ಸ್ಯಾಕ್ರಮೆಂಟೋ(ಆ.19): ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ‘ಡೆತ್‌ ವ್ಯಾಲಿ’ ಎಂದೇ ಕರೆಸಿಕೊಳ್ಳುವ ಫರ್ನೇಸ್‌ ಕ್ರೀಕ್‌ ಎಂಬಲ್ಲಿ ಭಾನುವಾರ ಅತ್ಯಧಿಕ 130 ಡಿಗ್ರಿ ಫ್ಯಾರನ್‌ಹೀಟ್‌ (54.4 ಡಿ.ಸೆ.) ಉಷ್ಣಾಂಶ ದಾಖಲಾಗಿದ್ದು, ಆತಂಕ ಮೂಡಿಸಿದೆ. ಇದು 89 ವರ್ಷಗಳಲ್ಲಿ ಭೂಮಿಯ ಮೇಲೆ ದಾಖಲಾದ 3ನೇ ಅತ್ಯಂತ ಗರಿಷ್ಠ ಉಷ್ಣಾಂಶವಾಗಿದೆ.

ನಾಪತ್ತೆಯಾಗಿದ್ದ ಖ್ಯಾತ ನಟಿ 6 ದಿನಗಳ ನಂತರ ಶವವಾಗಿ ಪತ್ತೆ!

ಫರ್ನೇಸ್‌ ವ್ಯಾಲಿಯಲ್ಲಿ ಉಷ್ಣಗಾಳಿ ಬೀಸುತ್ತಿದ್ದು, ಕೆಲ ದಿನಗಳಿಂದ ಉಷ್ಣತೆ ತೀವ್ರ ಪ್ರಮಾಣದಲ್ಲಿ ಏರಿದೆ. ಭಾನುವಾರ ಅಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಅದು ಆಗಸ್ಟ್‌ ತಿಂಗಳಲ್ಲಿ ಭೂಮಂಡಲದಲ್ಲಿ ದಾಖಲಾದ ಅತ್ಯಂತ ಅಧಿಕ ಉಷ್ಣಾಂಶವೆಂದು ದಾಖಲೆ ಬರೆದಿದೆ ಎಂದು ತಜ್ಞರು ಹೇಳಿದ್ದಾರೆ. ಈ ಹಿಂದೆ 1913ರಲ್ಲಿ ಹೆಚ್ಚುಕಮ್ಮಿ ಇದೇ ಸ್ಥಳದಲ್ಲಿ 56.67 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ನಂತರ 1931ರಲ್ಲಿ ಟ್ಯುನೀಶಿಯಾದಲ್ಲಿ 55 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಇವೆರಡೂ ಜುಲೈ ತಿಂಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶವಾಗಿದ್ದು, ಜಗತ್ತಿನಲ್ಲಿ ದಾಖಲಾದ ಮೊದಲನೇ ಅತಿ ಹೆಚ್ಚು ಹಾಗೂ ಎರಡನೇ ಅತಿ ಹೆಚ್ಚು ಉಷ್ಣಾಂಶ ಎಂದು ದಾಖಲೆ ಬರೆದಿವೆ.

ಭಾರೀ ಮಳೆ ಮುನ್ಸೂಚನೆ: ರಾಜ್ಯದ 10 ಜಿಲ್ಲೆಗಳಿಗೆ ಆರೆಂಜ್, ಯೆಲ್ಲೋ ಅಲರ್ಟ್!

ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚುಕಮ್ಮಿ 9 ದಶಕಗಳ ನಂತರ ಈಗ ದಾಖಲಾಗಿರುವುದು ಮೂರನೇ ಅತ್ಯಧಿಕ ಉಷ್ಣಾಂಶವಾಗಿದೆ. ಅಮೆರಿಕದ ಫೀನಿಕ್ಸ್‌, ನೆವಾಡಾ ಮುಂತಾದ ರಾಜ್ಯಗಳಲ್ಲೂ ಉಷ್ಣಾಂಶ ತೀವ್ರ ಪ್ರಮಾಣದಲ್ಲಿ ಏರಿಳಿತವಾಗುತ್ತಿದ್ದು, ಭವಿಷ್ಯದಲ್ಲಿ ಏನಾಗಬಹುದು ಎಂಬುದು ತಿಳಿಯುತ್ತಿಲ್ಲವೆಂದು ಹವಾಮಾನ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕ್ಯಾಲಿಫೋರ್ನಿಯಾದ ಫರ್ನೇಸ್‌ ಕ್ರೀಕ್‌ನಲ್ಲಿ ಈ ಹಿಂದೆಯೂ ಹಲವು ಬಾರಿ ಅತ್ಯಧಿಕ ಉಷ್ಣಾಂಶ ದಾಖಲಾಗಿದೆ. ಇಲ್ಲಿ ಉಂಟಾಗುವ ಕಾಳ್ಗಿಚ್ಚುಗಳು, ಅಟ್ಲಾಂಟಿಕ್‌ ಸಮುದ್ರದಲ್ಲಿ ಏಳುವ ಚಂಡಮಾರುತ ಮುಂತಾದ ನೈಸರ್ಗಿಕ ವಿದ್ಯಮಾನಗಳಿಂದಾಗಿ ಉಷ್ಣಾಂಶ ತೀವ್ರ ಹೆಚ್ಚುತ್ತಿರುತ್ತದೆ.