ಚೀನಾದಲ್ಲಿ ಕೋವಿಡ್ ಗದ್ದಲ: ಭಾರತದತ್ತ ಮುಖ ಮಾಡಿದ ಆ್ಯಪಲ್
ಕೋವಿಡ್ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಜಾರಿಯಾದ ಬಳಿಕ ಚೀನಾದ ಐಫೋನ್ ಉತ್ಪಾದನಾ ಘಟಕಗಳಲ್ಲಿ ಉಂಟಾಗಿರುವ ಪ್ರತಿಭಟನೆಗಳು, ಆ್ಯಪಲ್ ಕಂಪನಿಯು ತನ್ನ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗೆ ವರ್ಗಾಯಿಸಲು ಚಿಂತಿಸುವಂತೆ ಮಾಡಿದೆ ಎಂದು ವರದಿಯೊಂದು ಹೇಳಿದೆ.
ನವದೆಹಲಿ: ಕೋವಿಡ್ ವಿಷಯದಲ್ಲಿ ಶೂನ್ಯ ಸಹಿಷ್ಣು ನೀತಿ ಜಾರಿಯಾದ ಬಳಿಕ ಚೀನಾದ ಐಫೋನ್ ಉತ್ಪಾದನಾ ಘಟಕಗಳಲ್ಲಿ ಉಂಟಾಗಿರುವ ಪ್ರತಿಭಟನೆಗಳು, ಆ್ಯಪಲ್ ಕಂಪನಿಯು ತನ್ನ ಘಟಕಗಳನ್ನು ಭಾರತ ಮತ್ತು ವಿಯೆಟ್ನಾಂಗೆ ವರ್ಗಾಯಿಸಲು ಚಿಂತಿಸುವಂತೆ ಮಾಡಿದೆ ಎಂದು ವರದಿಯೊಂದು ಹೇಳಿದೆ.
ಐಫೋನ್ ಘಟಕಗಳಲ್ಲಿ(iPhone units) ಭಾರೀ ಪ್ರತಿಭಟನೆ ಹಿನ್ನೆಲೆಯಲ್ಲಿ ಹೊಸದಾಗಿ ಬಿಡುಗಡೆಯಾದ ಐಫೋನ್ 14 ಪ್ರೋ ಮಾದರಿಯ (iPhone 14 Pro model) ಪೂರೈಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೀಗಾಗಿ ಚೀನಾದ ಮೇಲಿನ ಪೂರ್ಣ ಅವಲಂಬನೆ ಕಡಿಮೆ ಮಾಡಿ ಭಾರತ ಅಥವಾ ವಿಯೆಟ್ನಾಂನಲ್ಲಿ ಕಂಪನಿಯ ಅಸೆಂಬ್ಲಿಂಗ್ ಘಟಕ ಆರಂಭಿಸುವ ಬಗ್ಗೆ ಕಾರ್ಯಪ್ರವೃತ್ತವಾಗುವಂತೆ ತನ್ನ ಪೂರೈಕೆದಾರರಿಗೆ ಆ್ಯಪಲ್ ಸಂಸ್ಥೆ ಸೂಚನೆ ನೀಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಅಮೆರಿಕದ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಕೋವಿಡ್ ಉಲ್ಬಣ: ಚೀನಾ ಆಸ್ಪತ್ರೆಗಳು ಹೌಸ್ ಫುಲ್..!
ಪ್ರಸಕ್ತ ಆ್ಯಪಲ್ ಕಂಪನಿಯ ಐಫೋನ್ ಉತ್ಪಾದನೆಯಲ್ಲಿ ಭಾರತದ ಘಟಕಗಳ ಪಾಲು ಶೇ.10ಕ್ಕಿಂತಲೂ ಕಡಿಮೆ ಇದೆ. ಇದನ್ನು ಶೇ.40-45ರಷ್ಟಕ್ಕೆ ಹೆಚ್ಚಿಸಲು ಆ್ಯಪಲ್ ಉತ್ಸುಕವಾಗಿದೆ ಎಂದು ಖ್ಯಾತ ವಿಶ್ಲೇಷಕ ಮಿಂಗ್ ಕಿ ಕ್ಯು (Ming Ki Qi) ಹೇಳಿದ್ದಾರೆ ಎಂದು ಪತ್ರಿಕೆ ವರದಿ ಮಾಡಿದೆ. ಮತ್ತೊಂದೆಡೆ 2025ರ ವೇಳೆಗೆ ವಿಶ್ವದಲ್ಲಿ ಉತ್ಪಾದನೆಯಾಗುವ ಒಟ್ಟು ಐಫೋನ್‌ಗಳ ಪೈಕಿ 4ರಲ್ಲಿ 1 ಭಾರತದಲ್ಲಿ ಉತ್ಪಾದನೆಯಾಗಲಿದೆ ಎಂದು ಜೆ.ಪಿ.ಮಾರ್ಗನ್ ವರದಿ ಮಾಡಿದೆ.
ಭಾರತದಲ್ಲಿ ಸದ್ಯ 14 ಘಟಕ:
ಈ ವರ್ಷಾರಂಭದಲ್ಲಿ ಆ್ಯಪಲ್ ಕಂಪನಿಯು ತನ್ನ ಮೊದಲ ಐಫೋನ್ 14 ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭಿಸಿತ್ತು. ದೇಶದಲ್ಲಿ ಈ ವರ್ಷ ಮಾರಾಟವಾದ ಒಟ್ಟು ಐಫೋನ್‌ಗಳಲ್ಲಿ ಶೇ.85ರಷ್ಟುಮೇಕ್ ಇನ್ ಇಂಡಿಯಾ ಯೋಜನೆಯಡಿ ಭಾರತದಲ್ಲೇ ಉತ್ಪಾದನೆಯಾಗಿವೆ. ಹೀಗಾಗಿ 2019ರಲ್ಲಿ ಶೇ.50ರಷ್ಟಿದ್ದ ಆಮದು ಪ್ರಮಾಣ ಈ ವರ್ಷ ಶೇ.15ಕ್ಕೆ ಇಳಿಯಲಿದೆ. 2021ರಲ್ಲಿ ಭಾರತದಲ್ಲಿ 70 ಲಕ್ಷ ಐಫೋನ್‌ಗಳನ್ನು ತಯಾರಿಸಿದ್ದು, 2022ರಲ್ಲಿ ಈ ಪ್ರಮಾಣ 1.3 ಕೋಟಿಗೆ ತಲುಪುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ. 2017ರಲ್ಲಿ ಆ್ಯಪಲ್ ಕಂಪನಿಯು ತನ್ನ ಪೂರೈಕೆದಾರರ ಮೂಲಕ ಭಾರತಕ್ಕೆ ಕಾಲಿಟ್ಟು ಮೊದಲಿಗೆ ಐಫೋನ್ ಎಸ್‌ಇ ಉತ್ಪಾದಿಸಿತ್ತು.
ಡಿಸೆಂಬರ್ 2ಕ್ಕೆ iQOO 11 5G ಫೋನ್ ಲಾಂಚ್, ವಿಶೇಷತೆಗಳೇನು?
China: ಚೀನಾದಲ್ಲಿ ಕೊರೋನಾ ರೌದ್ರ ನರ್ತನ: ಮತ್ತೆ ಲಾಕ್ ಡೌನ್, ದಂಗೆ ಎದ್ದ ಜನ
ಸತತ ಪ್ರತಿಭಟನೆ ನಡುವೆ ಚೀನಾದಲ್ಲಿ ಕೊರೋನಾ ಸ್ಫೋಟ, ಬೀಜಿಂಗ್ ಸೇರಿ ಕೆಲ ನಗರದಲ್ಲಿ ಲಾಕ್‌ಡೌನ್!