54ರ ಹರೆಯದ ಸೈಬರ್ ಸೆಕ್ಯೂರಿಟಿ ತಜ್ಞ ಅಮಿತ್ ಯೊರನ್ ಕ್ಯಾನ್ಸರ್‌ಗೆ ಬಲಿ!
ಅಮೆರಿಕದ ಸೈಬರ್ ಸೆಕ್ಯೂರಿಟಿ ವಿಭಾಗ, ಟೆನೇಬಲ್ ಸೈಬರ್ ಸೆಕ್ಯೂರಿಟಿ ಸಂಸ್ಥೆಯ ಸಿಇಒ ಸೇರಿದಂತೆ ಹಲವು ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದ 54ರ ಹರೆಯದ ಅಮಿತ್ ಯೊರನ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ.
ನ್ಯೂಯಾರ್ಕ್(ಜ.06) ಖ್ಯಾತ ಸೈಬರ್ ಸೆಕ್ಯೂರಿಟಿ ತಜ್ಞ, ಟೆನೇಬಲ್ ಸೆಬರ್ ಸೆಕ್ಯೂರಿಟಿ ಸಂಸ್ಥೆ ಸಿಇಒ ಅಮಿತ್ ಯೊರನ್ ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ. 2024ರ ಮಾರ್ಚ್ ತಿಂಗಳಲ್ಲಿ ಅಮಿತ್ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವುದು ಬಹಿರಂಗವಾಗಿತ್ತು. ಆದರೆ ತಮ್ಮ ಮಹತ್ತರ ಜವಾಬ್ದಾರಿಗಳ ನಡುವೆ ಕ್ಯಾನ್ಸರ್ ಚಿಕಿತ್ಸೆ ಆರಂಭಿಸಿದ್ದು. ಡಿಸೆಂಬರ್ ವೇಳೆಗೆ ಆರೋಗ್ಯ ಸಮಸ್ಯೆ ಬಿಗಡಾಯಿಸಿದ ಕಾರಣ ಸಿಇಒ ಸ್ಥಾನದಿಂದ ಕೆಳಗಿಳಿದು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಕ್ಯಾನ್ಸರ್ ಅಂತಿಮ ಹಂತ ತಲುಪಿದ ಕಾರಣ ಚಿಕಿತ್ಸೆ ಮೂಲಕ ಗುಣಪಡಿಸಲು ಸಾಧ್ಯವಾಗಲಿಲ್ಲ. ಇದೀಗ 54ರ ಹರೆಯದ ಅಮಿತ್ ಯೊರನ್ ನಿಧನರಾಗಿದ್ದಾರೆ.
ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯೂರಿಟಿ ವಿಭಾಗದಲ್ಲಿ ಅಮಿತ್ ಯೊರನ್ ಸೇವೆ ಸಲ್ಲಿಸಿದ್ದಾರೆ. ಟೆನೇಬಲ್ ಸೈಬರ್ ಸೆಕ್ಯೂರಿಟಿ ಸಂಸ್ಥೆ ಮೂಲಕ ಸೈಬರ್ ಕ್ರೈಮ್ ಹಾಗೂ ಸೈಬರ್ ಸೆಕ್ಯೂರಿಟಿ ಕುರಿತು ಜಾಗೃತಿ ಮಾತ್ರವಲ್ಲ, ಪರಿಹಾರವನ್ನೂ ಸೂಚಿಸುತ್ತಿದ್ದರು. ಅಮಿತಿ ಯೊರನ್ ನಿಧನದ ಕುರಿತು ಟೆನೇಬಲ್ ಕಂಪನಿ ಪ್ರಕಟಣೆ ಹೊರಡಿಸಿದೆ.
ಕ್ಯಾನ್ಸರ್ ಲಸಿಕೆ ಅಭಿವೃದ್ಧಿಪಡಿಸಿದ ರಷ್ಯಾ, ಉಚಿತವಾಗಿ ವಿತರಿಸಲು ನಿರ್ಧಾರ!
ಅಮಿತ್ ಯೊರನ್ ದೂರದೃಷ್ಠಿಯ ನಾಯಕ. ಇದರ ಜೊತೆಗೆ ಅಮಿತ್ ನಾಯಕತ್ವ, ಸವಾಲುಗಳನ್ನು ಎದುರಿಸಿದ ರೀತಿ ಎಲ್ಲರಿಗೂ ಮಾದರಿಯಾಗಿದೆ. ಅಮಿತ್ ಮಾರ್ಗದರ್ಶನದಿಂದ ಟೆನೇಬಲ್ ಹಲವು ಮೈಲಿಗಲ್ಲು ಸಾಧಿಸಿದೆ.ಅವರ ನಿರ್ಧಾರಗಳು ಹಾಗೂ ನಡೆ ಎಲ್ಲರಿಗೂ ಸ್ಪೂರ್ತಿಯಾಗಿದೆ. ಅಮಿತ್ ಸ್ಥಾನ ತುಂಬಲು ಯಾರಿಂದಲೂ ಸಾಧ್ಯವಿಲ್ಲ. ಅವರ ಮಾರ್ಗದರ್ಶನ ನಮ್ಮೊಂದಿಗೆ ಇರಲಿದೆ. ಸಹೋದ್ಯಯಾಗಿ, ಗೆಳೆಯನಾಗಿ, ತಂದೆಯಾಗಿ, ಆಪ್ತನಾಗಿ ಹಿರಿಯರು, ಕಿರಿಯರೊಂದಿಗೆ ಬೆರೆದು ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಅಮಿತ್ ನಿಧನ ವಾರ್ತೆ ಹಲವರಿಗೆ ಆಘಾತ ತಂದಿದೆ. ಕಂಪನಿ ಭಾರವಾದ ಮನಸ್ಸಿನೊಂದಿಗೆ ಅಮಿತ್ ಯೊರನ್ ನೆನಪಿಸಿಕೊಳ್ಳುತ್ತಿದೆ ಎಂದು ಪ್ರಕಣೆಯಲ್ಲಿ ಹೇಳಿದೆ.
ಅಮಿತ್ ಸೈಬರ್ ಸೆಕ್ಯೂರಿಟಿ ತಜ್ಞರಾಗಿ ಚಿರಪರಿಚಿತ. ಸದ್ಯ ವಿಶ್ವವೇ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಪರಿಹಾರ ನೀಡಿದ್ದಾರೆ. ಆರ್‌ಎಸ್‌ಎ ಸೆಕ್ಯೂರಿಟಿಯಲ್ಲೂ ಜವಾಬ್ದಾರಿ ನಿರ್ವಹಿಸಿದ್ದಾರೆ. ನೆಟ್‌ವಿಟ್ನೆಸ್ ಕಂಪನಿ ಹುಟ್ಟುಹಾಕಿದ್ದ ಅಮಿತ್ ಬಳಿಕ ಟೆನೇಬಲ್ ಸಂಸ್ಥೆಯಲ್ಲಿ ಸಿಇಒ ಆಗಿ ಸೇವೆ ಆರಂಭಿಸಿದ್ದರು. 2026ರಿಂದ 2023ರ ವರೆಗೆ ಅಮಿತ್ ಟೆನೇಬಲ್ ಸಂಸ್ಥೆಯ ಸಿಇಒ ಆಗಿ ಸೇವೆ ಸಲ್ಲಿಸಿದ್ದಾರೆ. ಕಾರ್ಪೋರೇಟ್ ಹಾಗೂ ಸರ್ಕಾರಿ ಕಂಪ್ಯೂಟರ್‌ಗಳ ಸರಕ್ಷತೆಗಾಗಿ, ಸೈಬರ್ ದಾಳಿಯಿಂದ ಮುಕ್ತವಾಗಿರಲು ಸೆನ್ಸರ್ ಅಭಿವದ್ಧಿ ಪಡಿಸಿ ಕ್ರಾಂತಿ ಮಾಡಿದ್ದರು. ಸಂಭಾವ್ಯ ದಾಳಿಗಳನ್ನು ಮೊದಲೇ ಎಚ್ಚರಿಸುತ್ತಿದ್ದ ಅಮಿತ್, ಸೈಬರ್ ಸುರಕ್ಷತೆಯಲ್ಲಿ ತಜ್ಞರಾಗಿ ಹೊರಹೊಮ್ಮಿದ್ದರು.
ದೇಶದ ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದ ರಾಜ್ಯದ ಪ್ರತಿಷ್ಠಿತ ವಿವಿ!