ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್‌ ಭೇಟಿ ದಿನವೇ, ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಯುರೋಪಿಯನ್‌ ಸಂಸತ್‌ ಗೊತ್ತುವಳಿ ಅಂಗೀಕರಿಸಿದೆ.

ಲಂಡನ್‌: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಫ್ರಾನ್ಸ್‌ ಭೇಟಿ ದಿನವೇ, ಭಾರತದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಆರೋಪಿಸಿ ಯುರೋಪಿಯನ್‌ ಸಂಸತ್‌ ಗೊತ್ತುವಳಿ ಅಂಗೀಕರಿಸಿದೆ. ವಿಶೇಷವೆಂದರೆ ಯುರೋಪಿಯನ್‌ ಒಕ್ಕೂಟದ ಸಂಸತ್‌ ಇರುವುದು ಫ್ರಾನ್ಸ್‌ನ ಸ್ಟ್ರಾಸ್‌ಬರ್ಗ್‌ನಲ್ಲಿ. ಭಾರತದಲ್ಲಿ ಅದರಲ್ಲೂ ವಿಶೇಷವಾಗಿ ಇತ್ತೀಚೆಗೆ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನು ಪ್ರಸ್ತಾಪಿಸಲಾಗಿದೆ. ಜೊತೆಗೆ ಜನಾಂಗೀಯ ಮತ್ತು ಧಾರ್ಮಿಕ ಹಿಂಸಾಚಾರದ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರನ್ನು ರಕ್ಷಿಸಬೇಕು ಎಂದು ಗೊತ್ತುವಳಿಯಲ್ಲಿ ಅಂಗೀಕರಿಸಲಾಗಿದೆ.

ಆದರೆ ಯುರೋಪಿಯನ್‌ ಸಂಸತ್‌ನ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್‌ ಬಗ್ಚಿ,‘ಭಾರತದ ಆಂತರಿಕ ವಿಷಯದಲ್ಲಿ ಬಾಹ್ಯ ಶಕ್ತಿಗಳ ಹಸ್ತಕ್ಷೇಪವನ್ನು ಒಪ್ಪಲಾಗದು. ಇದು ಸ್ವೀಕಾರಾರ್ಹವಲ್ಲ ಮತ್ತು ವಸಾಹತುಶಾಹಿ ಮನಸ್ಥಿತಿಗೆ ಉದಾಹರಣೆ’ ಎಂದು ಕಿಡಿಕಾರಿದೆ. ಭಾರತದ ವಿಷಯದಲ್ಲಿ ತಲೆಹಾಕುವ ಬದಲು ಯುರೋಪಿಯನ್‌ ಸಂಸತ್‌ ತನ್ನ ಶಕ್ತಿಯನ್ನು ತನ್ನ ಆಂತರಿಕ ವಿಷಯಗಳ ನಿರ್ವಹಣೆಗೆ ಬಳಸುವುದು ಒಳಿತು ಎಂದು ಸಲಹೆ ನೀಡಿದೆ.

ಮೋದಿ ಫ್ರಾನ್ಸ್‌ ಭೇಟಿಯಲ್ಲಿ 85000 ಕೋಟಿ ರಕ್ಷಣಾ ಒಪ್ಪಂದ?

ಪ್ಯಾರಿಸ್‌ಗೆ ಬಂದಿಳಿದ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಿದ ಫ್ರಾನ್ಸ್‌ ಪ್ರಧಾನಿ!

ಫ್ರಾನ್ಸ್‌ ಪ್ರವಾಸ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅದ್ಧೂರಿ ಸ್ವಾಗತ ನೀಡಲಾಗಿದೆ. ಪ್ಯಾರಿಸ್‌ಗೆ ಬಂದಿಳಿದ ಮೋದಿಗೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಕೋರಲಾಗಿದೆ. ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೊರ್ನೆ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಮೋದಿಯನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಫ್ರಾನ್ಸ್ ಸೇನಾ ತುಕಡಿಗಳು ಮೋದಿಗೆ ಗೌರವ ನೀಡಿದೆ. ಇತ್ತ ಪ್ಯಾರಿಸ್ ಹೊಟೆಲ್ ಸುತ್ತ ಅನಿವಾಸಿ ಭಾರತೀಯರು ಮೋದಿ ಮೋದಿ ಎಂದು ಜಯಘೋಷ ಹಾಕಿದ್ದಾರೆ. ಇಂದು ಮೋದಿಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುಯೆಲ್ ಮ್ಯಾಕ್ರೋನ್ ಔತಣಕೂಟ ಆಯೋಜಿಸಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ರಾಷ್ಟ್ರೀಯ ದಿನ ಬಾಸ್ಟಿಲ್ ದಿನಾಚರಣೆಯಲ್ಲಿ ವಿಶೇಷ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಈ ದಿನಾಚರಣೆಯಲ್ಲಿ ಭಾರತೀಯ ವಾಯುಪಡೆಯ ವಿಮಾನವು ವೈಮಾನಿಕ ಪ್ರದರ್ಶನ ನೀಡಲಿದೆ. ಮತ್ತೊಂದು ವಿಶೇಷತೆ ಎಂದರೆ ಭಾರತ ಹಾಗೂ ಫ್ರಾನ್ಸ್ ಪಾಲುದಾರಿಗೆ 25ನೇ ವಾರ್ಷಿಕೋತ್ಸವದ ಸಂಭ್ರಮ. ಭಾರತ ಹಾಗೂ ಫ್ರಾನ್ಸ್ ರಕ್ಷಣೆ, ವ್ಯಾಪಾರ, ಹೂಡಿಕೆ, ಶಿಕ್ಷಣ, ಬಾಹ್ಯಾಕಾಶ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಎರಡು ದಿನದ ಫ್ರಾನ್ಸ್ ಭೇಟಿಯಲ್ಲಿ ಹಲವು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 2022ರಲ್ಲಿ ಫ್ರಾನ್ಸ್‌ಗೆ ನನ್ನ ಕೊನೆಯ ಅಧಿಕೃತ ಭೇಟಿಯ ನಂತರ,ಮೇ 2023ರಲ್ಲಿ ಜಪಾನ್‌ನ ಹಿರೋಷಿಮಾದಲ್ಲಿ G-7 ಶೃಂಗಸಭೆಯಲ್ಲಿ ಅಧ್ಯಕ್ಷ ಮ್ಯಾಕ್ರಾನ್ ಭೇಟಿ ಮಾಡುವ ಅವಕಾಶ ನನಗೆ ಹಲವಾರು ಬಾರಿ ಸಿಕ್ಕಿತ್ತು. ಗೌರವಾನ್ವಿತ ಫ್ರೆಂಚ್ ನಾಯಕರೊಂದಿಗೆ ನಾನು ಸಂವಾದ ನಡೆಸಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಪ್ರವಾಸಕ್ಕೂ ಮುನ್ನ ಹೇಳಿದ್ದರು. ಎಲಿಸಬೆತ್ ಬೋರ್ನ್, ಫ್ರಾನ್ಸ್ ಪ್ರಧಾನ ಮಂತ್ರಿ ಗೌರವಾನ್ವಿತ ಸೆನೆಟ್ ಅಧ್ಯಕ್ಷ ಗೆರಾರ್ಡ್ ಲಾರ್ಚರ್, ಮತ್ತು ರಾಷ್ಟ್ರೀಯ ಅಸೆಂಬ್ಲಿಯ ಅಧ್ಯಕ್ಷರಾದ ಯೆಲ್ ಬ್ರೌನ್ ಪಿವೆಟ್ ಭೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದು ಮೋದಿ ಹೇಳಿದ್ದರು.

ಫ್ರಾನ್ಸ್‌ನಿಂದಲೇ ಗೃಹ ಸಚಿವ ಅಮಿತ್‌ ಶಾಗೆ ಪ್ರಧಾನಿ ಫೋನ್‌, ದೆಹಲಿ ಪರಿಸ್ಥಿತಿ ವಿಚಾರಿಸಿದ ಮೋದಿ!