ಚೀನಾ ರಾಕೆಟ್‌ಗೂ ಅರ್ಜೆಂಟ್: ಟೆಸ್ಟ್ ವೇಳೆಯೇ ಆಕಸ್ಮಿಕವಾಗಿ ಲಾಂಚ್ ಆದ ಚೀನಾ ರಾಕೆಟ್: ವೀಡಿಯೋ
ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ 2ನೇ ಹಂತದ ಫಾಲ್ಕನ್ 9ಗೆ ಹೋಲಿಸಲ್ಪಟ್ಟಿದ್ದ ಚೀನಾದ ಟಿಯಾನ್ಲಾಗ್ 3 ರಾಕೆಟ್ ಪರೀಕ್ಷೆ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಲಾಂಚ್ ಆಗಿ ಕೆಲ ಕ್ಷಣಗಳಲ್ಲಿ ಭೂಮಿಗೆ ಬಿದ್ದಂತಹ ಘಟನೆ ನಡೆದಿದೆ.
ಬೀಜಿಂಗ್: ಎಲಾನ್ ಮಸ್ಕ್ ಅವರ ಸ್ಪೇಸ್ ಎಕ್ಸ್ 2ನೇ ಹಂತದ ಫಾಲ್ಕನ್ 9ಗೆ ಹೋಲಿಸಲ್ಪಟ್ಟಿದ್ದ ಚೀನಾದ ಟಿಯಾನ್ಲಾಗ್ 3 ರಾಕೆಟ್ ಪರೀಕ್ಷೆ ಮಾಡುತ್ತಿರುವಾಗಲೇ ಆಕಸ್ಮಿಕವಾಗಿ ಲಾಂಚ್ ಆಗಿ ಕೆಲ ಕ್ಷಣಗಳಲ್ಲಿ ಭೂಮಿಗೆ ಬಿದ್ದಂತಹ ಘಟನೆ ನಡೆದಿದೆ. ಚೀನಾದ ಹೆನಾನ್ ಪ್ರಾಂತ್ಯದ ಪರ್ವತ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಚೀನಾದ ಈ ಟಿಯಾನ್ಲಾಗ್ 3 ರಾಕೆಟ್‌ನ್ನು ಹೆವನ್ಲಿ ಅಥವಾ ಸಕೈ ಡ್ರ್ಯಾಗನ್ 3 ಎಂದು ಕೂಡ ಕರೆಯಲಾಗುತ್ತಿತ್ತು. ರಾಕೆಟ್‌ನ ದೇಹ ಹಾಗೂ ಟೆಸ್ಟ್ ಬೆಂಚ್ ನಡುವಣ ರಚನಾತ್ಮಕ ವೈಫಲ್ಯದಿಂದಾಗಿ ಘಟನೆ ನಡೆದಿದ್ದು, ಲಾಂಚ್ ಪ್ಯಾಡ್‌ನಿಂದ ಇದ್ದಕ್ಕಿದ್ದಂತೆ ಕಳಚಿಕೊಂಡ ರಾಕೆಟ್ ಲಾಂಚ್ ಆಗಿದೆ ಎಂದು ಸ್ಪೇಸ್ ಪಾಯೋನಿಯರ್ ಹೇಳಿದೆ. ಸ್ಪೇಸ್ ಪಾಯೋನಿಯರ್ ಚೀನಾ ಮೂಲದ ಖಾಸಗಿ ಏರೋಸ್ಪೇಸ್ ಹಾಗೂ ಅಭಿವೃದ್ಧಿ ಸಂಸ್ಥೆಯಾಗಿದೆ. ರಾಕೆಟ್ ಮೇಲೇರುತ್ತಿದ್ದಂತೆ ರಾಕೆಟ್‌ನಲ್ಲಿದ್ದ ಕಂಪ್ಯೂಟರ್ ಸ್ವಯಂಚಾಲಿತವಾಗಿ ಸ್ಥಗಿತಗೊಂಡಿತ್ತು. ಹಾಗೂ ರಾಕೆಟ್ ನೆಲಕ್ಕೆ ಬಿತ್ತು ಎಂದು ಸ್ಪೇಸ್ ಪಾಯೋನಿಯರ್ ಹೇಳಿದೆ.
ಭೂಮಿಗೆ ಕಾಣದ ಚಂದ್ರನ ಭಾಗದಲ್ಲಿ ಸಾಹಸ, 2 ಕೆಜಿ ಕಲ್ಲು ಮಣ್ಣು ಹೊತ್ತು ತಂದ ಚೀನಾ!
ಈ ಟಿಯಾನ್ಲಾಂಗ್ 3 ರಾಕೆಟ್, 3.8 ಮೀಟರ್ (ವ್ಯಾಸ) ಸುತ್ತಳತೆಯನ್ನು ಹೊಂದಿದ್ದು, ಮತ್ತು 590 ಟನ್‌ಗಳಷ್ಟು ದ್ರವ್ಯರಾಶಿಯನ್ನು ಹೊತ್ತೊಯ್ಯುವ ದೊಡ್ಡಮಟ್ಟದ ದ್ರವ ಉಡಾವಣಾ ವಾಹನವಾಗಿದೆ. ಇದರ ಲೋ ಅರ್ಥ್ ಆರ್ಬಿಟ್(LEO) ಟ್ರಾನ್ಸ್‌ಪೋರ್ಟ್ ಸಾಮರ್ಥ್ಯವೂ 17 ಟನ್, ಹಾಗೆಯೇ ಸನ್ ಸಿಂಕ್ರೋನಸ್ ಆರ್ಬಿಟ್ ಸಾಮರ್ಥ್ಯ 14 ಟನ್. ಈ ಎರಡನೇ ಹಂತದ ರಾಕೆಟ್ ಅನ್ನು ಬಹುತೇಕ ಮರುಬಳಕೆ ಮಾಡಬಹುದಾಗಿದೆ. ಇದನ್ನು ಚೀನಾದ ಉಪಗ್ರಹ ಇಂಟರ್ನೆಟ್ ಜಾಲಕ್ಕಾಗಿ ಕಸ್ಟಮೈಸ್ ಮಾಡಲಾಗಿತ್ತು. ಚೀನಾದ ಗೋಂಗಿ ನಗರದಲ್ಲಿರುವ ಸಮಗ್ರ ಪರೀಕ್ಷಾ ಕೇಂದ್ರದಲ್ಲಿ ಟಿಯಾನ್‌ಲಾಂಗ್ 3 ರಾಕೆಟ್ ಪರೀಕ್ಷಾರ್ಥ ಲಾಂಚ್ ನಡೆಸಲು ಯೋಜನೆ ಸಿದ್ಧವಾಗಿತ್ತು. ಆದರೆ ವಿಜ್ಞಾನಿಗಳು ಕ್ಲೂ ಕೊಡುವ ಮೊದಲೇ ಚೀನಾ ರಾಕೆಟ್ ತನ್ನಷ್ಟಕ್ಕೇ ರಫ್ ಅಂತ ಲಾಂಚ್ ಆಗಿ ಮೇಲೆರಲಾಗದೇ ಗುಡ್ಡಕ್ಕೆ ಅಪ್ಪಳಿಸಿದೆ.
ರಾಕೆಟ್ ಹೀಗೆ ಹಠಾತ್ ಆಗಿ ಲಾಂಚ್ ಆಗಿ ಪತನಗೊಂಡ ದೃಶ್ಯದ ವೀಡಿಯೋಗಳು ಈಗ ಚೀನಾದ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಲಾಂಚ್ ಪ್ಯಾಡ್‌ನಿಂದ ಹಠಾತ್ ಆಗಿ ಲಾಂಚ್ ಆದ ಚೀನಾದ ರಾಕೆಟ್ 30 ಸೆಕೆಂಡ್‌ಗಳ ಕಾಲ ಮೇಲೆರಿದೆ. ನಂತರ ಕೆಳಗೆ ಕುಸಿಯಲು ಆರಂಭಿಸಿದ್ದು, ಗುಡ್ಡದ ಮೇಲೆ ಅಪ್ಪಳಿಸಿದೆ. ಜನರಹಿತ ಸುರಕ್ಷಿತ ಪ್ರದೇಶದಲ್ಲಿ ರಾಕೆಟ್ ಬಿದ್ದಿದ್ದರಿಂದ ಯಾರಿಗೂ ಯಾವುದೇ ಅನಾಹುತವಾಗಿಲ್ಲ, ಈ ರಾಕೆಟ್ ಕ್ರ್ಯಾಶ್ ಆಗಿದ್ದರಿಂದ ಪರೀಕ್ಷ ಸ್ಥಳದ ಒಂದೂವರೆ ಕಿಲೋಮೀಟರ್ ದೂರದಲ್ಲಿ ಸಣ್ಣ ಮಟ್ಟಿನ ಬೆಂಕಿ ಹೊತ್ತಿ ಉರಿಯಿತು ಎಂದು ಚೀನಾ ಸೋಶೀಯಲ್ ಮೀಡಿಯಾದಲ್ಲಿ ವರದಿ ಆಗಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ಚೀನಾ ಮಾಧ್ಯಮಗಳು ಹಾಗೂ ಸ್ಪೇಸ್ ಪಯೋನಿಯರ್ ಸ್ಪಷ್ಟಪಡಿಸಿದೆ.
ಪಾಕ್ ಸೇನೆಗಾಗಿ ಚೀನಾ ಕೊಟ್ಟಅತ್ಯಾಧುನಿಕ ಉಪಕರಣಗಳು ಉಗ್ರರ ಕೈಲಿ ಪತ್ತೆ!
ಅಲ್ಲದೇ ಈ ಪರೀಕ್ಷಾ ಸ್ಥಳವೂ ನಗರ ಪ್ರದೇಶಕ್ಕಿಂತ ಹಾಗೂ ಜನವಸತಿ ಪ್ರದೇಶಕ್ಕಿಂತ ಬಹಳ ದೂರವಿದೆ. ನಾವು ಸ್ಥಳೀಯ ಸರ್ಕಾರದ ಜೊತೆ ಈ ವಿಚಾರವಾಗಿ ಸಂವಹನ ನಡೆಸಿ ಸುರಕ್ಷತೆಯ ಸೃಷ್ಟಿಯಿಂದ ಸಮೀಪದ ಜನರನ್ನು ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡಿದ್ದೆವು. ಆದರೆ ಘಟನೆಯ ನಂತರ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ ಎಂದು ಸ್ಪೇನ್ ಪಯೋನಿಯರ್ ಹೇಳಿದೆ.