Asianet Suvarna News Asianet Suvarna News

ವಿದೇಶಗಳಲ್ಲಿ ಸೋಂಕು ಹೈ ಸ್ಪೀಡ್ : ಭಾರೀ ಏರಿ ಮತ್ತೆ ಆತಂಕ

  •  ಕೋವಿಡ್‌ ಸೋಂಕು ಪ್ರಸರಣ ತಡೆಯಲು ಚೀನಾ ಕೈಗೊಂಡ ಎಲ್ಲಾ ನಿಯಂತ್ರಣ ಕ್ರಮಗಳು ವಿಫಲ
  • ರಷ್ಯಾ, ಯುರೋಪ್‌ಗಳಲ್ಲಿಯೂ ಕೊರೋನಾ ಸೋಂಕು ಭಾರೀ ಏರಿಕೆ
Covid Cases Outbreak in Many foreign countries snr
Author
Bengaluru, First Published Nov 4, 2021, 7:33 AM IST

ಬೀಜಿಂಗ್‌ (ನ.04) : ಕೋವಿಡ್‌ ಸೋಂಕು (Covid) ಪ್ರಸರಣ ತಡೆಯಲು ಚೀನಾ (China) ಕೈಗೊಂಡ ಎಲ್ಲಾ ನಿಯಂತ್ರಣ ಕ್ರಮಗಳು ವಿಫಲವಾಗುತ್ತಿದ್ದು, ದೇಶದ ಇನ್ನೂ ಮೂರು ಪ್ರಾಂತ್ಯಗಳಿಗೆ ಇದೀಗ ಸೋಂಕು ಹಬ್ಬಿದೆ. ಇದರಿಂದಾಗಿ ದೇಶದ 31 ಪ್ರಾಂತ್ಯಗಳ ಪೈಕಿ 19ರಲ್ಲಿ ಹೊಸದಾಗಿ ಸ್ಥಳೀಯವಾಗಿ ‘ಹೈಸ್ಪೀಡ್‌’ನಿಂದ ಹಬ್ಬಿದ ಕೋವಿಡ್‌ ಸೋಂಕಿನ ಪ್ರಕರಣಗಳು ಕಾಣಿಸಿಕೊಂಡಂತಾಗಿದೆ.

2019ರಲ್ಲಿ ವುಹಾನ್‌ನಲ್ಲಿ ಮೊದಲ ಬಾರಿಗೆ ಸೋಂಕು ಕಾಣಿಸಿಕೊಂಡ ಬಳಿಕ ದೇಶದಲ್ಲಿ ಯಾವುದೇ ಹಂತದಲ್ಲಿ ಇಷ್ಟುದೊಡ್ಡ ಪ್ರಮಾಣದಲ್ಲಿ ಸೋಂಕು ಎಲ್ಲೆಡೆ ಪ್ರಸರಣವಾಗಿರಲಿಲ್ಲ. ಹೀಗಾಗಿ ಹೊಸ ಬೆಳವಣಿಗೆ ಕಮ್ಯುನಿಸ್ಟ್‌ ದೇಶಕ್ಕೆ ಭಾರೀ ಆತಂಕ ಹುಟ್ಟುಹಾಕಿದೆ.

ಬುಧವಾರ ಕೂಡಾ ದೇಶದಲ್ಲಿ 100ಕ್ಕಿಂತ ಹೆಚ್ಚು ಹೊಸ ಪ್ರಕರಣಗಳು ವರದಿಯಾಗಿವೆ. ಸೋಂಕು ಪತ್ತೆಯಾದ ಕೂಡಲೇ ಇಡೀ ಪ್ರದೇಶವನ್ನೇ ಲಾಕ್ಡೌನ್‌ (Lockdown) ಮಾಡುವ, ಸಂಚಾರ ನಿಯಂತ್ರಿಸುವ ರೀತಿಯ ಕಠಿಣ ಕ್ರಮಗಳನ್ನು ಕೈಗೊಂಡ ಹೊರತಾಗಿಯೂ ಸ್ಥಳೀಯವಾಗಿಯೇ ಸೋಂಕು ಒಂದೆಡೆಯಿಂದ ಇನ್ನೊಂದೆಡೆ ಪ್ರಸರಣವಾಗುತ್ತಿರುವುದು ಇದೀಗ ಆತಂಕಕ್ಕೆ ಕಾರಣವಾಗಿದೆ. ಡೆಲ್ಟಾಪ್ಲಸ್‌ ರೂಪಾಂತರಿ ತಳಿ ಚೀನಾದಲ್ಲಿ 2ನೇ ಅಲೆಯ ಭೀತಿ ಹುಟ್ಟುಹಾಕಿದೆ.

ವಿಶ್ವಕ್ಕೆಲ್ಲಾ ಕೋವಿಡ್‌ ಹಬ್ಬಿಸಿದ ಕುಖ್ಯಾತಿ ಹೊಂದಿರುವ ಚೀನಾದಲ್ಲಿ, ಸರ್ಕಾರದ ಮಾಹಿತಿ ಅನ್ವಯ ಇದುವರೆಗೆ ಕೇವಲ 97423 ಜನರಲ್ಲಿ ಸೋಂಕು ಪತ್ತೆಯಾಗಿದೆ, 4636 ಜನರು ಸಾವನ್ನಪ್ಪಿದ್ದಾರೆ, ಅಂದಾಜು 1000 ಸಕ್ರಿಯ ಸೋಂಕಿತರಿದ್ದಾರೆ.

* ರಷ್ಯಾದಲ್ಲಿ ಕೋವಿಡ್‌ ಸ್ಫೋಟ: ದಾಖಲೆಯ ಕೇಸ್‌, ಸಾವು- 

  ಒಂದೇ ದಿನ 40 ಸಾವಿರ ಕೇಸು, 1189 ಬಲಿ

ಮಾಸ್ಕೋ: ರಷ್ಯಾದಲ್ಲಿ (Russia) ದಿನೇ ದಿನೇ ಕೋವಿಡ್‌ ಸ್ಫೋಟಗೊಳ್ಳುತ್ತಿದ್ದು, ದೈನಂದಿನ ಪ್ರಕರಣಗಳು ಮತ್ತು ಸೋಂಕಿನಿಂದ ಬಲಿಯಾಗುತ್ತಿರುವವರ ಸಂಖ್ಯೆ ಬುಧವಾರ ಸಾರ್ವಕಾಲಿಕ ದಾಖಲೆಯ ಮಟ್ಟ ತಲುಪಿದೆ. ಬುಧವಾರ ಒಂದೇ ದಿನ 40,000ಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿ, 1,189 ಮಂದಿ ಬಲಿಯಾಗಿದ್ದಾರೆ. ಇದು ಕೋವಿಡ್‌ (Covid) ಸಾಂಕ್ರಾಮಿಕ ಆರಂಭದ ನಂತರದ ಸಾರ್ವಕಾಲಿಕ ಗರಿಷ್ಠ ಸಂಖ್ಯೆಯಾಗಿದೆ. ಅಷ್ಟೇ ಅಲ್ಲದೆ ಕಳೆದ ಏಳು ದಿನಗಳಲ್ಲಿ 5 ದಿನ ದಾಖಲೆಯ ಕೋವಿಡ್‌ ಕೇಸು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮತ್ತಷ್ಟುಪ್ರದೇಶಗಳಲ್ಲಿ ನಿರ್ಬಂಧಗಳನ್ನು ವಿಸ್ತರಿಸಲಾಗಿದೆ. ಆದಾಗ್ಯೂ ಕೋವಿಡ್‌ ಸೋಂಕು ಪ್ರಸರಣ ತಡೆಯಲು ರಷ್ಯಾ ವಿಫಲವಾಗುತ್ತಿರುವುದು ಭಾರೀ ಆತಂಕಕ್ಕೆ ಕಾರಣವಾಗಿದೆ. ದೇಶದಲ್ಲಿ ಈವರೆಗೆ ಶೇ.35ರಷ್ಟುಮಂದಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದಿದ್ದಾರೆ.

* ಯುರೋಪ್‌ನಲ್ಲಿ ಸತತ 5ನೇ ವಾರವೂ ಸೋಂಕು ಏರಿಕೆ

 ಜಿನೇವಾ: ಯುರೋಪ್‌ ದೇಶಗಳಲ್ಲಿ ಸತತ 5ನೇ ವಾರವೂ ಹೊಸ ಕೋವಿಡ್‌ ಪ್ರಕರಣಗಳಲ್ಲಿ ಭಾರೀ ಏರಿಕೆ ದಾಖಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತೀವ್ರ ಕಳವಳ ವ್ಯಕ್ತಪಡಿಸಿದೆ. ಸಂಸ್ಥೆ ಬುಧವಾರ ಬಿಡುಗಡೆ ಮಾಡಿರುವ ವಾರದ ವರದಿ ಅನ್ವಯ, ಕಳೆದ ವಾರ ವಿಶ್ವದಾದ್ಯಂತ ಒಟ್ಟಾರೆ 30 ಲಕ್ಷ ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಇದು ಹಿಂದಿನ ವಾರಕ್ಕಿಂತ ಶೇ.6ರಷ್ಟು ಹೆಚ್ಚು. ಆದರೆ ಇದೇ ಅವಧಿಯಲ್ಲಿ ಯುರೋಪ್‌ ದೇಶಗಳಲ್ಲಿನ ಏರಿಕೆ ಪ್ರಮಾಣ ಶೇ.18ರಷ್ಟಿದೆ.

ಇತರೆ ಎಲ್ಲಾ ಪ್ರದೇಶಗಳಲ್ಲಿ ಹೊಸ ಸೋಂಕಿನ ಪ್ರಮಾಣ ಪ್ರಮಾಣ ಒಂದೋ ಹಿಂದಿನ ಸ್ಥಿತಿಯಲ್ಲಿದೆ ಇಲ್ಲವೇ ಇಳಿಕೆ ಕಂಡಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿ ಕೇಸು ಶೇ.12ರಷ್ಟುಇಳಿಕೆ ಕಂಡಿದೆ, ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿ ಶೇ.9ರಷ್ಟುಇಳಿಕೆ ಕಂಡುಬಂದಿದೆ ಎಂದು ವರದಿ ಹೇಳಿದೆ.

ಯುರೋಪ್‌ನಲ್ಲಿ ಸೋಂಕಿನ ಪ್ರಮಾಣವೂ ಅತ್ಯಧಿಕವಾಗಿದೆ. ಅಲ್ಲಿ ಪ್ರತಿ 1 ಲಕ್ಷ ಜನರಲ್ಲಿ 192 ಜನರಿಗೆ ಸೋಂಕು ಕಾಣಿಸಿಕೊಳ್ಳುತ್ತಿದೆ. ನಂತರದ ಸ್ಥಾನದಲ್ಲಿರುವ ಅಮೆರಿಕದಲ್ಲಿ 1 ಲಕ್ಷ ಜನರಿಗೆ 72 ಕೇಸು ಕಂಡುಬರುತ್ತಿದೆ ಎಂದು ವರದಿ ಹೇಳಿದೆ.

ಇನ್ನು ಕಳೆದ ವಾರ ಸೋಂಕಿನಿಂದ ಸಾಯುವವರ ಪ್ರಮಾಣ ಶೇ.8ರಷ್ಟುಏರಿಕೆಯಾಗಿದೆ. ವಾಯುವ್ಯ ಏಷ್ಯಾ ದೇಶಗಳಲ್ಲಿ ಸಾವಿನ ಪ್ರಮಾಣದಲ್ಲಿ ಶೇ.50ರಷ್ಟುಏರಿಕೆ ದಾಖಲಾಗಿರುವುದು, ಒಟ್ಟಾರೆ ಸಾವಿನ ಪ್ರಮಾಣ ಏರಿಕೆಗೆ ಕಾರಣವಾಗಿದೆ.

Follow Us:
Download App:
  • android
  • ios