Asianet Suvarna News Asianet Suvarna News

Polar Bear: ಹಲ್ಲು ನೋವೆಂದು ಬಂದ ಹಿಮಕರಡಿಗೆ ರೂಟ್ ಕೆನಲ್ ಸರ್ಜರಿ ಮಾಡಿದ ಡೆಂಟಿಸ್ಟ್

ಜನ ಹಲ್ಲಿಗೆ ರೂಟ್ ಕೆನಲ್ ಸರ್ಜರಿ ಮಾಡಿಸೋದು ಹೌದು, ಆದರೆ ಕರಡಿಗೂ ರೂಟ್ ಕೆನಲ್ ಸರ್ಜರಿ ಮಾಡಿಸಿದ್ದು ಕೇಳಿದ್ದೀರಾ ? ಮುರಿದ ಹಲ್ಲು ಸರಿ ಮಾಡೋಕೆ ಎಷ್ಟೆಲ್ಲಾ ಸರ್ಕಸ್ ನೋಡಿ

Polar Bear Undergoes Root Canal Surgery to Fix Broken Tooth dpl
Author
Bangalore, First Published Nov 20, 2021, 5:05 PM IST
  • Facebook
  • Twitter
  • Whatsapp

ನಿಮ್ಮ ಹಲ್ಲಿನ(Dentist) ಚಿಕಿತ್ಸೆಗೆ ಏನಾದರೂ ಮಾಡಬೇಕೆಂದರೆ ಏನು ಮಾಡುತ್ತೀರಿ ? ನೇರ ನಿಮ್ಮ ಡೆಂಟಿಸ್ಟ್ ಬಳಿ ಹೋಗುತ್ತೀರಿ ಅಲ್ವಾ ? ನಿಮಗೆ ಗೊತ್ತೇ ? ಪ್ರಾಣಿಗಳಿಗೂ ಸ್ಪೆಷಲ್ ಡೆಂಟಿಸ್ಟ್‌ಗಳಿದ್ದಾರೆ. ಪ್ರಾಣಿಗಳೂ ದಂತವೈದ್ಯರಿಂದ ಚಿಕಿತ್ಸೆ ಪಡೆಯುತ್ತೆ ಎನ್ನುವುದು ನಿಮಗೆ ಗೊತ್ತೇ ?

ಪಶುವೈದ್ಯರು ಕಾಮನ್ ಎನಿಸಿದರೂ ಇಂದಿನ ದಿನಕ್ಕಂತೂ ಇದು ಅತೀ ಸಾಮಾನ್ಯವಾಗಿದ್ದರೂ, ಪ್ರಾಣಿಗಳ ದಂತವೈದ್ಯರು ದೊಡ್ಡ ದೊಡ್ಡ ಪ್ರಾಣಿಗಳಿಗೆ ಚಿಕಿತ್ಸೆ ಕೊಡೋದು ಅಂದ್ರೆ ಸುಮ್ನೇನಾ ? ಖಂಡಿತಾ ಇದೊಂದು ಚಾಲೆಂಜಿಂಗ್ ಟಾಸ್ಕ್. ಯುನೈಟೆಡ್ ಕಿಂಗ್‌ಡಮ್‌ನ ಹಿಮಕರಡಿಯೊಂದರ(Polar bear) ಬಾಯಿಯಲ್ಲಿ ಬಾವು ಬೆಳೆಯುತ್ತಿತ್ತು. ಇದನ್ನ ತಡೆಯಲು ಮತ್ತು ಚಿಕಿತ್ಸೆಗಾಗಿ ಹಿಮಕರಡಿಯನ್ನು ಒಂದು ಗಂಟೆ ಅವಧಿಯ ರೂಟ್ ಕೆನಾಲ್ ಚಿಕಿತ್ಸೆಗೆ(Treatment) ಒಳಗಾಗಬೇಕಾಯಿತು.

ಹೊಸಪೇಟೆ: ದರೋಜಿ ಕರಡಿಧಾಮದಲ್ಲೀಗ ಸಫಾರಿ ಸೇವೆ..!

ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್‌ನಲ್ಲಿರುವ ಮೂರು ವರ್ಷದ ಸಿಸು(Sisu) ಎಂಬ ಕರಡಿ ವಿನೋದ ಮತ್ತು ಫ್ರೆಂಡ್ಲೀ ಜೀವಿ ಎಂದು ತಿಳಿದುಬಂದಿದೆ. ಆದರೆ ತಡವಾಗಿ ಅದರ ವರ್ತನೆಯಲ್ಲಿ ಬದಲಾವಣೆ ಕಂಡುಬಂದಿತ್ತು. ಕರಡಿ ಕೆಲವು ರೀತಿಯ ನೋವಿನಿಂದ ಬಳಲುತ್ತಿತ್ತು. ಹತ್ತಿರದಿಂದ ನೋಡಿದಾಗ ಉದ್ಯಾನವನದ ಕೀಪರ್‌ಗಳು ಕಡರಿಯ ಮೂರು ಇಂಚಿನ ಕೋರೆಹಲ್ಲು ಮುರಿದುಹೋಗಿರುವುದನ್ನು ತಿಳಿದುಕೊಂಡಿದ್ದಾರೆ. ಇದರ ನಂತರ ಕರಡಿಗೆ ಚಿಕಿತ್ಸೆ ನೀಡಲು ಪ್ರಾಣಿಗಳ ದಂತವೈದ್ಯರಾದ ಡಾ ಪೀಟರ್ ಕೆರ್ಟೆಸ್ಜ್ ಅವರನ್ನು ಕರೆಸಲಾಯಿತು.

ವರದಿಯ ಪ್ರಕಾರ ನರ್ಸ್ ಮೊನಿಕಾ ಮಜುರಿಕಿವಿಕ್ಜ್ ಜೊತೆಗೆ ಕೆರ್ಟೆಸ್ಜ್ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ. ಪ್ರಮಾಣಿತ ಪ್ರಕ್ರಿಯೆಯ ಭಾಗವಾಗಿ, ಸಿಸು ಮುರಿದ ಹಲ್ಲಿನ ಸೋಂಕು ತಗುಲಿದ್ದನ್ನು ಸ್ವಚ್ಛಗೊಳಿಸಿ ಅದನ್ನು ತುಂಬಿದ್ದಾರೆ. ಚಿಕಿತ್ಸೆಯ ನಂತರ ಕರಡಿ ಶಾಂತವಾಗಿತ್ತು. ಚೇತರಿಸಿಕೊಳ್ಳಲು ಅದರ ಗುಹೆಯಲ್ಲಿ ಇರಿಸಲಾಯಿತು.

ಕಾರಿನೊಳಗೆ ಸೇರಿಕೊಂಡ ಕರಡಿ, ಸೀಟು, ಡ್ಯಾಶ್‌ಬೋರ್ಡ್ ಎಲ್ಲಾ ಪುಡಿ ಪುಡಿ!

ಚಿಕಿತ್ಸೆಯ ಕುರಿತು ಮಾತನಾಡಿದ ಕೆರ್ಟೆಸ್, ಕರಡಿಯ ಯೋಗಕ್ಷೇಮದ ಬಗ್ಗೆ ಗಮನ ಹರಿಸುವುದಕ್ಕಾಗಿ ಕೀಪರ್‌ಗಳನ್ನು ಶ್ಲಾಘಿಸಿದ್ದಾರೆ. ಪ್ರಾಣಿಯು ಈಗ ತನ್ನ ಜೀವನದುದ್ದಕ್ಕೂ ನೋವುರಹಿತ ಮತ್ತು ಸೋಂಕು ಮುಕ್ತ ಹಲ್ಲು ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ. ಯಾರ್ಕ್‌ಷೈರ್ ವೈಲ್ಡ್‌ಲೈಫ್ ಪಾರ್ಕ್ ತನ್ನ ಟ್ವಿಟ್ಟರ್ ಟೈಮ್‌ಲೈನ್‌ನಲ್ಲಿ ಕರಡಿಯ ರೂಟ್ ಕೆನಾಲ್ ಚಿಕಿತ್ಸೆಯ ವೀಡಿಯೊವನ್ನು ಹಂಚಿಕೊಂಡಿದೆ. ಪೋಸ್ಟ್‌ಗೆ ಕ್ಯಾಪ್ಶನ್ ಕೊಟ್ಟು, ಹಿಮಕರಡಿಗೆ ಹಲ್ಲುನೋವು ಇದ್ದಾಗ ಏನಾಗುತ್ತದೆ? ಸಹಜವಾಗಿ ದಂತವೈದ್ಯರ ಬಳಿಗೆ ಹೋಗುತ್ತಾನೆ! ಸಿಸು ಹಿಮಕರಡಿ ಮೊದಲ ಬಾರಿ ದಂತವೈದ್ಯರನ್ನು ನೋಡಲು ಹೋಗಿದ್ದನ್ನು ಇಲ್ಲಿ ನೋಡಿ ಎಂದು ಬರೆಯಲಾಗಿದೆ.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ, ಕ್ಲಿಪ್ ಹಲವಾರು ಕಾಮೆಂಟ್‌ಗಳ ಜೊತೆಗೆ 4 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಸ್ವೀಕರಿಸಿದೆ. ಕ್ಲಿಪ್‌ಗೆ ಪ್ರತಿಕ್ರಿಯಿಸಿದ ನೆಟಿಜನ್‌ಗಳು ಕರಡಿ ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ. 

ಹಿಮಕರಡಿಗಳ ಅಂದಾಜು ತೂಕ ಮತ್ತು ಗಾತ್ರ:

ಹಿಮಕರಡಿಯ ಗಾತ್ರದಲ್ಲಿ ಹೋಲುವ ಏಕೈಕ ಕರಡಿ ಎಂದರೆ ಕೊಡಿಯಾಕ್ ಕರಡಿ. ಇದು ಕಂದು ಕರಡಿಯ ಉಪಜಾತಿಯಾಗಿದೆ. ವಯಸ್ಕ ಗಂಡು ಹಿಮಕರಡಿಗಳು 350–700 ಕೆಜಿ ತೂಗುತ್ತವೆ. ಒಟ್ಟು ಉದ್ದದಲ್ಲಿ 2.4–3 ಮೀಟರ್ (7 ಅಡಿ 10 ಇಂಚು–9 ಅಡಿ 10 ಇಂಚು) ಇರುತ್ತವೆ. ವಯಸ್ಕ ಹೆಣ್ಣುಗಳು ಪುರುಷರಿಗಿಂತ ಸರಿಸುಮಾರು ಅರ್ಧದಷ್ಟು ಗಾತ್ರವನ್ನು ಹೊಂದಿರುತ್ತವೆ. ಸಾಮಾನ್ಯವಾಗಿ 150-250 ಕೆಜಿ ತೂಕವನ್ನು ಹೊಂದಿರುತ್ತವೆ. ಗರ್ಭಿಣಿಯಾಗಿದ್ದಾಗ ಹೆಣ್ಣು ಕರಡಿಗಳು 500 ಕೆಜಿವರೆಗೆ ತೂಗುತ್ತದೆ.

ಸಾಮಾನ್ಯ ಜೀವಿತಾವಧಿ:

ಹಿಮಕರಡಿಗಳು ಅಪರೂಪವಾಗಿ 25 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ. ದಾಖಲೆಯ ಅತ್ಯಂತ ಹಳೆಯ ಕಾಡು ಕರಡಿ 32 ನೇ ವಯಸ್ಸಿನಲ್ಲಿ ಸತ್ತಿತ್ತು. ಆದರೆ ಅತ್ಯಂತ ಹಳೆಯ ಹಿಮಕರಡಿ 1991 ರಲ್ಲಿ ಮರಣಹೊಂದಿದ ಹೆಣ್ಣು ಕರಡಿಯಾಗಿತ್ತು. ಅದರ ವಯಸ್ಸು 43. ಹಿಮಕರಡಿಗಳ ಸಾವಿನ ಕಾರಣಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾಗಿಲ್ಲ, ಏಕೆಂದರೆ ಅವುಗಳ ದೇಹ ಶೀತಲ ಆವಾಸಸ್ಥಾನದಲ್ಲಿ ಅಪರೂಪವಾಗಿ ಕಂಡುಬರುತ್ತವೆ. ಕಾಡಿನಲ್ಲಿ, ಹಳೆಯ ಹಿಮಕರಡಿಗಳು ಆಹಾರವನ್ನು ಹಿಡಿಯಲು ತುಂಬಾ ದುರ್ಬಲವಾಗುತ್ತವೆ. ಕ್ರಮೇಣ ಹಸಿವಿನಿಂದ ಸಾಯುತ್ತವೆ.

Follow Us:
Download App:
  • android
  • ios