ಭಾರತಕ್ಕೆ ಸಿಕ್ಕ ಹೆಜ್ಜೆ ಗುರುತು ಯೇತಿಯದ್ದಲ್ಲ! ಹೆಜ್ಜೆ ಗುರುತು ಯೇತಿಯದ್ದೆಂಬ ಭಾರತದ ವಾದ ತಳ್ಳಿ ಹಾಕಿದ ನೇಪಾಳ| ಭಾರತಕ್ಕೆ ಸಿಕ್ಕ ಹೆಜ್ಜೆ ಗುರುತುಗಳು ಹಿಮ ಕರಡಿಗಳದ್ದು ಎಂದ ನೇಪಾಳ

ನವದೆಹಲಿ[ಮೇ.03]: ಶತಮಾನಗಳಿಂದ ಸಂಶೋಧಕರಿಗೆ ನಿಗೂಢವಾಗಿಯೇ ಉಳಿದ ಹಿಮಮಾನವ ‘ಯೇತಿ’ ಹೆಜ್ಜೆ ಗುರುತು ತನಗೆ ಸಿಕ್ಕಿದೆ ಎಂಬ ಭಾರತೀಯ ಸೇನೆಯ ಹೇಳಿಕೆಯನ್ನು ನೇಪಾಳ ತಳ್ಳಿ ಹಾಕಿದೆ. ಅಲ್ಲದೆ, ಹಿಮಾಲಯದಲ್ಲಿ ಕಂಡು ಬಂದಿರುವ ಭಾರೀ ದೊಡ್ಡ ಪ್ರಮಾಣದ ಹೆಜ್ಜೆ ಗುರುತುಗಳು ಹಿಮಕರಡಿಗಳದ್ದು ಇರಬಹುದು ಎಂದು ನೇಪಾಳ ಸೇನೆ ಪ್ರತಿಪಾದಿಸಿದೆ.

ಭಾರತೀಯ ಸೇನೆಗೆ ಸೆರೆಸಿಕ್ಕ ಹಿಮಮಾನವನ ಹೆಜ್ಜೆ ಗುರುತು!

ಭಾರತದ ಸೇನೆಗೆ ಯೇತಿ ಹೆಜ್ಜೆ ಗುರುತುಗಳು ಸಿಕ್ಕಿವೆ ಎನ್ನಲಾದ ಹಿಮಾಲಯ ಪ್ರದೇಶದಲ್ಲಿ ಆಗ್ಗಾಗ್ಗೆ ಹಿಮಕರಡಿಗಳು ಬಂದು ಹೋಗುತ್ತಿರುತ್ತವೆ. ಆ ಹೆಜ್ಜೆ ಗುರುತುಗಳು ಅವುಗಳದ್ದೇ ಆಗಿರಬಹುದು ಎಂದು ನೇಪಾಳ ಸೇನೆಯ ಅಧಿಕಾರಿಯೊಬ್ಬರು ಹೇಳಿದರು.

Scroll to load tweet…

ನೇಪಾಳದಲ್ಲಿರುವ ಮಾಕಲು ಬೇಸ್‌ಕ್ಯಾಂಪ್‌ನಲ್ಲಿ ಏ.9ರಂದು ಯೇತಿಯದ್ದು ಎಂದು ಊಹಿಸಲಾದ ಹೆಜ್ಜೆ ಗುರುತುಗಳನ್ನು ಸೇನೆಯ ಪರ್ವತಾರೋಹಣ ತಂಡ ಪತ್ತೆ ಮಾಡಿದೆ ಭಾರತೀಯ ಸೇನೆ ಹೇಳಿಕೊಂಡಿತ್ತು. ಅಲ್ಲದೆ, ಈ ಸಂಬಂಧ ಭಾರತೀಯ ಸೇನೆ ಹಲವು ಫೋಟೋಗಳನ್ನು ಲಗತ್ತಿಸಿರುವ ಫೋಟೋಗಳನ್ನು ಟ್ವೀಟ್‌ ಮಾಡಿತ್ತು. ಅಲ್ಲದೆ, ಈ ಹೆಜ್ಜೆ ಗುರುತು 32*15 ಇಂಚ್‌ಗಳಷ್ಟಿದೆ ಎಂದು ಸೇನೆ ಹೇಳಿತ್ತು.

ಹಿಮಮಾನವನ ಹೆಜ್ಜೆ ಜಾಡು ಅರಸುತ್ತಾ: ವಿಚಿತ್ರ ಸಂಗತಿಗಳೇ ಸಿಗುತ್ತವೆ ಕೆದಕುತ್ತಾ!

ನಿಗೂಢ ಹಿಮ ಮಾನವನ ಹೆಜ್ಜೆ ಗುರುತು ಪತ್ತೆ : ಸೇನೆಯಿಂದ ಬಹಿರಂಗ