ಕೊವಿಶೀಲ್ಡ್ ಡಿಸೈನ್ ಮಾಡಿದ ವ್ಯಾಕ್ಸಿನಾಲಜಿಸ್ಟ್‌ಗೆ ಗೌರವ ವಿಂಬ್ಲೆಡನ್‌ನಲ್ಲಿ ಎದ್ದು ನಿಂತು ಚಪ್ಪಾಳೆ ಗೌರವ ಕೊಟ್ಟ ಜನ

ಲಂಡನ್(ಜು.17): ವಿಂಬಲ್ಡನ್ ಪಂದ್ಯ ಸದ್ಯ ಟೆನ್ನಿಸ್ ಪ್ರಿಯರ ನೆಚ್ಚಿನ ವಿಚಾರ. ಟೆನಿಸ್ ಪ್ರಿಯರಿಗೆ ಸದ್ಯ ಇದುವೇ ಹಾಟ್ ಟಾಪಿಕ್. ಇಂತಹ ರೋಚಕ ಪಂದ್ಯ ನೋಡಲು ಜನ ಆಸಕ್ತಿಯಲ್ಲಿ ಸೇರಿದ್ದಾರೆ.

ಆದರೆ ಸಹಸ್ರ ಜನ ಕುತೂಹಲದಿಂದ ವೀಕ್ಷಿಸುತ್ತಿದ್ದ ವಿಂಬಲ್ಡನ್ ಪಂದ್ಯ ತಟ್ಟನೆ ನಿಲ್ಲಿಸಲಾಯಿತು. ಆಗ ಒಂದು ಮೈಕ್ ಎನೌನ್ಸ್‌ಮೆಂಟ್ ಕೇಳಿತು. ಗ್ಯಾಲರಿಯಲ್ಲಿದ್ದ ಅಷ್ಟೂ ಜನರ ದೃಷ್ಟಿ ಕೆಂಪು ಕೋಟ್ ಧರಿಸಿದ್ದ ಮಹಿಳೆಯತ್ತ ಸಾಗಿತು.

ವಿಂಬಲ್ಡನ್‌ ಟೆನಿಸ್ ಟೂರ್ನಿಯಲ್ಲಿ ಮ್ಯಾಚ್‌ ಫಿಕ್ಸಿಂಗ್‌ ಶಂಕೆ!

ಬಿಳಿ ಡ್ರೆಸ್‌ ಮೇಲೆ ಕೆಂಪು ಕೋಟ್ ಧರಿಸಿದ ಮಹಿಳೆ ಕೋವಿಶೀಲ್ಡ್ ಲಸಿಕೆ ವಿನ್ಯಾಸಗೊಳಿಸಿದ ಸಾರಾ ಗಿಲ್ಬರ್ಟ್. ಅವರೂ ಜನರ ಮಧ್ಯೆ ಕುಳಿತು ಆಸಕ್ತಿಯಿಂದ ಪಂದ್ಯ ವೀಕ್ಷಿಸುತ್ತಿದ್ದರು.

ವಿಂಬಲ್ಡನ್ ಪಂದ್ಯವನ್ನು ವೀಕ್ಷಿಸಲು ಬಂದಿರುವುದನ್ನು ಗಮನಿಸಿದ ಸಂಘಟಕರು ಅವರಿಗೆ ಗೌರವವನ್ನು ನೀಡಲು ಒಂದು ಕ್ಷಣ ಆಟವನ್ನು ನಿಲ್ಲಿಸಿದರು. ಆ ಕ್ಷಣ ಪ್ರತಿಯೊಬ್ಬ ವೀಕ್ಷಕ ಎದ್ದುನಿಂತು ಸಾರಾಗೆ ಚಪ್ಪಾಳೆಯ ಗೌರವ ಸಲ್ಲಿಸಿದರು.