ನ್ಯೂಯಾರ್ಕ್(ಜು.05): ವಿಶ್ವಾದ್ಯಂತ ಕೊರೋನಾ ವೈರಸ್‌ ಆತಂಕ ಮೂಡಿಸಿದ್ದರೆ ಅಮೆರಿಕದ ಕೆಲ ಹುಡುಗರಿಗೆ ಇದು ಚೆಲ್ಲಾಟವಾಗಿದೆ. ‘ಯಾರಿಗೆ ಮೊದಲು ಕೊರೋನಾ ಬರುತ್ತೆ?’ ಎಂಬ ಸ್ಪರ್ಧೆಯ ಪಾರ್ಟಿಯನ್ನು ಅಮೆರಿಕದ ಟಸ್ಕಲೂಸಾ ಎಂಬಲ್ಲಿ ವಿದ್ಯಾರ್ಥಿಗಳು ನಡೆಸಿದ ಘಟನೆ ಬೆಳಕಿಗೆ ಬಂದಿದೆ.

59 ಚೀನೀ ಆ್ಯಪ್‌ ನಿಷೇಧ; ಭಾರತೀಯ ಎಂಜಿನೀಯರ್‌ಗಳು ತಯಾರಿಸ್ತಾರಾ ಹೊಸ ಆ್ಯಪ್‌?

‘ಉದ್ದೇಶಪೂರ್ವಕವಾಗಿ ವಿದ್ಯಾರ್ಥಿಗಳು ಪಾರ್ಟಿ ನಡೆಸಿದ್ದಾರೆ. ಪಾರ್ಟಿ ಸಂಘಟಕರು ಕೊರೋನಾ ಪಾಸಿಟಿವ್‌ ಅತಿಥಿಗಳನ್ನು ಆಹ್ವಾನಿಸಿದ್ದಾರೆ. ಕೊರೋನಾ ಸೋಂಕಿತರ ಜತೆ ಕೊರೋನಾ ಬರದವರು ಪಾರ್ಟಿಯಲ್ಲಿ ಪಾಲ್ಗೊಳ್ಳಬೇಕು. ಅದರಲ್ಲಿ ಯಾರಿಗೆ ಮೊದಲು ಕೊರೋನಾ ಸೋಂಕು ತಗುಲುತ್ತದೋ ಅವರಿಗೆ ಬಹುಮಾನ ಎಂಬುದು ಪಾರ್ಟಿಯ ಧ್ಯೇಯ’ ಎಂದು ನಗರದ ಮೇಯರ್‌ ಸೋನಿಯಾ ಮೆಕಿಂಸ್ಟ್ರಿ ಹೇಳಿದ್ದಾರೆ.

ಚೀನಾ ಸಂಘರ್ಷ: ನಿಜಕ್ಕೂ ಭಾರತದ ಪರ ನಿಲ್ಲುತ್ತಾ ಅಮೆರಿಕಾ?

‘ಪಾರ್ಟಿಗೆ ಬಂದವರು ಪಾಟ್‌ ಒಂದರಲ್ಲಿ ಹಣ ಹಾಕಬೇಕು. ಆ ಹಣವನ್ನು ಕೊರೋನಾ ಮೊದಲು ಬಂದವರಿಗೆ ಬಹುಮಾನ ನೀಡಲಾಗುತ್ತದೆ’ ಎಂದು ಆಯೋಜಕರು ಹೇಳಿದ್ದರು ಎಂದು ಮೇಯರ್‌ ತಿಳಿಸಿದ್ದಾರೆ. ಈ ಆಯೋಜಕರ ವಿರುದ್ಧ ಕ್ರಮ ಜರುಗಿಸುವ ಹೇಳಿಕೆಯನ್ನು ಅವರು ನೀಡಿಲ್ಲ.