ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಅವರ ಮೇಲೆ ಬೊಗೋಟಾದಲ್ಲಿ ಗುಂಡಿನ ದಾಳಿ ನಡೆದಿದ್ದು, ತಲೆಗೆ ಗಾಯಗಳಾಗಿವೆ. ಶಂಕಿತನನ್ನು ಬಂಧಿಸಲಾಗಿದೆ ಮತ್ತು ಉರಿಬೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಮೇಲೆ ಬೊಗೋಟಾದ ಫಾಂಟಿಬಾನ್ ಜಿಲ್ಲೆಯಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಗುಂಡು ಹಾರಿಸಲಾಗಿದ್ದು, ಈ ಘಟನೆಯನ್ನು ರಾಷ್ಟ್ರೀಯ ಪೊಲೀಸರು ದೃಢಪಡಿಸಿದ್ದಾರೆ. ಉರಿಬೆಗೆ ತುರ್ತು ವೈದ್ಯಕೀಯ ಆರೈಕೆ ನೀಡಲಾಗುತ್ತಿದ್ದು, ನಗರದ ಆಸ್ಪತ್ರೆಗಳು ಕಟ್ಟೆಚ್ಚರದಲ್ಲಿವೆ ಎಂದು ಬೊಗೋಟಾ ಮೇಯರ್ ಕಾರ್ಲೋಸ್ ಗ್ಯಾಲನ್ ಮಾಹಿತಿ ನೀಡಿದ್ದಾರೆ.
ಕೊಲಂಬಿಯಾದ ರಾಷ್ಟ್ರೀಯ ಪೊಲೀಸರ ಪ್ರಕಾರ, ಕೊಲಂಬಿಯಾದ ಅಧ್ಯಕ್ಷೀಯ ಅಭ್ಯರ್ಥಿ ಮಿಗುಯೆಲ್ ಉರಿಬೆ ಅವರನ್ನು ಶನಿವಾರ ಬೊಗೋಟಾದ ಫಾಂಟಿಬಾನ್ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಗುಂಡಿಕ್ಕಿ ಕೊಲ್ಲಲು ಪ್ರಯತ್ನಿಸಲಾಗಿದೆ. ಉರಿಬೆ ಅವರ ತಲೆಗೆ ಎರಡು ಬಾರಿ ಗುಂಡು ತಗುಲಿವೆ. ಒಟ್ಟು ಅವರ ಮೇಲೆ 3 ಬಾರಿ ಗುಂಡು ಹಾರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಗರದ ಫಾಂಟಿಬಾನ್ ನೆರೆಹೊರೆಯ ಉದ್ಯಾನವನದಲ್ಲಿ ದಾಳಿ ನಡೆದಿದ್ದು, ಹಿಂದಿನಿಂದ ದಾಳಿಕೋರರು ಗುಂಡು ಹಾರಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಚಿತ್ರಗಳಲ್ಲಿ ಉರಿಬೆ ಟರ್ಬೆ ತಲೆಯಿಂದ ರಕ್ತಸ್ರಾವವಾಗುತ್ತಿರುವುದನ್ನು ತೋರಿಸಲಾಗಿದೆ. ಪಕ್ಕದಲ್ಲಿದ್ದವರು ಸಹಾಯ ಮಾಡಲು ಧಾವಿಸಿದ್ದಾರೆ. ಉರಿಬೆ ತುರ್ತು ವೈದ್ಯಕೀಯ ಆರೈಕೆ ಪಡೆಯುತ್ತಿದ್ದಾರೆ ಎಂದು ಬೊಗೋಟಾ ಮೇಯರ್ ಕಾರ್ಲೋಸ್ ಗಾಲನ್ ದೃಢಪಡಿಸಿದರು ಮತ್ತು ವರ್ಗಾವಣೆಯ ಅಗತ್ಯವಿದ್ದಲ್ಲಿ ನಗರದ ಸಂಪೂರ್ಣ ಆಸ್ಪತ್ರೆ ಜಾಲವು ಜಾಗರೂಕವಾಗಿದೆ ಎಂದು ಹೇಳಿದರು.
ಶಂಕಿತ ಶೂಟರ್‌ನನ್ನು ಸೆರೆಹಿಡಿಯಲಾಗಿದೆ ಎಂದು ಬೊಗೋಟಾ ಮೇಯರ್ ಕಾರ್ಲೋಸ್ ಗ್ಯಾಲನ್ ಹೇಳಿದ್ದಾರೆ. ಕೊಲಂಬಿಯಾದ ಪೊಲೀಸ್ ಮುಖ್ಯಸ್ಥ ಜನರಲ್ ಕಾರ್ಲೋಸ್ ಟ್ರಿಯಾನಾ, ದಾಳಿಯಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ಅಪ್ರಾಪ್ತ ವಯಸ್ಕನನ್ನು ಘಟನಾ ಸ್ಥಳದಲ್ಲಿ ಬಂಧಿಸಲಾಗಿದೆ. ಆತನಿಂದ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಗುಂಡಿನ ದಾಳಿ ನಡೆದ ಸಮಯದಲ್ಲಿ, ಉರಿಬೆ ಟರ್ಬೆ ಅವರೊಂದಿಗೆ ಕೌನ್ಸಿಲರ್ ಆಂಡ್ರೆಸ್ ಬ್ಯಾರಿಯೊಸ್ ಮತ್ತು ಸುಮಾರು 20 ಜನರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲಂಬಿಯಾದ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಸಾಮಾಜಿಕ ಮಾಧ್ಯಮದಲ್ಲಿ 'ಪ್ರಜಾಪ್ರಭುತ್ವದಲ್ಲಿ ರಾಜಕೀಯ ಹಿಂಸೆಗೆ ಯಾವುದೇ ಜಾಗವಿಲ್ಲ. ಈ ದಾಳಿಯು ನಮಗೆ ಎಚ್ಚರಿಕೆ ಗಂಟೆಯಾಗಿದೆ' ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಪೆಟ್ರೋ ಉರಿಬೆ ಅವರ ಕುಟುಂಬಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು, 'ನಿಮ್ಮ ನೋವನ್ನು ಹೇಗೆ ಕಡಿಮೆ ಮಾಡಬೇಕೆಂದು ನನಗೆ ತಿಳಿದಿಲ್ಲ. ಇದು ಕಳೆದುಹೋದ ತಾಯಿಯ ನೋವು ಮತ್ತು ಗಾಯಗೊಂಡ ತಾಯ್ನಾಡಿನ ನೋವು' ಎಂದು ತಿಳಿಸಿದ್ದಾರೆ.
