'ಗ್ಲೀ' ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದುಕೊಂಡಿದ್ದ ನಟಿ ನಯಾ ರಿವೇರಾ ಸಮುದ್ರದ ನಡುವೆ ಪುತ್ರನೊಟ್ಟಿಗೆ ಸಮಯ ಕಳೆಯಲು ಹೋಗಿ ಸಾವಿಡೀಗಾಡಿದ್ದಾರೆ. 33 ವರ್ಷದ ನಟಿಯ ಬಗ್ಗೆ ಆಕೆಯ ನಾಲ್ಕು ವರ್ಷದ ಪುತ್ರ ಹೇಳಿದ್ದೇನು?

ಜುಲೈ 8ರಂದು ಅಮೇರಿಕಾದ ಖ್ಯಾತ ನಟಿ ನಯಾ ರಿವೇರಾ ಮತ್ತು ಪುತ್ರ ಕ್ಯಾಲಿಪೋರ್ನಿಯಾದ ಪಿರೂ ಸಮುದ್ರದಲ್ಲಿ ಸಮಯ ಕಳೆಯಲು ಖಾಸಗಿ ದೋಣಿ ಬಾಡಿಗೆ ಪಡೆದೆ ವಿಹಾರ ಮಾಡುವಾಗ  ಪುತ್ರನಿಗೆ ಮಾತ್ರ ಲೈಫ್‌ ಜಾಕೆಟ್‌ ಖರೀದಿಸಿದ್ದರು ಎನ್ನಲಾಗಿದೆ. 

ಶವ ಪತ್ತೆ:

ಸಮುದ್ರದ ನಡುವೆ ದೋಣೆಯಲ್ಲಿ ಪುಟ್ಟ ಕಂದಮ್ಮ ಒಂಟಿಯಾಗಿದ್ದುದನ್ನು ಕಂಡು ಸ್ಥಳೀಯರು ರಕ್ಷಿಸಿದ್ದಾರೆ. ಆದರೆ ದೋಣಿಯಲ್ಲಿದ್ದ ನಟಿ ಕಾಣಿಯಾಗಿದ್ದರು.ರಕ್ಷಣಾ ಸಿಬ್ಬಂದಿಗಳು  ಹೆಲಿಕಾಫ್ಟರ್‌ ಬಳಸಿ ನಟಿಯನ್ನು ಹುಡುಕಲು ಆರಂಭಿಸಿದರು. 6 ದಿನಗಳ ಬಳಿಕ ನಟಿ ಶವವಾಗಿ ಪತ್ತೆಯಾಗಿದ್ದಾರೆ.

ಮಗನ ಜೊತೆ ಈಜುತ್ತಿದ್ದ ನಟಿ ಕಾಣೆ; ಸಮುದ್ರಲ್ಲಿ ಒಬ್ಬಂಟಿಯಾದ ಪುಟ್ಟ ಕಂದಮ್ಮ!

ನಟಿ ನಯಾ ದೇಹವನ್ನು ಮೆಡಿಕಲ್ ಪರೀಕ್ಷೆಗೆ ನೀಡಲಾಗಿದೆ. ಪೊಲೀಸರು ಮಾಹಿತಿ ನೀಡಿರುವ ಪ್ರಕಾರ ನಟಿ ಬೀಳುತ್ತಿದ್ದ ಪುತ್ರನನ್ನು ರಕ್ಷಿಸಲು ಹೋಗಿ ನೀರಿಗೆ ಬಿದ್ದಿದ್ದಾರೆ ಎನ್ನಲಾಗಿದೆ. 6 ದಿನಗಳ ತನಿಖೆ ಸಮಯದಲ್ಲಿ ಪುತ್ರ ಕೊನೆ ಬಾರಿ ತಾಯಿಯನ್ನು ಕಂಡ ಕ್ಷಣವನ್ನು ವರ್ಣಿಸಿದ್ದಾರೆ.

'ನೀರಿನಿಂದ ಅಮ್ಮ ನನ್ನನ್ನು ಎತ್ತಿ ಬೋಟ್ ಮೇಲೆ ಕೂರಿಸಿದರು ಆ ಮೇಲೆ ನಾನು ಹಿಂದೆ ತಿರುಗಿ ನೋಡಿದರೆ ಅಮ್ಮ ನೀರಿನಲ್ಲಿ ಮುಳುಗುತ್ತಿದ್ದರು ಆಮೇಲೆ ನೀರಿನಿಂದ ಮೇಲೆ ಬರಲಿಲ್ಲ' ಎಂದು ಹೇಳಿದ್ದಾನೆ ಎನ್ನಲಾಗಿದೆ.