ಬೀಜಿಂಗ್‌[ಫೆ.12]: ಕೊರೋನಾ ಸೋಂಕು ಚೀನಾದಲ್ಲಿ ಭಾರೀ ಪ್ರಮಾಣದ ಜನರನ್ನು ಬಲಿಪಡೆದಿದೆ. ಆದರೆ, ವಾಸ್ತವಿಕ ಅಂಕಿ ಸಂಖ್ಯೆಗಳನ್ನು ಚೀನಾ ಸರ್ಕಾರ ಹೊರ ಜಗತ್ತಿನಿಂದ ಮುಚ್ಚಿಡಲು ಯತ್ನಿಸುತ್ತಿದೆ ಎಂಬ ಗಂಭೀರ ಆರೋಪಗಳ ಬೆನ್ನಲ್ಲೇ, ಉಪಗ್ರಹ ನಕಾಶೆಯಲ್ಲಿ ಕೊರೋನಾ ಸೋಂಕಿನ ಕೇಂದ್ರ ಸ್ಥಾನ ವುಹಾನ್‌ ಪರಿಸರದಲ್ಲಿ ಭಾರೀ ಪ್ರಮಾಣದ ಸಲ್ಫರ್‌ ಡೈ ಆಕ್ಸೈಡ್‌(ಎಸ್‌ಒ2) ಪತ್ತೆಯಾಗಿದೆ.

ರೋನಾಕ್ಕೆ ಬಲಿಯಾದ ಭಾರೀ ಸಂಖ್ಯೆಯ ಶವಗಳ ಸಾಮೂಹಿಕ ಸಂಸ್ಕಾರದ ಪರಿಣಾಮವಿದು ಎಂಬ ವಾದಗಳು ಕೇಳಿಬಂದಿವೆ. ಕಳೆದೊಂದು ವಾರದಿಂದ ವುಹಾನ್‌ನಲ್ಲಿ 1350 ಮೈಕ್ರೋಗ್ರಾಂ ಎಸ್‌ಒ2 ದಾಖಲಾಗಿದೆ. ಆದರೆ, ವಿಶ್ವಸಂಸ್ಥೆಯ ಆರೋಗ್ಯ ಸಂಸ್ಥೆ ಪ್ರಕಾರ ವಾತಾವರಣದಲ್ಲಿ 10 ನಿಮಿಷಕ್ಕಿಂತ ಹೆಚ್ಚು ಹೊತ್ತು 500 ಮೈಕ್ರೋಗ್ರಾಂ ಎಸ್‌ಒ2 ಉತ್ಪತ್ತಿಯಾಗುವಂತಿಲ್ಲ.

ಕೊರೋನಾಗೆ ಹೋಮಿಯೋಪತಿ ಔಷಧ ಇಲ್ಲ: ಸರ್ಕಾರ ಸ್ಪಷ್ಟನೆ!

ಮಾನವನ ಮೃತದೇಹಗಳಿಗೆ ಅಗ್ನಿ ಸ್ಪರ್ಶ ಹಾಗೂ ವೈದ್ಯಕೀಯ ತ್ಯಾಜ್ಯಕ್ಕೆ ಬೆಂಕಿ ಇಟ್ಟಾಗಲೂ ವಾತಾವರಣದಲ್ಲಿ ಎಸ್‌ಒ2 ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ವಿಜ್ಞಾನಿಗಳು.

ಆದರೆ, ಸಂಚಾರ ದಟ್ಟಣೆ, ಜನರಲ್ಲಿ ಆತಂಕ ಎದುರಾಗದಂತೆ ಮುಂದಾಲೋಚನಾ ಕ್ರಮವಾಗಿ ಕಡಿಮೆ ಜನಸಂಖ್ಯೆ ಇರುವ ಕಡೆಗಳಲ್ಲಿ ಕೊರೋನಾಕ್ಕೆ ತುತ್ತಾಗಿ ಸತ್ತವರ ಶವಸಂಸ್ಕಾರ ಮಾಡಬೇಕು ಎಂದು ಚೀನಾ ಸರ್ಕಾರ ಈಗಾಗಲೇ ಕಟ್ಟಾಜ್ಞೆ ಹೊರಡಿಸಿದೆ. ಮತ್ತೊಂದೆಡೆ, ಕೊರೋನಾದಿಂದ ಸತ್ತವರನ್ನು ತಕ್ಷಣ ಮತ್ತು ಹತ್ತಿರದಲ್ಲೇ ಅಂತ್ಯ ಸಂಸ್ಕಾರ ನಡೆಸಬೇಕು ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಸೂಚಿಸಿದೆ.

ಇದಕ್ಕೆ ಪೂರಕವೆಂಬಂತೆ, ಹುಬೇ ಪ್ರಾಂತ್ಯದ ವುಹಾನ್‌ ಮತ್ತು ಚಾಂಗ್‌ಕ್ವಿಂಗ್‌ನಲ್ಲೇ ಮಾರಣಾಂತಿಕ ಕೊರೋನಾ ಹಬ್ಬಿದ್ದು, ಇದೀಗ ಅದೇ ಪ್ರದೇಶದಿಂದ ಭಾರೀ ಪ್ರಮಾಣದ ಎಸ್‌ಒ2 ಬಿಡುಗಡೆಯಾಗುತ್ತಿದೆ. ಕೊರೋನಾದಿಂದ ಸತ್ತವರನ್ನು ಶೀಘ್ರ ಮತ್ತು ಹತ್ತಿರದಲ್ಲೇ ಅಂತಿಮ ಸಂಸ್ಕಾರ ನಡೆಸಿದ ಪ್ರತಿಫಲವಿದು ಎಂದು ಹೇಳಲಾಗುತ್ತಿದೆ. ಹೀಗಾಗಿ, ಈ ಪ್ರಾಣಾಂತಿಕ ಕಾಯಿಲೆಗೆ ಬಲಿಯಾದವರ ಸಂಖ್ಯೆಯನ್ನು ಚೀನಾ ಮುಚ್ಚಿಡಲು ಯತ್ನಿಸುತ್ತಿದೆ ಎನ್ನಲಾಗಿದೆ.

ಒಂದೇ ದಿನ 108 ಜನರ ಸಾವು, 1000 ದಾಟಿತು ಕೊರೋನಾ ಬಲಿ!