ವಾಷಿಂಗ್ಟನ್(ಜು.11)‌: ಪ್ರತಿನಿತ್ಯ 61 ಸಾವಿರದಷ್ಟುಕೊರೋನಾ ಸೋಂಕು, 900ಕ್ಕೂ ಅಧಿಕ ಸಾವು ಸಂಭವಿಸುತ್ತಿದ್ದರೂ ಶಾಲೆಗಳ ಪುನಾರಂಭಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ತಾಕೀತು ಮಾಡಿದ್ದಾರೆ. ಒಂದು ವೇಳೆ, ಶಾಲೆಗಳನÜು್ನ ತೆರೆಯದಿದ್ದರೆ ಅಂತಹ ಸಂಸ್ಥೆಗಳಿಗೆ ಅನುದಾನ ಕಡಿತ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.

ಹಲವು ಸೂಚನೆ ಹೊರತಾಗಿಯೂ ಇನ್ನೂ ಶಾಲಾ-ಕಾಲೇಜುಗಳು ಪುನಾರಂಭವಾಗದಿರುವ ಕುರಿತು ಟ್ವೀಟರ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿರುವ ಟ್ರಂಪ್‌, ‘ಜರ್ಮನಿ, ಡೆನ್ಮಾರ್ಕ್, ನಾರ್ವೆ ದೇಶಗಳು ಶಾಲೆಯನ್ನು ಪುನಾರಂಭಿಸಿವೆ. ಅವರಿಗೆ ಯಾವುದೇ ತೊಂದರೆ ಇಲ್ಲ. ಆದರೆ ಇಲ್ಲಿ ಮಾತ್ರ ಡೆಮಾಕ್ರೆಟ್‌ ಪಕ್ಷದವರಿಗೆ ಶಾಲೆ ಪುನಾರಂಭ ಬೇಕಿಲ್ಲ. ಹಾಗೆಂದು ಅದು ಕೊರೋನಾ ಕಾರಣಕ್ಕಲ್ಲ, ಬದಲಾಗಿ ರಾಜಕೀಯ ಕಾರಣಕ್ಕೆ. ಅಧ್ಯಕ್ಷೀಯ ಚುನಾವಣೆ ನಡೆಯುವ ನವೆಂಬರ್‌ವರೆಗೂ ಶಾಲೆ ಆರಂಭ ಸೂಕ್ತವಲ್ಲ ಎಂಬುದು ಅವರ ಅಭಿಪ್ರಾಯ. ಆದರೆ ಮಕ್ಕಳ ಪಾಲಿಗೆ ಶಾಲೆ ಪುನಾರಂಭ ಅತ್ಯಂತ ಮಹತ್ವದ್ದು. ಹೀಗಾಗಿ ಶಾಲೆಗಳನ್ನು ಪುನಾರಂಭ ಮಾಡದಿದ್ದರೆ ಸರ್ಕಾರದ ನೆರವು ಕಡಿತ ಮಾಡಬೇಕಾಗಿ ಬರಬಹುದು’ ಎಂದು ಟ್ರಂಪ್‌ ಬೆದರಿಕೆ ಹಾಕಿದ್ದಾರೆ.

ಇದೇ ವೇಳೆ ಶಾಲೆ ಪುನಾರಂಭಕ್ಕೆ ಆರೋಗ್ಯ ಇಲಾಖೆ ಪ್ರಕಟಿಸಿರುವ ನಿಯಮಗಳು ಅತ್ಯಂತ ಕಠಿಣ ಮತ್ತು ದುಬಾರಿ. ಅವರು ಶಾಲೆ ಆರಂಭವಾಗಬೇಕೆಂದೂ ಹೇಳುತ್ತಾರೆ, ಆದರೆ ಇದೇ ವೇಳೆ ಶಾಲೆಗಳು ಅಸಾಧ್ಯ ಸಂಗತಿಗಳನ್ನೂ ಪಾಲಿಸಬೇಕೆಂದು ನಿಯಮ ರೂಪಿಸಿವೆ ಎಂದೂ ಟ್ರಂಪ್‌ ಕಿಡಿಕಾರಿದ್ದಾರೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"