತ್ತೆಯಾದ ಸ್ಥಳ ಬಾಬನ್ ಮಲಗುವ ಕೋಣೆಯಾಗಿತ್ತು.  ಗೋಡೆಗಳ ಒಳಗೆ ಇದು ಜೀವಿಸುತ್ತಿತ್ತು.

ಬರೋಬ್ಬರಿ 1400 ಉದ್ಯೋಗಿಗಳನ್ನು ಮನೆಗೆ ಕಳುಹಿಸುತ್ತಿದೆ ಸ್ಪೈಸ್‌ ಜೆಟ್ ...

ವಿಷಯ ತಿಳಿದು ಸ್ಥಳಕ್ಕೆ ಬಂದ ಹಾವು ಹಿಡಿಯುವ ವ್ಯಕ್ತಿ  ಮನೀಶ್ ಕುಮಾರ್ ಮತ್ತು ಅವರ ಸಿಬ್ಬಂದಿ ಎಲ್ಲಾ ಹಾವುಗಳನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ  ಬಿಟ್ಟಿದ್ದಾರೆ.  ನಾಗರಹಾವುಗಳನ್ನು ಸುರಕ್ಷಿತವಾಗಿ ಹೊರತೆಗೆಯಲು ಮಹಡಿಯ ಕೆಲವು ಗಮನಾರ್ಹ ಭಾಗವನ್ನು ಒಡೆಯುವ ಅಗತ್ಯತತೆ ಇತ್ತು. ಜೊತೆಗೆ ಮನೀಶ್ ಮತ್ತು ಆತನ ಸಿಬ್ಬಂದಿಗಳು ಹಾವುಗಳನ್ನು ರಕ್ಷಿಸಲು ತುಂಬಾ ಹರಸಾಹಸ ಪಟ್ಟರು.  ವಿಷಯ ತಿಳಿದ ಸ್ಥಳೀಯರು ಸ್ಥಳಕ್ಕೆ ಜಮಾಯಿಸಿ ತಮ್ಮ ಮೊಬೈಲ್‌ನಲ್ಲಿ ಈ ರೋಚಕ ದೃಶ್ಯವನ್ನು ಸೆರೆ ಹಿಡಿದರು.

ಅತೀ ಸಣ್ಣ ವಯಸ್ಸಿಗೆ ಬಾಲಿವುಡ್‌ ಸುಂದರ ನಟಿಯರ ಸಾವು, ಇಂದಿಗೂ ನಿಗೂಢ ಎ ...

ನಾಗರಹಾವು ಮತ್ತು  ಕಾಳಿಂಗ ಸರ್ಪ ಒಂದಕ್ಕೊಂದು ಬಹಳ ಭಿನ್ನವಾಗಿರುತ್ತವೆ. ಕಿಂಗ್ ಕೋಬ್ರಾಸ್ 10-20 ಪೌಂಡ್ ತೂಕ ಮತ್ತು 12-18 ಅಡಿ ಉದ್ದವಿರುತ್ತದೆ.  ನಾಗರಹಾವು 5-10 ಪೌಂಡ್ ತೂಕ ಮತ್ತು 2-10 ಅಡಿ ಉದ್ದ ಇರುತ್ತದೆ. ಕಿಂಗ್ ಕೋಬ್ರಾಗಳು ನಾಲ್ಕು ಅಡಿ ಎತ್ತರದಲ್ಲಿ ನಿಂತು ಶತ್ರುಗಳನ್ನು  ಬೇಟೆಯಾಡುತ್ತದೆ. ಅವುಗಳ ಪ್ರಬಲವಾದ ವಿಷ ಹೊಂದಿರುತ್ತದೆ, ಈ ಹಾವುಗಳು ಕೇವಲ ಒಂದು ಬಾರಿ ಕಚ್ಚಿ ಆನೆಯನ್ನು ಕೊಲ್ಲುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ನಾಗರಹಾವುಗಳು ವಿಶಾಲ ವ್ಯಾಪ್ತಿಯ ಪರಿಸರದಲ್ಲಿ ವಾಸಿಸುತ್ತವೆ.  ಮಾತ್ರವಲ್ಲ ಇತರ ಹಾವುಗಳನ್ನು ತಿನ್ನುವುದಿಲ್ಲ ಮತ್ತು ವಿಷಪೂರಿತವಾಗಿವೆ.

Follow Us:
Download App:
  • android
  • ios