ಮಕ್ಕಳು ದೀಪಾವಳಿ ಆಚರಿಸುವಂತ ಬ್ರಿಟನ್ ನಿರ್ಮಾಣ, ಪ್ರಧಾನಿಯಾದ ಬೆನ್ನಲ್ಲೇ ಸುನಕ್ ಮಹತ್ವದ ಘೋಷಣೆ!
ಬ್ರಿಟನ್ ಪ್ರಧಾನಿಯಾಗಿದ ಭಾರತೀಯ ಮೂಲದ ರಿಷಿ ಸುನಕ್ ಹಲವು ಬದಲಾವಣೆ ತಂದಿದ್ದಾರೆ. ಸಂಪುಟದಿಂದ ಹಲವರನ್ನು ಕಿತ್ತೆಸೆದಿದ್ದಾರೆ. ಇದೀಗ ಮಹತ್ವದ ಘೋಷಣೆ ಮಾಡಿದ್ದಾರೆ. ಈ ಹೇಳಿಕೆಯಿಂದ ಬ್ರಿಟನ್ ಹಿಂದೂ ರಾಷ್ಟ್ರವಾಗುತ್ತಾ ಅನ್ನೋ ವಾದವೂ ಹುಟ್ಟಿಕೊಂಡಿದೆ.
ಲಂಡನ್(ಅ.27); ಹಲವು ಏರಿಳಿತಗಳ ಬಳಿಕ ಬ್ರಿಟನ್ ಮತ್ತೊರ್ವ ನೂತನ ಪ್ರಧಾನಿಯನ್ನು ಕಂಡಿದೆ. ಭಾರತೀಯ ಮೂಲಕ ರಿಷಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆಡಳಿತಕ್ಕೆ ಸಂಬಂಧಪಟ್ಟು ಹಲವು ಮಹತ್ವದ ಘೋಷಣೆಗಳು, ಬದಲಾವಣೆಗಳನ್ನು ಸುನಕ್ ಮಾಡಿದ್ದಾರೆ. ಕಳೆದ ರಾತ್ರಿ(ಅ.26) ಬ್ರಿಟನ್ ಪ್ರಧಾನಿ ನಿವಾಸ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ರಿಷಿ ಸುನಕ್, ಕುಟುಂಬ ಹಾಗೂ ಅಧಿಕಾರಿಗಳ ತಂಡ ದೀಪಾವಳಿ ಆಚರಿಸಿದೆ. ಈ ವೇಳೆ ನೀಡಿರುವ ಹೇಳಿಕೆ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ. ನಮ್ಮ ಮಕ್ಕಳು, ಮೊಮ್ಮಕ್ಕಳು ದೀಪಾವಳಿ ದೀಪ ಬೆಳುಗುವಂತ ಬ್ರಿಟನ್ ನಿರ್ಮಿಸಲು ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಖುದ್ದು ದೀಪಾವಳಿ ಚಿತ್ರಗಳನ್ನು ಪೋಸ್ಟ್ ಮಾಡಿರುವ ರಿಷಿ ಸುನಕ್ ಭವಿಷ್ಯದ ಬ್ರಿಟನ್ ಹಲವು ಮಹತ್ತರ ಬದಲಾವಣೆಗಳನ್ನು ಕಾಣಲಿದೆ ಅನ್ನೋ ಸೂಚನೆ ನೀಡಿದ್ದಾರೆ.
ಈ ರಾತ್ರಿ ದೀಪಾವಳಿ ಹಬ್ಬದಲ್ಲಿ ಪಾಲ್ಗೊಂಡಿದ್ದೇನೆ. ನಮ್ಮ ಮಕ್ಕಳು, ಮೊಮ್ಮಕ್ಕಳು ದೀಪಗಳನ್ನು ಬೆಳಗಿಸುವ ಹಾಗೂ ಭವಿಷ್ಯವನ್ನು ಭರವಸೆಯಿಂದ ನೋಡುವ ಬ್ರಿಟನ್ ನಿರ್ಮಿಸಲು ಎಲ್ಲಾ ಕೆಲಸವನ್ನು ನಾನು ಮಾಡುತ್ತೇನೆ ಎಂದು ರಿಷಿ ಸುನಕ್ ಹೇಳಿದ್ದಾರೆ. ಈ ಹೇಳಿಕಿಗೆ ಪರ ವಿರೋಧಗಳು ವ್ಯಕ್ತವಾಗುತ್ತಿದೆ. ಬ್ರಿಟನ್ ಹಿಂದೂ ರಾಷ್ಟ್ರವನ್ನಾಗಿ ಮಾಡಲು ರಿಷಿ ಸುನಕ್ ಯತ್ನಿಸುತ್ತಿದ್ದಾರಾ ಅನ್ನೋ ಮಾತಗಳು ಕೇಳಿಬಂದಿದೆ. ಇತ್ತ ರಿಷಿ ಸುನಕ್ ಭಾರತದ ಸಂಸ್ಕೃತಿಯನ್ನು ವಿಶ್ವದೆಲ್ಲಡೆ ಹರಡುತ್ತಿದ್ದಾರೆ ಎಂದು ಹಲವರು ಹೇಳಿದ್ದಾರೆ.
ಬಿಜೆಪಿ, ಕಾಂಗ್ರೆಸ್ ನಡುವೆ 'ಅಲ್ಪಸಂಖ್ಯಾತ ಉನ್ನತ ಹುದ್ದೆ' ವಾರ್
ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಕಾಣಿಸಿಕೊಂಡ ದಿನದಿಂದ ರಿಷಿ ಸುನಕ್ ಹಿಂದೂ ನಾಯಕ ಎಂದೇ ಗುರುತಿಸಿಕೊಂಡಿದ್ದಾರೆ. ಕಳೆದ ಬಾರಿ ಬೊರಿಸ್ ಜಾನ್ಸನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಪ್ರಧಾನಿ ಪಟ್ಟಕ್ಕೆ ಚುನಾವಣೆ ನಡೆದಿತ್ತು. ಲಿಜ್ ಟ್ರಸ್ ಜೊತೆ ರಿಷಿ ಸುನಕ್ ಸ್ಪರ್ಧಿಸಿದ್ದರು. ಈ ಚುನಾವಣೆ ಪ್ರಕ್ರಿಯೀ ಸುದೀರ್ಘ ದಿನಗಳ ಕಾಲ ನಡೆದಿತ್ತು. ಇದರ ನಡುವೆ ರಿಷಿ ಸುನಕ್, ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಈ ಪೋಟೋಗಳು ಬಾರಿ ವೈರಲ್ ಆಗಿತ್ತು.
;
ಕೈಗೆ ಹಿಂದೂ ರಕ್ಷ ಸೂತ್ರ ದಾರ ಕಟ್ಟಿಕೊಂಡಿರುವ ರಿಷಿ ಸುನಕ್ ಫೋಟೋಗಳು ವೈರಲ್ ಆಗಿತ್ತು. ಭಾರತದಲ್ಲಿ ಸುನಕ್ ಹಿಂದೂ ನಾಯಕ ಎಂದೇ ಬಿಂಬಿಸಲಾಗುತ್ತಿದೆ. ಅತ್ತ ಬ್ರಿಟನ್‌ನಲ್ಲಿ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿದೆ. 200 ವರ್ಷ ಭಾರತವನ್ನು ಆಡಳಿ ಬ್ರಿಟಿಷರಿಗೆ ಇದೀಗ ಭಾತೀಯ ಮೂಲದ ಹಿಂದೂ ಪ್ರಧಾನಿ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಅಳಿಯ, ಯುಕೆ ಪ್ರಧಾನಿ ಕೈಲಿ ಕೆಂಪು ರಕ್ಷಾ ಸೂತ್ರ; ಏನಿದರ ಮಹತ್ವ?
ಹಲವರನ್ನು ಕೈಬಿಟ್ಟ ಸುನಕ್
ಸುನಕ್ ಮಾಜಿ ಪ್ರಧಾನಿ ಲಿಸ್ ಟ್ರಸ್ ಅವಧಿಯಲ್ಲಿದ್ದ ಕೆಲವು ಸಚಿವರನ್ನು ಸಂಪುಟದಲ್ಲಿ ಉಳಿಸಿಕೊಂಡಿದ್ದು, ಇನ್ನೂ ಕೆಲವರಿಗೆ ಕೊಕ್ ನೀಡಿದ್ದಾರೆ. ಲಿಸ್ ಟ್ರಸ್ ಅವರ ಅವಧಿಯಲ್ಲಿ ಹಣಕಾಸು ಸಚಿವರಾಗಿ (ಚಾನ್ಸಲರ್ ಆಫ್ ಎಕ್ಸ್‌ಚೆಕರ್) ನೇಮಕವಾಗಿದ್ದ ಜೆರೆಮಿ ಹಂಟ್ ಅವರನ್ನು ರಿಷಿ ಅದೇ ಹುದ್ದೆಯಲ್ಲಿ ಮರುನೇಮಕ ಮಾಡಿದ್ದಾರೆ. ತಮಗೆ ಅತ್ಯಾಪ್ತರಾಗಿದ್ದ ಡೊಮಿನಿಕ್ ರಾಬ್ ಅವರನ್ನು ಉಪ ಪ್ರಧಾನಿ ಹಾಗೂ ನ್ಯಾಯಾಂಗ ಸಚಿವರಾಗಿ ನೇಮಿಸಿದ್ದಾರೆ. ಬೋರಿಸ್ ಜಾನ್ಸನ್ ಅವರ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಬೆನ್ ವಾಲ್ಲಸ್ ಹಾಗೂ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್‌ಲೀ ಅವರನ್ನು ಅದೇ ಹುದ್ದೆಗೆ ಮರುನೇಮಕ ಮಾಡಲಾಗಿದೆ.