ದೇಶದ ಅಡಿಕೆ ಬೆಳೆಗಾರರಿಗೆ ಗುಡ್ ನ್ಯೂಸ್, ಅಡಿಕೆ ಕ್ಯಾನ್ಸರ್‌ಕಾರಕ ಅಲ್ಲ ಎಂದ ರಾಜ್ಯದ ಪ್ರತಿಷ್ಠಿತ ವಿವಿ!

ನಿಟ್ಟೆ ವಿಶ್ವವಿದ್ಯಾಲಯದ ಅಧ್ಯಯನದ ಪ್ರಕಾರ, ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿಲ್ಲ. ಅಡಿಕೆ ಕ್ಯಾನ್ಸರ್ ಕಣಗಳನ್ನು ತಟಸ್ಥಗೊಳಿಸುತ್ತದೆ ಎಂದು ಅಧ್ಯಯನ ತಿಳಿಸಿದೆ.

Good news arecanut growers Nitte University says arecanut is not carcinogenic san

ಬೆಂಗಳೂರು (ಡಿ.18): ದೇಶದ ಅಡಿಕೆ ಬೆಳೆಗಾರರಿಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಅಡಿಕೆಯಲ್ಲಿ ಕ್ಯಾನ್ಸರ್‌ಕಾರಕವಾಗಬಲ್ಲ ಯಾವುದೇ ಅಂಶಗಳಿಲ್ಲ ಎಂದು ರಾಜ್ಯದ ಪ್ರತಿಷ್ಠಿತ ವಿಶ್ವವಿದ್ಯಾಲಯ ತನ್ನ ಅಧ್ಯಯನದಲ್ಲಿ ತಿಳಿಸಿದೆ. ಮಂಗಳೂರಿನ ನಿಟ್ಟೆ ವಿವಿ ತಜ್ಞರ ಅಧ್ಯಯನದಿಂದ ಇದು ಬಹಿರಂಗವಾಗಿದೆ. ಅಡಿಕೆಯಿಂದ ಕ್ಯಾನ್ಸರ್‌ ಕಣಗಳು ತಟಸ್ಥಗೊಳ್ಳುತ್ತವೆ ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ ಅಡಿಕೆ ಕ್ಯಾನ್ಸರ್ ಕಾರಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಅಡಿಕೆ ಕ್ಯಾನ್ಸರ್‌ಕಾರಕ ಎಂದಿದ್ದು ಬೆಳೆಗಾರರಲ್ಲಿ ಆತಂಕ ಕೂಡ ಮೂಡಿಸಿತ್ತು. ದೇಶದ ಸಂಸತ್ತಿನಲ್ಲೂ ಇದರ ಬಗ್ಗೆ ಚರ್ಚೆಯಾಗಿ ಬಳಿಕ ಕೇಂದ್ರ ಸರ್ಕಾರ, ಅಡಿಕೆಯ ಬಗ್ಗೆ ಸಾಕ್ಷ್ಯ ಆಧಾರಿತ ಅಧ್ಯಯನ ಮಾಡಲು ತಜ್ಷರ ತಂಡವನ್ನು ನೇಮಕ ಮಾಡಿದೆ. ಇದರ ನಡುವೆ ಕಳೆದ ಮೂರು ವರ್ಷಗಳಿಂದ ಈ ಬಗ್ಗೆ ಅಧ್ಯಯನ ನಡೆಸುತ್ತಿದ್ದ ನಿಟ್ಟೆ ವಿವಿ ತನ್ನ ವರದಿ ನೀಡಿದೆ.

ಒಟ್ಟು ನಾಲ್ಕು ವಿಭಾಗಗಳಲ್ಲಿ ನಿಟ್ಟೆ ವಿವಿಯ ತಜ್ಞರ ತಂಡ ಸಂಶೋಧನೆ ನಡೆಸಿತ್ತು. ಅಡಕೆ ಬಳಕೆಯಿಂದ ಆರೋಗ್ಯಕ್ಕೆ ಹಾನಿಯಿಲ್ಲ ಎಂದು ವರದಿ ನೀಡಲಾಗಿದೆ. ಹೆಚ್ಚು ಮಂದಿ ಅಡಿಕೆ ಜಗಿಯುವವರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಇದರ ನಡುವೆ ಕೇಂದ್ರದ ನೇತೃತ್ವದಲ್ಲಿ ಇದರ ಸಮಗ್ರ ಅಧ್ಯಯನಕ್ಕೆ ಕ್ಯಾಂಪ್ಕೋ ಒತ್ತಾಯ ಮಾಡಿದೆ. ಸಂಶೋಧನೆಗೆ ಕ್ಯಾಂಪ್ಕೊ, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ನಿಟ್ಟೆ ವಿಶ್ವವಿದ್ಯಾನಿಲಯ ಒಪ್ಪಂದ ಮಾಡಿಕೊಂಡಿತ್ತು.

ಅಡಿಕೆಯಿಂದ ಆರೋಗ್ಯಕ್ಕೆ ಹಾನಿ?: ಸತ್ಯಾನ್ವೇಷಣೆ ಅಧ್ಯಯನಕ್ಕೆ ಇಳಿದ ಕೇಂದ್ರ ಸರ್ಕಾರ

ಅಡಿಕೆಯ ಸಾರದಿಂದ ಝೀಬ್ರಾ ಮೀನಿನ ಮೇಲೆ ಪರಿಣಾಮ ಬೀರುತ್ತದೆ. ಅಡಿಕೆಯಿಂದ ಹಣ್ಣಿನ ನೊಣದ ಮೇಲೆ ಪರಿಣಾಮ ಬೀರುತ್ತದೆ. ಅಡಿಕೆ ರಸದಿಂದ ಕ್ಯಾನ್ಸರ್‌ ಕಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಅಡಿಕೆ ಜಗಿಯುವ ಮಂದಿಯ ವೈಜ್ಞಾನಿಕ ಸಮೀಕ್ಷೆಯ ಅಧ್ಯಯನದಲ್ಲಿ ತಿಳಿಸಲಾಗಿದೆ.

Shivamogga: ಕ್ವಿಂಟಲ್‌ಗೆ 56 ಸಾವಿರ ತಲುಪಿದ ರಾಶಿ ಕೆಂಪಡಕೆ: ಅಡಕೆ ವಲಯದಲ್ಲಿ ಆತಂಕ ಮಿಶ್ರಿತ ಸಂತೋಷ

Latest Videos
Follow Us:
Download App:
  • android
  • ios