Climate Change: ಅಲಾಸ್ಕಾದಿಂದ ರಷ್ಯಾಗೆ ವಲಸೆ ಹೋಗುತ್ತಿರುವ ಹಿಮ ಕರಡಿಗಳು

 

  • ಅಲಾಸ್ಕಾದಿಂದ ರಷ್ಯಾಕ್ಕೆ ಹಿಮಕರಡಿಗಳ ವಲಸೆ
  • ಜಾಗತಿಕ ತಾಪಮಾನ ಏರಿಕೆ ಹಿನ್ನೆಲೆ
  • ಅಲಾಸ್ಕಾದಲ್ಲಿ ತಾಪಮಾನ ಹೆಚ್ಚಳ
Climate change forces polar bears to migrate from Alaska to Russia akb

ಅಲಾಸ್ಕಾ(ಜ.4):  ಹವಾಮಾನ ಬದಲಾವಣೆ ಹಾಗೂ ತಾಪಮಾನದ ಹೆಚ್ಚಳದಿಂದಾಗಿ ಅಲಾಸ್ಕಾದಿಂದ ರಷ್ಯಾಕ್ಕೆ ಹಿಮಕರಡಿಗಳು ಗಣನೀಯ ಸಂಖ್ಯೆಯಲ್ಲಿ ವಲಸೆ ಹೋಗುತ್ತಿರುವ ವಿಚಾರ ಬೆಳಕಿಗೆ ಬಂದಿದೆ. ಪರಿಣಾಮ 2001 ರಿಂದ 2010 ರ ನಡುವೆ, ಅಲಾಸ್ಕಾದ ಹಿಮಕರಡಿಗಳ ಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎನ್ನುವುದನ್ನು ತೋರಿಸುವ ಹಲವು ಚಿಹ್ನೆಗಳಲ್ಲಿ ಪ್ರಾಣಿಗಳ ಜನಸಂಖ್ಯೆ ಮತ್ತು ವಾಸಸ್ಥಳದಲ್ಲಿನ ಬದಲಾವಣೆ ಕೂಡ ಒಂದಾಗಿದೆ. ಅಲಾಸ್ಕಾದ ಹಿಮಕರಡಿಗಳ ಜನಸಂಖ್ಯೆಯು ವೇಗವಾಗಿ ಕ್ಷೀಣಿಸುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. 

2001 ರಿಂದ 2010 ರ ನಡುವೆ, ಅಲಾಸ್ಕಾ(  Alaska) ದ ಹಿಮಕರಡಿ ಜನಸಂಖ್ಯೆಯಲ್ಲಿ 40 ಪ್ರತಿಶತದಷ್ಟು ಇಳಿಕೆ ಕಂಡು ಬಂದಿದೆ ಎಂದು ವರದಿಯಾಗಿದೆ. ಅಲಾಸ್ಕಾದಲ್ಲಿ ಹೆಚ್ಚುತ್ತಿರುವ ತಾಪಮಾನದಿಂದಾಗಿ ಅಲಾಸ್ಕಾದಿಂದ ರಷ್ಯಾ (Russia) ಕ್ಕೆ ಹಿಮಕರಡಿ (polar bear) ಗಳು ವಲಸೆ ಹೋಗುತ್ತಿರುವುದೇ ಇಲ್ಲಿ ಹಿಮ ಕರಡಿಗಳ ಸಂಖ್ಯೆ ಇಳಿಮುಖ ಆಗಲು ಕಾರಣವಾಗಿದೆ. 

ಭಾರತೀಯ ಸೇನೆಗೆ ಸಿಕ್ಕ ಹೆಜ್ಜೆ ಗುರುತು ಯೇತಿಯದ್ದಲ್ಲ!: ನೇಪಾಳ ಕೊಟ್ಟ ಸ್ಪಷ್ಟನೆ ಏನು?

ಕಳೆದ 50 ವರ್ಷಗಳಲ್ಲಿ, ಅಲಾಸ್ಕಾದ ವಾರ್ಷಿಕ ಸರಾಸರಿ ತಾಪಮಾನದಲ್ಲಿ 4.8 ಡಿಗ್ರಿ ಸೆಲ್ಸಿಯಸ್ ಏರಿಕೆ ಕಂಡು ಬಂದಿದೆ. ಈ ಏರಿಕೆಯು ಸಮುದ್ರದ ಮಂಜುಗಡ್ಡೆ (sea ice)ಯ ಕರಗುವಿಕೆಗೆ  ಕಾರಣವಾಯಿತು, ಇದು ಕರಡಿಗಳ ಬೇಟೆಯ ಸ್ಥಳದ ಮರುವಿಂಗಡಣೆ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಲಾಸ್ಕಾದಿಂದ ರಷ್ಯಾಕ್ಕೆ ಹಿಮ ಕರಡಿಗಳ ವಲಸೆಯಿಂದಾಗಿ ರಷ್ಯಾದ ರಾಂಗೆಲ್ ದ್ವೀಪ ( Wrangel Island) ದಲ್ಲಿ ಹಿಮಕರಡಿಗಳ ಸಂಖ್ಯೆಯಲ್ಲಿ ಭಾರಿ ಹೆಚ್ಚಳಕ್ಕೆ ಕಾರಣವಾಗಿದೆ.  (ಸಮುದ್ರದ ಮಂಜುಗಡ್ಡೆ ಅಥವಾ ಸೀ ಐಸ್ ಎಂದರೆ ಸಮುದ್ರದ ನೀರು ಅದರ ಘನೀಕರಿಸುವ ತಾಪಮಾನದ ಸರಿಸುಮಾರು -2 ° C ಅಥವಾ 29 ° F ಗಿಂತ ಕಡಿಮೆ ತಂಪಾದಾಗ ಸಮುದ್ರದ ಮಂಜುಗಡ್ಡೆಯು ರೂಪುಗೊಳ್ಳುತ್ತದೆ. ) 

Polar Bear: ಹಲ್ಲು ನೋವೆಂದು ಬಂದ ಹಿಮಕರಡಿಗೆ ರೂಟ್ ಕೆನಲ್ ಸರ್ಜರಿ ಮಾಡಿದ ಡೆಂಟಿಸ್ಟ್

ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಹವಾಮಾನ ಬದಲಾವಣೆಯ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕರು ಹವಾಮಾನ ಬಿಕ್ಕಟ್ಟಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಕೆಲವರು ಅದನ್ನು ನಿರಾಕರಿಸಿದ್ದಾರೆ. ಇನ್ನು ಹಿಮಕರಡಿಗಳು ತಂಪಾದ ಸ್ಥಳಗಳಿಗೆ ವಲಸೆ ಹೋಗುತ್ತಿರುವುದು ಇದೇ ಮೊದಲಲ್ಲ. 2019 ರಲ್ಲಿ, ಸುಮಾರು 60 ಹಿಮಕರಡಿಗಳು ರಷ್ಯಾದ ದೂರದ ಪ್ರದೇಶವಾದ ರೈರ್ಕಾಯ್ಪಿ (Ryrkaypiy)ಯಲ್ಲಿ ಕಾಣಿಸಿಕೊಂಡಿದ್ದವು.

 

Latest Videos
Follow Us:
Download App:
  • android
  • ios