ನವದೆಹಲಿ (ನ.17): ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯೊಂದನ್ನು ನೀಡಿದೆ. 

ವಿಶ್ವದಾದ್ಯಂತ ಲಕ್ಷಾಂತರ ಜನರನ್ನು ಬಲಿಪಡೆದು ಕೋಟಿ ಕೋಟಿ ಜನರಿಗೆ ಸಂಕಷ್ಟ ತಂದೊಡ್ಡಿದ ಕೊರೋನಾ ಮಹಾಮಾರಿ ಸಾಂಕ್ರಾಮಿಕವಾಗಿ ಹರಡುವುದನ್ನು ವ್ಯಾಕ್ಸಿನ್ ತಡೆಯಲಾರದು ಎಂದು ಎಚ್ಚರಿಕೆ ನೀಡಿದೆ. 

ವಿಶ್ವದಾದ್ಯಂತ ಕೊರೋನಾ 54 ಮಿಲಿಯನ್‌ಗೂ ಹೆಚ್ಚು ಜನರಿಗೆ ತಗುಲಿದೆ. ಔಷಧ ರೋಗವನ್ನು ಸಾಂಕ್ರಾಮಿಕವಾಗಿ ಹರಿಡಿರುವುದನ್ನು ಈ ವ್ಯಾಕ್ಸಿನ್‌ಗಳು ತಡೆಯಲಾರವು.ಆದರೆ ರೋಗವನ್ನು ತಡೆಯಬಹುದು  ಎಂದು WHO ಮುಖ್ಯಸ್ಥ ಟೆಡ್ರೋಸ್ ಅದಾನೊಮ್ ಗೆಬ್ರಿಯಾಸಸ್ ಹೇಳಿದ್ದಾರೆ. 

ದೀಪಾವಳಿ ಕೊರೋನಾ ಹೆಚ್ಚಳಕ್ಕೆ ಕಾರಣವಾದೀತೆ..?

ಔಷಧವನ್ನು ನೀಡುವಾಗ ವಯಸ್ಸಾದವರು ಹಾಗೂ ಇತರೆ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಆದ್ಯತೆ ನೀಡಬೇಕು.  ಇದರಿಂದ ಸಾವುನೋವುಗಳನ್ನು ಆದಷ್ಟು ಪ್ರಮಾಣದಲ್ಲಿ ತಡೆಯಬಹುದು.

ಆದರೆ ಜನರು ಸೂಕ್ತ ಎಚ್ಚರಿಕೆಯಿಂದ  ಮುನ್ನಡೆಯುವುದು ಈಗಲೂ ಅಗತ್ಯವಿದೆ. ಯಾಕೆಂದರೆ ನಮ್ಮ ನಡುವೆ ವೈರಸ್ ಇನ್ನೂ ಜೀವಂತವಾಗಿದೆ ಎಂದು ಗೇಬ್ರಿಯಾಸಸ್ ಹೇಳಿದ್ದಾರೆ.