ರಿಯಲ್ ಧುರಂಧರ್ ಸೀನ್, ದಾವುದ್ ಇಬ್ರಾಹಿಂ ಆಪ್ತ ಸಲೀಂ ದೋಲಾ ಅರೆಸ್ಟ್,ಪಾಕಿಸ್ತಾನ ಗಲಿಬಿಲಿ, ಭಾರತದ ಮೇಲೆ ಭಯೋತ್ಪಾದಕರ ಬಿಟ್ಟು ಖುಷಿಪಡುವ ಒಬ್ಬೊಬ್ಬರನ್ನೇ ಹೊಸಕಿ ಹಾಕುವ ಕೆಲಸ ಮುಂದುವರಿದಿದೆ.
ನವದೆಹಲಿ (ಏ.25) ಭಾರತದ ಮೋಸ್ಟ್ ವಾಂಟೆಡ್ ಉಗ್ರರನ್ನು ತನ್ನದೇ ಶೈಲಿಯಲ್ಲಿ ಮುಗಿಸುವ ಕೆಲಸ ಕಳೆದ ಕೆಲ ವರ್ಷಗಳಿಂದ ತೀವ್ರಗೊಂಡಿದೆ. ಪಾಕಿಸ್ತಾನದಲ್ಲಿ ಅನಾಮಿಕನ ಗುಂಡಿನ ದಾಳಿಗೆ ಸತ್ತವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ದಾಳಿಯಾದಾಗಲೂ ಪಾಕಿಸ್ತಾನದಲ್ಲಿ ಆತಂಕ ಹೆಚ್ಚಾಗುತ್ತಿದೆ. ಇದೀಗ ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಪಾಕಿಸ್ತಾನದಲ್ಲಿ ಸೇನಾ ಭದ್ರತೆಯೊಂದಿಗೆ ಕಳೆಯುತ್ತಿರುವ ದಾವುದ್ ಇಬ್ರಾಹಿಂ ರೆಕ್ಕೆಗಳನ್ನು ಕತ್ತರಿಸಲಾಗುತ್ತಿದೆ. ದಾವುದ್ ಇಬ್ರಾಹಿಂ ಕೂಡ ಭಾರತದ ರೇಡಾರ್‌ನಲ್ಲಿದ್ದಾನೆ. ಇದೀಗ ದಾವುದ್ ಇಬ್ರಾಹಿಂ ಆಪ್ತ, ಡ್ರಗ್ಸ್ ದಂಧೆಕೋರ ಸಲೀಂ ದೋಲಾನನ್ನು ಅರೆಸ್ಟ್ ಮಾಡಲಾಗಿದೆ.
ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ
ಅಂತಾರಾಷ್ಟ್ರೀಯ ಡ್ರಗ್ಸ್ ಮಾಫಿಯಾ ಮೂಲಕ ಹಲವು ದೇಶಗಳಲ್ಲಿ ಮಾಫಿಯಾ ನಡೆಸುತ್ತಿದ್ದ ಸಲೀಂ ದೋಲಾನನ್ನು ಟರ್ಕಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಭಾರತದ ಭದ್ರತಾ ಪಡೆಗಳು ಅರೆಸ್ಟ್ ಖಚಿತಪಡಿಸಿದೆ. ದಾವುದ್ ಇಬ್ರಾಹಿಂ ಆಶ್ರಯದಲ್ಲಿ ಸಲೀಂ ದೋಲಾ ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಡ್ರಗ್ ಮಾಫಿಯಾ ನಡೆಸುತ್ತಿದ್ದ. ಇದೀಗ ಟರ್ಕಿಯಲ್ಲಿ ಈತ ಸಿಕ್ಕಿ ಬಿದ್ದಿದ್ದಾನೆ.
ದಾವುದ್ ಇಬ್ರಾಹಿಂ ಆಪ್ತನಾಗಿರುವ ದೋಲಾ, ದಾವುದ್ ಜೊತೆಯಲ್ಲೇ ಮುಂಬೈನಿಂದ ದುಬೈಗೆ ಸ್ಥಳಾಂತರಗೊಂಡಿದ್ದ. ಆದರೆ ಮುಂಬೈ ಸೇರಿದಂತೆ ಭಾರತದಲ್ಲಿ ತನ್ನ ಮಾಫಿಯಾ ದಂಧೆ ನಡೆಸುತ್ತಿದ್ದ. ದುಬೈ ಸೇರಿದಂತೆ ಹಲವು ದೇಶಗಳಲ್ಲಿ ನೆಟವರ್ಕ್ ಮೂಲಕ ಮಾಫಿಯಾ ನಡೆಸುತ್ತಿದ್ದ. ಅಂಡರ್‌ವರ್ಲ್ಡ್ ಜೊತೆಗೂ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾನೆ. 2025ರಲ್ಲಿ ಮುಂಬೈ ಪೊಲೀಸರು ಈತನ ಹಲವು ಆಪ್ತರನ್ನು ಮುಂಬೈನಲ್ಲಿ ಬಂಧಿಸಿದ್ದರು. ಈತನ ಕೆಲ ಕುಟುಂಬಸ್ಥರನ್ನು ಇದೇ ಮಾಫಿಯಾ ಗ್ಯಾಂಗ್ ಪ್ರಕರಣದಲ್ಲಿ ಅರೆಸ್ಟ್ ಮಾಡಲಾಗಿದೆ. ಆದರೆ ಸಲೀಂ ದೋಲಾ ಕುರಿತು ಸುಳಿವು ಸಿಕ್ಕಿರಲಿಲ್ಲ. ಇದೀಗ ಟರ್ಕಿಯಲ್ಲಿ ಈತ ಅರೆಸ್ಟ್ ಆಗಿದ್ದಾನೆ.
ರೆಡ್ ಕಾರ್ನರ್ ನೋಟಿಸ್
ಸಲೀಂ ದೋಲಾ ವಿರುದ್ದ ಭಾರತ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಇದೀಗ ಟರ್ಕಿಯಿಂದ ದೋಲಾನನ್ನು ಭಾರತಕ್ಕೆ ಕರೆತರಲು ಹಲವು ಕಾನೂನು ತೊಡಕುಗಳಿವೆ. ಆದರೆ ಭಾರತ ಪ್ರಯತ್ನಿಸಲಿದೆ ಎಂದಿದೆ. ಮುಂಬೈ ಸರಣಿ ಸ್ಫೋಟ ಹಾಗೂ ದಾವುದ್ ಇಬ್ರಾಹಿಂ ನಡೆಸುತ್ತಿರುವ ಹಲವು ಹವಾಲಾ ನೆಟ್‌ವರ್ಕ್ ಕುರಿತು ಮಾಹಿತಿ ಈತನ ಬಳಿ ಇದೆ.


