ನಿತ್ಯ 100 ಕೇಸು ದಾಖಲಾಗುವ ಚೀನಾದಲ್ಲಿ ಮತ್ತೆ ಲಾಕ್ಡೌನ್‌ ಜಾರಿ | ಬೀಜಿಂಗ್‌ ಸುತ್ತಮುತ್ತಲಿನ ನಗರಗಳಲ್ಲಿ ಕಠಿಣ ಲಾಕ್‌ಡೌನ್‌

ಬೀಜಿಂಗ್‌(ಜ.15): ಇಡೀ ವಿಶ್ವಕ್ಕೆ ಕೊರೋನಾ ಹಬ್ಬಿಸಿದ ಚೀನಾದ ವುಹಾನ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರ ತಂಡ ಆಗಮಿಸಿದ ಬೆನ್ನಲ್ಲೇ, ಕೊರೋನಾ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ದೇಶದ ರಾಜಧಾನಿ ಬೀಜಿಂಗ್‌ ಸುತ್ತಮುತ್ತಲಿನ ಬೃಹತ್‌ ನಗರಗಳ ಮೇಲೆ ಕಠಿಣ ಲಾಕ್‌ಡೌನ್‌ ವಿಧಿಸಿದೆ.

ಶಿಝಿಯಾಝುವಾಂಗ್‌, ಕ್ಸಿಂಗ್‌ಟಾಯ್‌ ೕರಿದಂತೆ ಇನ್ನಿತರ ನಗರಗಳಲ್ಲಿ ಕಠಿಣ ಲಾಕ್‌ಡೌನ್‌ ವಿಧಿಸಲಾಗಿದ್ದು, ಈ ನಗರಗಳಲ್ಲಿ ವಾಸಿಸುತ್ತಿರುವ 2.2 ಕೋಟಿ ಜನ ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರುವಂತಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಲಾಗಿದೆ.

17ಕ್ಕೆ ಪೊಲೀಯೋ ಲಸಿಕೆ ಅಭಿಯಾನ ಇಲ್ಲ: ಪರಿಷ್ಕೃತ ಡೇಟ್ & ಡೀಟೆಲ್ಸ್ ಹೀಗಿದೆ

ಇಷ್ಟೇ ಅಲ್ಲದೆ ಈ ನಗರಗಳಲ್ಲಿ ಸಾರಿಗೆ ವ್ಯವಸ್ಥೆ, ಮದುವೆ ಸೇರಿ ಇನ್ನಿತರ ಶುಭ ಸಮಾರಂಭಗಳಷ್ಟೇ ಅಲ್ಲದೆ ಅಂತ್ಯಕ್ರಿಯೆ ಕಾರ್ಯಕ್ರಮವನ್ನೂ ಸಹ ನಡೆಸದಂತೆ ಸೂಚಿಸಲಾಗಿದೆ.

ಅಮೆರಿಕ, ಬ್ರಿಟನ್‌ ಸೇರಿದಂತೆ ಇನ್ನಿತರ ರಾಷ್ಟ್ರಗಳಲ್ಲಿ ದಿನಕ್ಕೆ 1 ಲಕ್ಷಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ. ಆದರೆ ಕಳೆದ ಕೆಲ ವಾರಗಳಿಂದ ಚೀನಾದಲ್ಲಿ ನಿತ್ಯ ಸರಾಸರಿ 109 ಮಂದಿಗೆ ಹೊಸದಾಗಿ ಸೋಂಕು ಹಬ್ಬುತ್ತಿದೆ. ಆದಾಗ್ಯೂ, ಕಠಿಣ ಲಾಕ್‌ಡೌನ್‌ ವಿಧಿಸಲಾಗಿದೆ.