ಕೋವಿಡ್‌: ದಿಢೀರ್ ಐಕಿಯಾ ಮುಚ್ಚಲು ಮುಂದಾದ ಚೀನಾ: ಮಾಲ್‌ನಿಂದ ಜನ ಓಡುತ್ತಿರುವ ವಿಡಿಯೋ ವೈರಲ್‌

ಚೀನಾದ ಮಹಾನಗರವಾಗಿರುವ ಶಾಂಘೈ ಪಟ್ಟಣದಲ್ಲಿರುವ ಐಕಿಯಾದಲ್ಲಿ ಕೋವಿಡ್ ಸಂಪರ್ಕಕ್ಕೊಳಗಾದ ವ್ಯಕ್ತಿಯೊಬ್ಬರು ಸುತ್ತಾಡಿದ ಹಿನ್ನೆಲೆಯಲ್ಲಿ ಆ ಸ್ಥಳವನ್ನು ಗ್ರಾಹಕರಿದ್ದಾಗಲೇ ಮುಚ್ಚಿ ಒಳಗಿದ್ದವರಿಗೆ ಅಲ್ಲೇ ಕ್ವಾರಂಟೈನ್‌ ಮಾಡಲು ಮುಂದಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

COVID 19 China officials suddenly try to close Ikea shop video of people running to escape goes viral akb

ಚೀನಾದ ಮಹಾನಗರವಾಗಿರುವ ಶಾಂಘೈ ಪಟ್ಟಣದಲ್ಲಿರುವ ಐಕಿಯಾದಲ್ಲಿ ಕೋವಿಡ್ ಸಂಪರ್ಕಕ್ಕೊಳಗಾದ ವ್ಯಕ್ತಿಯೊಬ್ಬರು ಸುತ್ತಾಡಿದ ಹಿನ್ನೆಲೆಯಲ್ಲಿ ಆ ಸ್ಥಳವನ್ನು ಗ್ರಾಹಕರಿದ್ದಾಗಲೇ ಮುಚ್ಚಿ ಒಳಗಿದ್ದವರಿಗೆ ಅಲ್ಲೇ ಕ್ವಾರಂಟೈನ್‌ ಮಾಡಲು ಮುಂದಾಗಿದೆ. ಇದನ್ನು ಅರಿತ ಗ್ರಾಹಕರು ಮಾಲ್‌ನಿಂದ ಹೊರಗೆ ಬರಲು ಸೆಕ್ಯೂರಿಟಿ ಗಾರ್ಡ್‌ಗಳ ಜೊತೆ ನೂಕಾಟ ತಳ್ಳಾಟ ಮಾಡಿ ಕೊನೆಗೂ ಅಲ್ಲಿಂದ ಎಲ್ಲರೂ ಹೊರಗೆ ಓಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಚೀನಾದ ವಾಸ್ತವ ಸ್ಥಿತಿಯನ್ನು ತೋರಿಸುತ್ತಿದೆ. 

ಕಮ್ಯೂನಿಷ್ಟ್‌ ರಾಷ್ಟ್ರವಾಗಿರುವ ಚೀನಾದಲ್ಲಿ ಪ್ರಜೆಗಳ ಮಾನವ ಹಕ್ಕುಗಳನ್ನು ಕೇಳುವವರೇ ಇಲ್ಲ. ಕೋವಿಡ್‌ ಸಮಯದಲ್ಲಿ ಚೀನಾ ವರ್ತಿಸಿದ ರೀತಿಯೇ ಇದಕ್ಕೆ ಸಾಕ್ಷಿ, ತನ್ನ ಸ್ವಾರ್ಥದಿಂದಾಗಿ ಇಡೀ ಜಗತ್ತಿಗೆ ಕೋವಿಡ್‌ ಹಂಚಿದ ಚೀನಾ ಹಲವು ತಪ್ಪುಗಳನ್ನು ಸಾಕ್ಷಿಗಳಿದ್ದರೂ ನಿರಾಕರಿಸುತ್ತಲೇ ಬಂತು. ಅಲ್ಲದೇ ಈ ಸಮಯದಲ್ಲಿ ಲಕ್ಷಾಂತರ ಜನ ಚೀನಾ ಪ್ರಜೆಗಳು ಬೀದಿ ಹೆಣಗಳಂತೆ ಇದ್ದಲ್ಲೇ ಮೃತಪಟ್ಟಿದ್ದರು. ಎಲ್ಲರಿಗೂ ಬಲವಂತದ ಕೋವಿಡ್ ತಪಾಸಣೆ ನಡೆಸಿದ ಚೀನಾ ಆರಂಭದಲ್ಲಿ ಕೋವಿಡ್ ಇದ್ದ ಅನೇಕರನ್ನು ಕಣ್ಣೆದುರೇ ಹತ್ಯೆ ಮಾಡಿದೆ ಎಂಬುದು ಕರಾಳ ಸತ್ಯ. ಪ್ರಸ್ತುತ ಜಗತ್ತಿನಾದ್ಯಂತ ಎಲ್ಲಾ ದೇಶಗಳಲ್ಲಿ ಕೋವಿಡ್ ಸಂಪೂರ್ಣ ತಹಬದಿಗೆ ಬಂದಿದ್ದರೂ, ಈ ಮಾರಕ ಕಾಯಿಲೆಯನ್ನು ಜಗತ್ತಿಗೆ ಹಬ್ಬಿಸಿದ ಚೀನಾದಲ್ಲಿ ಮಾತ್ರ ಒಂದು ರೀತಿಯ ಭಯಾನಕ ಸ್ಥಿತಿಯೇ ಇದೆ. ಈಗ ಚೀನಾದ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ದಿಢೀರ್ ಎದುರಾದ ಲಾಕ್‌ಡೌನ್‌ನಿಂದ ತಪ್ಪಿಸಿಕೊಳ್ಳಲು ಶಾಂಘೈನ ಜನರೂ ಮಾಲ್‌ನಿಂದ ಓಡುತ್ತಿರುವ ದೃಶ್ಯವನ್ನು ಈ ವೈರಲ್ ವೀಡಿಯೊ ತೋರಿಸುತ್ತಿದೆ. ಈ ಐಕಿಯಾ ಮಾಲ್‌ನಲ್ಲಿ ಕೋವಿಡ್‌ 19 ರೋಗಿಯ ನಿಕಟ ಸಂಪರ್ಕವನ್ನು  ಪತ್ತೆಹಚ್ಚಿದ ನಂತರ ಚೀನಾದ ಅಧಿಕಾರಿಗಳು, ಗ್ರಾಹಕರು ಇರುವಾಗಲೇ ಈ ಮಾಲ್‌ ಅನ್ನು ದಿಢೀರ್‌ ಆಗಿ ಲಾಕ್ ಮಾಡಲು ಮುಂದಾದರು. ಮಾಲ್‌ಗೆ ಬಂದವರು ಲಾಕ್‌ಡೌನ್‌ ಸುದ್ದಿ ಕೇಳುತ್ತಿದ್ದಂತೆ ಒಳಗಡೆ ಬಂಧಿಯಾಗುವುದರಿಂದ ತಪ್ಪಿಸಿಕೊಂಡು ಓಡಿ ಹೋಗಲು ಯತ್ನಿಸುವುದು ಹಾಗೂ ಭದ್ರತಾ ಅಧಿಕಾರಿಗಳು ಅವರನ್ನು ತಡೆಯಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

IKEA Bengaluru Recruitment 2022; ಭರ್ಜರಿ ಉದ್ಯೋಗವಕಾಶ, ಸ್ಥಳೀಯರಿಗೆ ಆದ್ಯತೆ

ಶಾಂಘೈನ ಕ್ಸುಹುಯಿ ಜಿಲ್ಲೆಯಲ್ಲಿ ಆಗಸ್ಟ್ 13 ರಂದು ಈ ಘಟನೆ ನಡೆದಿದೆ. ಕೋವಿಡ್ ರೋಗಿ ಈ ಪ್ರದೇಶದ ಸಂಪರ್ಕಕ್ಕೆ ಬಂದಿದ್ದಾನೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಅಧಿಕಾರಿಗಳು ಮಾಲ್‌ನ್ನು ಜನರಿರುವಾಗಲೇ ದಿಢೀರ್‌ ಲಾಕ್ ಮಾಡಲು ನಿರ್ಧರಿಸಿದ್ದಾರೆ. ಕೋವಿಡ್‌ ತಡೆಗಾಗಿ ಚೀನಾ ಈ ಹಿಂದೆಯೂ ತೀವ್ರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು. ಜನ ಉಪವಾಸದಿಂದ ಮನೆಯಲ್ಲೇ ಸತ್ತರೂ ಸರಿ ಹೊರಗೆ ಬರಬಾರದು ಎಂಬಂತಹ ನಿಯಮ ರೂಪಿಸಿತ್ತು. ಮನೆಯಿಂದ ಬರದಂತೆ ಪ್ರಜೆಗಳಿಗೆ ಕಟ್ಟುನಿಟ್ಟಿನ ಲಾಕ್‌ಡೌನ್ ಹೇರಿದ ಚೀನಾ ನಂತರ ಮನೆಯಲ್ಲಿದ್ದ ಜನರಿಗೆ ಯಾವುದೇ ಆಹಾರವನ್ನು ನೀಡದೇ ಅಗತ್ಯ ಸೌಲಭ್ಯಗಳನ್ನು ಒದಗಿಸದೇ ನಿರ್ಲಕ್ಷ್ಯ ವಹಿಸಿತ್ತು. ಆಹಾರವಿಲ್ಲದೇ ಜನ ಹಸಿವಿನಿಂದ ಅಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. 

ಐಕಿಯ ಜನಜಾತ್ರೆ... ಸೋಶಿಯಲ್‌ ಮೀಡಿಯಾದಲ್ಲಿ ಫುಲ್ ಟ್ರೋಲ್

ಇನ್ನು ಶನಿವಾರ ಶಾಂಘೈನಲ್ಲಿ ನಡೆದ ಘಟನೆಯ ಬಗ್ಗೆ ಐಕಿಯಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಚೀನಾದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ಶಾಂಘೈ ನಗರದಲ್ಲಿ ಶನಿವಾರ ಲಕ್ಷಣ ರಹಿತ ಕರೋನಾ ವೈರಸ್‌ನ ಐದು ಹೊಸ ಸ್ಥಳೀಯ ಸೋಂಕು ಪರಕರಣ ವರದಿ ಆಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ಜೊತೆಗೆ ದೇಶಾದ್ಯಂತ 2,467 ದೇಶೀಯವಾಗಿ ಹರಡುವ ಪ್ರಕರಣಗಳು ವರದಿಯಾಗಿವೆ. ಬಿಬಿಸಿ ಪ್ರಕಾರ, ಅಧಿಕಾರಿಗಳು ಅಂಗಡಿಯನ್ನು ಮುಚ್ಚಲು ಕಾರಣವಾದ ವ್ಯಕ್ತಿ ಆರು ವರ್ಷದ ಬಾಲಕನ ನಿಕಟ ಸಂಪರ್ಕ ಹೊಂದಿದ್ದು, ಟಿಬೆಟ್‌ನ ಲಾಸಾದಿಂದ ಶಾಂಘೈಗೆ ಹಿಂದಿರುಗಿದ ನಂತರ ಕೋವಿಡ್‌ ಪರೀಕ್ಷೆ ಮಾಡಿದ್ದಾನೆ. ಆದಾಗ್ಯೂ, ನಿಕಟ ಸಂಪರ್ಕಕ್ಕೊಳಗಾದ ವ್ಯಕ್ತಿ ಯಾವಾಗ ಅಂಗಡಿಯಲ್ಲಿದ್ದ ಎಂಬ ಬಗ್ಗೆ ಮಾಹಿತಿ ಇಲ್ಲ.
 

Latest Videos
Follow Us:
Download App:
  • android
  • ios