ನವದೆಹಲಿ(ಆ.03): ಮಹಾಮಾರಿ ಕೊರೋನಾಗೆ ಲಸಿಕೆ ಕಂಡು ಹಿಡಿಯುವ ಪ್ರಕ್ರಿಯೆ ಜಾರಿಯಲ್ಲಿರುವಾಗಲೇ, ಶ್ರೀಮಂತ ರಾಷ್ಟ್ರಗಳು ಭಾರೀ ಪ್ರಮಾಣದ ಲಸಿಕೆಗಳನ್ನು ಖರೀದಿ ಮಾಡುವ ಒಪ್ಪಂದಗಳನ್ನು ಮಾಡಿಕೊಂಡಿವೆ. ಒಂದು ಅಂಕಿ ಅಂಶದ ಪ್ರಕಾರ ಶ್ರೀಮಂತ ರಾಷ್ಟ್ರಗಳು 100 ಕೋಟಿಯಷ್ಟುಸಂಭವನೀಯ ಕೊರೋನಾ ಲಸಿಕೆಯನ್ನು ಖರೀದಿ ಮಾಡಿಟ್ಟುಕೊಂಡಿದೆ. ಇದರಿಂದ ಅಭಿವೃದ್ಧಿ ಹೊಂದುತ್ತಿರುವ ಹಾಗೂ ಬಡ ರಾಷ್ಟ್ರಗಳು ಲಸಿಕೆ ಪಡೆಯಲು ಪರದಾಡುವ ಪರಿಸ್ಥಿತಿ ಎದುರಾಗುವ ಆತಂಕ ಎದುರಾಗಿದೆ.

ಹರ್ಡ್‌ ಇಮ್ಯುನಿಟಿ ಭಾರತಕ್ಕೆ ಸರಿ ಹೊಂದಲ್ಲ: ಕೇಂದ್ರ!

ಅಮೆರಿಕ, ಬ್ರಿಟನ್‌, ಜಪಾನ್‌ ಹಾಗೂ ಐರೋಪ್ಯ ಒಕ್ಕೂಟದ ರಾಷ್ಟ್ರಗಳು ಈಗಾಗಲೇ ಲಸಿಕೆ ತಯಾರಿಕೆಯಲ್ಲಿ ತೊಡಗಿರುವ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು, ಕೋಟ್ಯಾಂತರ ಪ್ರಮಾಣದ ಲಸಿಕೆಯನ್ನು ಬಿಡುಗಡೆಗೂ ಮುನ್ನವೇ ಖರೀದಿ ಮಾಡಿವೆ ಎಂದು ಲಂಡನ್‌ ಮೂಲದ ವಿಶ್ಲೇಷಕ ಕಂಪನಿಯೊಂದು ವರದಿ ಮಾಡಿದೆ.

ಎಲ್ಲಾ ವರ್ಗದ ಜನರಿಗೆ ಎಲ್ಲಾ ದೇಶಗಳಿಗೆ ಕೈಗೆಟುಕುವ ದರದಲ್ಲಿ ಕೊರೋನಾ ಲಸಿಕೆ ಲಭ್ಯವಾಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸಹಿತ ಹಲವು ಅಂತಾರಾಷ್ಟ್ರೀಯ ಸಂಸ್ಥೆಗಳು ಹೇಳಿಕೆ ನೀಡುತ್ತಿದ್ದರೂ ಶ್ರೀಮಂತ ರಾಷ್ಟ್ರಗಳು ಈಗಾಗಲೇ ಲಸಿಕೆ ತಯಾರಕರ ಜತೆ ಒಪ್ಪಂದ ಮಾಡಿಕೊಂಡಿವೆ. ಸಫೋಲಿ ಆ್ಯಂಟ್‌ ಪಾಟ್ರ್ನರ್‌ ಮತ್ತು ಗ್ಲಾಕ್ಸೋ ಸ್ಮಿತ್‌ ಲೈನ್‌ ಕಂಪನಿಯಿಂದ ಈಗಾಗಲೇ ಅಮೆರಿಕ ಹಾಗೂ ಬ್ರಿಟನ್‌ ಒಪ್ಪಂದ ಮಾಡಿಕೊಂಡಿದೆ. ಫೈಜರ್‌ ಎಂಬ ಕಂಪನಿಯಿಂದ ಜಪಾನ್‌ ಲಕ್ಷಾಂತರ ಪ್ರಮಾಣದ ಲಸಿಕೆಯನ್ನು ಪ್ರೀ ಆರ್ಡರ್‌ ಮಾಡಿದೆ.

ಗುಡ್‌ ನ್ಯೂಸ್: ಆಗಸ್ಟ್‌ನೊಳಗೆ ವಿಶ್ವದ ಮೊಟ್ಟ ಮೊದಲ ಕೊರೋನಾ ಲಸಿಕೆ ಬಿಡುಗಡೆ!

ಹಲವು ಕಂಪನಿಗಳು ಅಭಿವೃದ್ಧಿ ಪಡಿಸಿರುವ ಲಸಿಕೆಗಳು ಹಂತಿಮ ಹಂತದಲ್ಲಿದ್ದು, ಈ ವರ್ಷಾಂತ್ಯ ಅಥವಾ ಮುಂದಿನ ವರ್ಷಾರಂಭದಲ್ಲಿ ಯಶ ಕಾಣುವ ವಿಶ್ವಾಸದಲ್ಲಿದೆ.