Census 2021: ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಈಗ ಕ್ರೈಸ್ತರೇ ಅಲ್ಪಸಂಖ್ಯಾತರು..!
ಮಂಗಳವಾರ ಬಿಡುಗಡೆಯಾಗಿರುವ 2021ರ ಜನ ಗಣತಿ ವರದಿ ಪ್ರಕಾರ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಈಗ ಕ್ರೈಸ್ತರೇ ಅಲ್ಪಸಂಖ್ಯಾತರಾಗಿದ್ದಾರೆ. ಅಂದರೆ, ಶೇಕಡ ಅರ್ಧಕ್ಕಿಂತ ಕಡಿಮೆ ಜನರು ತಾವು ಕ್ರೈಸ್ತರು ಎಂದು ಗುರುತಿಸಿಕೊಂಡಿದ್ದಾರೆ.
ರಿಷಿ ಸುನಕ್(Rishi Sunak) ತಿಂಗಳ ಹಿಂದೆಯಷ್ಟೇ ಬ್ರಿಟನ್ ಪ್ರಧಾನಿಯಾಗಿ (Britain Prime Minister) ಆಯ್ಕೆಯಾಗಿದ್ದಾರೆ. ಇನ್ನು, ಅವರು ಪ್ರಧಾನಿಯಾದ ಬಳಿಕ ಇತ್ತೀಚೆಗೆ ಬಿಡುಗಡೆಯಾದ ಇಂಗ್ಲೆಂಡ್ ಹಾಗೂ ವೇಲ್ಸ್‌ನ (England and Wales) ಜನ ಗಣತಿ (Census) ವರದಿ ಅಚ್ಚರಿದಾಯಕ ಮಾಹಿತಿಯನ್ನು ನೀಡುತ್ತಿದೆ. ಮಂಗಳವಾರ ಬಿಡುಗಡೆಯಾಗಿರುವ 2021ರ ಜನ ಗಣತಿ ವರದಿ ಪ್ರಕಾರ ಇಂಗ್ಲೆಂಡ್ ಹಾಗೂ ವೇಲ್ಸ್‌ನಲ್ಲಿ ಈಗ ಕ್ರೈಸ್ತರೇ (Christians) ಅಲ್ಪಸಂಖ್ಯಾತರಾಗಿದ್ದಾರೆ (Minority) . ಅಂದರೆ, ಶೇಕಡ ಅರ್ಧಕ್ಕಿಂತ ಕಡಿಮೆ ಜನರು ತಾವು ಕ್ರೈಸ್ತರು ಎಂದು ಗುರುತಿಸಿಕೊಂಡಿದ್ದಾರೆ. ಈ ಮೂಲಕ ಬಹುಸಂಸ್ಕೃತಿಯ ಬ್ರಿಟನ್‌ನಲ್ಲಿ ಜಾತ್ಯಾತೀತತೆ (Secularism) ಕಡೆಗೆ ಹೆಗ್ಗುರುತು ಬದಲಾವಣೆಯಾಗಿದೆ ಎಂದು ತಿಳಿದುಬಂದಿದೆ.
10 ವರ್ಷಗಳಿಗೊಮ್ಮೆ ನಡೆಯುವ ಈ ಜನ ಗಣತಿ 2021 ರಲ್ಲಿ ನಡೆದಿದ್ದು, ಇದರ ವರದಿ ಮಂಗಳವಾರ ಹೊರಹೊಮ್ಮಿದೆ. ಅದೂ, ಬ್ರಿಟನ್‌ನ (Britain) ಮೊದಲ ಹಿಂದೂ ಪ್ರಧಾನಿಯಾಗಿ (Hindu Prime Minister) ರಿಷಿ ಸುನಕ್ ಆಯ್ಕೆಯಾದ ಬಳಿಕ ಈ ಅಂಕಿ ಅಂಶ ಬಿಡುಗಡೆಯಾಗಿರುವುದು ಪ್ರಮುಖ ಎನಿಸಿಕೊಂಡಿದೆ.
ಇದನ್ನು ಓದಿ: ಲಂಡನ್‌ನಲ್ಲಿ ಕುಚಿಪುಡಿ ನೃತ್ಯಕ್ಕೆ ಹೆಜ್ಜೆ ಹಾಕಿದ ರಿಷಿ ಸುನಕ್ ಪುತ್ರಿ
ಇನ್ನು, ಹೆಚ್ಚಿ ಜನರು ನಾವು ಯಾವುದೇ ಧರ್ಮಕ್ಕೆ ಸೇರಿಲ್ಲ (No Religion) ಎಂದು ಗುರುತಿಸಿಕೊಂಡಿರುವುದು ಸಹ ವಿಶೇಷವೇ ಸರಿ. ಕ್ರೈಸ್ತರನ್ನು ಹೊರತುಪಡಿಸಿದರೆ ಎರಡನೇ ಅತಿ ಹೆಚ್ಚಿನ ಜನಂಖ್ಯೆ ಇವರದ್ದೇ. ಇನ್ನು, ಮುಸ್ಲಿಮರ (Muslims) ಜನಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ ಎಂದೂ ರಾಷ್ಟ್ರೀಯ ಅಂಕಿಅಂಶಗಳ ಕಚೇರಿ (Office for National Statistics) (ONS) ಮಾಹಿತಿ ನೀಡಿದೆ. ಈ ಸೆನ್ಸಸ್ ವರದಿ ಬಗ್ಗೆ ಯಾರ್ಕ್ ಆರ್ಚ್‌ಬಿಷಪ್ ಸ್ಟೀಫನ್ ಕಾರ್ಟೆಲ್ ಪ್ರತಿಕ್ರಿಯೆ ನೀಡಿದ್ದು, ಕಾಲ ಕಾಲಕ್ಕೆ ಕ್ರೈಸ್ತರ ಅನುಪಾತ ಇಳಿಕೆಯಾಗುತ್ತಿರುವುದು ಅಚ್ಚರಿದಾಯಕ ಬೆಳವಣಿಗೆ ಏನಲ್ಲ ಎಂದು ಹೇಳಿದ್ದಾರೆ.
2021ರ ಸೆನ್ಸಸ್ ವರದಿಯ ಪ್ರಕಾರ ಇಂಗ್ಲೆಂಡ್ ಹಾಗೂ ವೇಲ್ಸ್‌ನ ಶೇ. 46. 2 ರಷ್ಟು ಜನರು ಅಂದರೆ 2.75 ಕೋಟಿ ಜನರು ಮಾತ್ರ ತಮ್ಮನ್ನು ಕ್ರೈಸ್ತರು ಎಂದು ಗುರುತಿಸಿಕೊಂಡಿದ್ದಾರೆ. ಇದು 2011ರ ಸೆನ್ಸಸ್‌ಗಿಂತ ಶೇ. 13.1 ರಷ್ಟು ಕಡಿತಗೊಂಡಿದೆ ಎಂದೂ ತಿಳಿದುಬಂದಿದೆ. ಆದರೆ, ನಾವು ಯಾವುದೇ ಧರ್ಮಕ್ಕೆ ಸೇರದವರು ಎಂಬ ಗುರುತು ಹೊಂದಿರುವ ಜನಸಂಖ್ಯೆ ಶೇ. 12 ರಷ್ಟು ಹೆಚ್ಚಿದೆ. ಇದು ಶೇ. 37. 2 ಕ್ಕೆ ಹೆಚ್ಚಳವಾಗಿದ್ದು ಅಥವಾ 2.22 ಕೋಟಿ ಜನರು ಎಂದು ರಾಷ್ಟ್ರೀಯ ಅಂಕಿಅಂಶಗಳ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಶ್ವಾನದೊಂದಿಗೆ 10 ಡೌನಿಂಗ್ ಸ್ಟ್ರೀಟ್‌ಗೆ ಕಾಲಿಟ್ಟ Rishi Sunak: ಟ್ವಿಟ್ಟರ್‌ನಲ್ಲಿ ವೈರಲ್
ಮೂರನೇ ಸ್ಥಾನದಲ್ಲಿ ಮುಸ್ಲಿಮರಿದ್ದು, ಅವರ ಜನಸಂಖ್ಯೆ 39 ಲಕ್ಷ. ಅಂದರೆ, ಇದು ಕಳೆದ ಸೆನ್ಸಸ್‌ನ ಶೇ. 4.9 ರಿಂದ ಈ ಬಾರಿ ಶೇ. 6.5ಕ್ಕೆ ಹೆಚ್ಚಳವಾಗಿದೆ. ಇನ್ನು, ಹಿಂದೂಗಳ ಜನಸಂಖ್ಯೆ 10 ಲಕ್ಷ ಇದ್ದರೆ, ಸಿಖ್ಖರ ಜನಸಂಖ್ಯೆ 5 ಲಕ್ಷ 24 ಸಾವಿರ ಹಾಗೂ ಬೌದ್ಧರ ಜನಸಂಖ್ಯೆ 2,73,000 ಇದ್ದರೆ ಯಹೂದಿಗಳು 2 ಲಕ್ಷ 71 ಸಾವಿರ ಜನಸಂಖ್ಯೆ ಇದೆ ಎಂದೂ ಅಂಕಿಅಂಶಗಳು ತಿಳಿಸಿವೆ.
"ನಿಸ್ಸಂಶಯವಾಗಿ ಯುಕೆ ವೈವಿಧ್ಯಮಯ ದೇಶವಾಗಿದೆ ಮತ್ತು ಅದನ್ನು ಸ್ವಾಗತಿಸಬೇಕಾಗಿದೆ, ಮತ್ತು ಇದು ಧರ್ಮದ ವೈವಿಧ್ಯತೆಯನ್ನು ಒಳಗೊಂಡಿದೆ" ಎಂದು ಜನಗಣತಿಗೆ ಪ್ರತಿಕ್ರಿಯೆಯಾಗಿ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ವಕ್ತಾರರು ಸುದ್ದಿಗಾರರಿಗೆ ತಿಳಿಸಿದರು. ಅಕ್ಟೋಬರ್ 24 ರಂದು ಹಿಂದೂಗಳು ದೀಪಾವಳಿ ಆಚರಿಸಿದ ದಿನದಂದೇ, ಕನ್ಸರ್ವೇಟಿವ್ ಪಕ್ಷದ ನಾಯಕರಾಗಿ ರಿಷಿ ಸುನಕ್ ಆಯ್ಕೆಯಾಗಿದ್ದರು.
ಇದನ್ನೂ ಓದಿ: ಮಕ್ಕಳು ದೀಪಾವಳಿ ಆಚರಿಸುವಂತ ಬ್ರಿಟನ್ ನಿರ್ಮಾಣ, ಪ್ರಧಾನಿಯಾದ ಬೆನ್ನಲ್ಲೇ ಸುನಕ್ ಮಹತ್ವದ ಘೋಷಣೆ!