Asianet Suvarna News Asianet Suvarna News

ಸರ್ಕಸ್‌ ಮಾಡುವ ವೇಳೆ ಗುರಿ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಸ್ಟಂಟ್‌ಮನ್

  • 20 ಅಡಿಯಿಂದ ಕೆಳಕ್ಕೆ ಬಿದ್ದ ಸ್ಟಂಟ್‌ಮನ್
  • ಜರ್ಮನಿಯಲ್ಲಿ ಸರ್ಕಸ್‌ ಮಾಡುವ ವೇಳೆ ಅವಘಡ
  • ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌
Circus performer crashes 20 feet to the ground after stunt goes wrong in Germany akb
Author
Bangalore, First Published Jan 25, 2022, 6:47 PM IST

ಜರ್ಮನಿ(ಜ. 25): ಸರ್ಕಸ್ ಮಾಡುವ ವೇಳೆ ಸ್ಕೇಟರ್‌ ಓರ್ವ ಆಯತಪ್ಪಿ 20 ಅಡಿಯಿಂದ ಕೆಳಕ್ಕೆ ಬಿದ್ದಿದ್ದು, ಈ  ಭಯಾನಕ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.  ಜರ್ಮನಿಯಲ್ಲಿ(Germany) ಕಳೆದ ಡಿಸೆಂಬರ್‌ನಲ್ಲಿ ನಡೆದ ಘಟನೆ ಇದಾಗಿದ್ದು, ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆಯ ಸಂಪೂರ್ಣ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಲೈವ್ ಸರ್ಕಸ್ ಪ್ರದರ್ಶನದ ಸಮಯದಲ್ಲಿ ರೋಲರ್‌ಬ್ಲೇಡ್‌ಗಳ (rollerblades) ಮೇಲೆ ಸ್ಟಂಟ್‌ಮ್ಯಾನ್ ಸರ್ಕಸ್‌ ಮಾಡುತ್ತಿದ್ದು, ಈ ವೇಳೆ ಆಯತಪ್ಪಿ ಆತ 20 ಅಡಿಗಳಷ್ಟು ಕೆಳಗೆ ಬಿದ್ದಿದ್ದಾನೆ. ಜರ್ಮನಿಯ ಡ್ಯೂಸ್‌ಬರ್ಗ್‌ನಲ್ಲಿರುವ (Duisburg) ಫ್ಲಿಕ್ ಫ್ಲಾಕ್ ಸರ್ಕಸ್‌ನಲ್ಲಿ (Flic Flac circus) ಈ ಘಟನೆ ನಡೆದಿದೆ. ಕೆಳಗೆ ಬಿದ್ದ ಸಾಹಸ ಮಾಡುತ್ತಿದ್ದವನನ್ನು  ವೃತ್ತಿಪರ ಸ್ಕೇಟರ್ ಮತ್ತು ಪ್ರದರ್ಶಕ ಲುಕಾಸ್ಜ್ ಮಾಲೆವ್ಸ್ಕಿ  (Lukasz Malewski)ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಲುಕಾಸ್‌ ಕೈ ಮಣ್ಣಿಕಟ್ಟು ಸ್ವಲ್ಪ ಮುರಿತಕ್ಕೊಳಗಾಗಿದ್ದು ಬಿಟ್ಟರೆ ಬೇರೇನೋ ಆಗದ ಕಾರಣ ದೊಡ್ಡ ಅವಘಡವೊಂದರಿಂದ ಅದೃಷ್ಟವಶಾತ್ ಪಾರಾಗಿದ್ದಾರೆ.

ಲುಕಾಸ್‌ ಟೇಕ್-ಆಫ್ ಮಾಡುವ ವೇಳೆ ತಪ್ಪಾಗಿ ಹೆಜ್ಜೆ ಇಟ್ಟ ಪರಿಣಾಮ ಈ ಮಾರಣಾಂತಿಕ  ಅನಾಹುತ ಸಂಭವಿಸಿತ್ತು. ಅವನು ರಾಫ್ಟರ್‌ಗಳಿಗಿಂತಲೂ (rafters- ರೀಪು ಅಥವಾ ಹಂಚಿನ ಮನೆಯ ಮಾಡಿನಲ್ಲಿರುವ ದಂಡು) ಎತ್ತರಕ್ಕೆ ಹಾರುತ್ತಿರುವುದನ್ನು ಕಾಣಬಹುದು ಆದರೆ ಸರಿಯಾದ ಹಿಡಿತ ಸಿಗದ ಪರಿಣಾಮ  ಆತ 20 ಅಡಿ ಕೆಳಗೆ ಬೀಳುತ್ತಾನೆ. ಲುಕಾಸ್ ನೆಲದ ಮೇಲೆ ಬೀಳುತ್ತಿದ್ದಂತೆ ಗಾಬರಿಯಾದ ಜನ ಅಲ್ಲಿ ಒಮ್ಮೆಗೆ ಸೇರಿದ್ದನ್ನು ವಿಡಿಯೋದಲ್ಲಿ ಕಾಣಬಹುದು. ಅಲ್ಲದೇ ಅಲ್ಲಿದ್ದ ಮತ್ತೊಬ್ಬ ಸ್ಟಂಟ್‌ಮ್ಯಾನ್‌ ಲುಕಾಸ್ ಕೆಳಗೆ ಬೀಳದಂತೆ ತಡೆಯಲು ಯತ್ನಿಸಿದ್ದು ಕಾಣಿಸುತ್ತಿದ್ದು, ಎಲ್ಲವೂ ಕ್ಷಣಾರ್ಧದಲ್ಲಿ ಸಂಭವಿಸಿದೆ. ಘಟನೆಯನ್ನು  ನೋಡುತ್ತಿದ್ದ ಜನ ಆತ ಕೆಳಗೆ ಬೀಳುತ್ತಿದ್ದಂತೆ ವೇದಿಕೆ ಮೇಲೆ ಬಂದು ಆತನಿಗೆ ಅಲ್ಲಿಂದ  ಹೊರಬರಲು ಸಹಾಯ ಮಾಡಲು ಮುಂದಾದರು.

ಅಯ್ಯೋ ಒಮ್ಮೆ ಕೆಳಗಿಳ್ಸಿ... ಪ್ಯಾರಾಗ್ಲೈಡಿಂಗ್ ಮಾಡಲು ಹೋಗಿ ಏನಾಯ್ತು ನೋಡಿ

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಲುಕಾಸ್‌, ಘಟನೆಯಲ್ಲಿ ನನಗೆ ಪಕ್ಕೆಲುಬುಗಳು, ಸೊಂಟ, ಭುಜಕ್ಕೆ ಪೆಟ್ಟಾಗಿತ್ತು. ನನಗೆ ಕಾರೊಂದು ಗುದ್ದಿದ ಅನುಭವವಾಯ್ತು, ಆದರೆ ಪ್ರಸ್ತುತ ನಾನು ಆರಾಮವಾಗಿದ್ದೇನೆ. ನಾನು ಜೀವಂತವಾಗಿದ್ದೇನೆ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.  ಈ ಅವಘಡ ಸಂಭವಿಸಿದಾಗ ಸ್ಟಂಟ್‌ಮ್ಯಾನ್ ಜೋ ಅಟ್ಕಿನ್ಸನ್ (Joe Atkinson) ಅವರು ಲುಕಾಸ್‌ ಜೊತೆಗೆ ಸಾಹಸ ಪ್ರದರ್ಶನ ನೀಡುತ್ತಿದ್ದರು. 'ನಾನು ಮುಂದಿನ ಜಿಗಿತಕ್ಕಾಗಿ ಮೆಟ್ಟಿಲುಗಳ ಮೇಲೆ ಓಡುತ್ತಿದ್ದೆ  ಈ ವೇಳೆ ನನಗೆ ಜೋರಾಗಿ ಕೂಗಿಕೊಂಡ ಸದ್ದು ಕೇಳಿಸಿತು. ಸ್ಕೂಟರ್ ರೈಡರ್‌ ಒಬ್ಬರು ಅವರು ಬಿದ್ದಿದ್ದನ್ನು ಗುರುತಿಸಲು ಪ್ರಯತ್ನಿಸಿದರು ಎಂದು ಲುಕಾಸ್‌ ಹೇಳಿದರು.

ಮೈ ಕೊರೆಯುವ ಹಿಮದಲ್ಲಿ 40 ಸೆಕೆಂಡ್‌ನಲ್ಲಿ 47 ಫುಶ್‌ಅಪ್ ಹೊಡೆದ ಯೋಧ

ಸರ್ಕಸ್ ಎನ್ನುವುದು ಕೋಡಂಗಿಗಳು, ಅಕ್ರೋಬ್ಯಾಟ್‌ಗಳು, ತರಬೇತಿ ಪಡೆದ ಪ್ರಾಣಿಗಳು, ಸಾಹಸ ಪ್ರದರ್ಶನಗಳು, ಸಂಗೀತಗಾರರು, ನರ್ತಕರು, ಬಿಗಿಹಗ್ಗದಲ್ಲಿ ನಡೆಯುವ ವಾಕರ್‌ಗಳು, ಜಾದೂಗಾರರು, ಸೈಕ್ಲಿಸ್ಟ್ಗಳು ಹಾಗೂ ಇತರ ಕುಶಲತೆಯನ್ನು ಒಳಗೊಂಡಿರುವ ವೈವಿಧ್ಯಮಯ ಮನರಂಜನಾ ಪ್ರದರ್ಶನಗಳನ್ನು ನೀಡುವ ಪ್ರದರ್ಶಕರ ಕಂಪನಿಯಾಗಿದೆ. ಇದರಲ್ಲಿರುವವರೆಲ್ಲರೂ ಸಾಹಸ ಆಧಾರಿತ ಕಲಾವಿದರಾಗಿದ್ದಾರೆ. ಸರ್ಕಸ್ ತನ್ನ 250 ವರ್ಷಗಳ ಆಧುನಿಕ ಇತಿಹಾಸದ ಮೂಲಕ ವಿವಿಧ ಸ್ವರೂಪಗಳನ್ನು ಅನುಸರಿಸಿದ ಪ್ರದರ್ಶನವನ್ನು ವಿವರಿಸುತ್ತದೆ. ಮಾಧ್ಯಮದ ಸಂಶೋಧಕರಲ್ಲದಿದ್ದರೂ, ಫಿಲಿಪ್ ಆಸ್ಟ್ಲಿಯನ್ನು (Philip Astley) ಆಧುನಿಕ ಸರ್ಕಸ್‌ನ ಪಿತಾಮಹ ಎಂದು ಕರೆಯಲಾಗುತ್ತದೆ.

1768 ರಲ್ಲಿ, ನುರಿತ ಕುದುರೆ ಸವಾರ ಫಿಲಿಪ್ ಆಸ್ಟ್ಲಿ ಥೇಮ್ಸ್ ನದಿಯ ದಕ್ಷಿಣ ಭಾಗದಲ್ಲಿ ಹಾ'ಪೆನ್ನಿ ಹ್ಯಾಚ್ (Ha'Penny Hatch) ಎಂಬ ತೆರೆದ ಮೈದಾನದಲ್ಲಿ ಕುದುರೆ ಸವಾರಿಯ ಪ್ರದರ್ಶನವನ್ನು ಪ್ರಾರಂಭಿಸಿದರು.

Follow Us:
Download App:
  • android
  • ios