China Baby Loans: ಜನಸಂಖ್ಯೆ ಪ್ರಮಾಣ ಕುಸಿತ: 2ಕ್ಕಿಂತ ಹೆಚ್ಚು ಮಕ್ಕಳಾದರೆ ಸರ್ಕಾರದಿಂದ ವಿಶೇಷ ಆಫರ್ಸ್!
*ಚೀನಾದಲ್ಲಿ ಮಕ್ಕಳ ಹೊಂದುವ ದಂಪತಿಗೆ ಸಾಲದ ಆಫರ್!
*ಜಿಲಿನ್ ಪ್ರಾಂತ್ಯದಲ್ಲಿ ಅಗ್ಗದ ಬಡ್ಡಿಯಲ್ಲಿ 23 ಲಕ್ಷ ರು. ಸಾಲ ಸೌಲಭ್ಯ
*2ಕ್ಕಿಂತ ಹೆಚ್ಚು ಮಕ್ಕಳಾದರೆ ವ್ಯಾಪಾರದಲ್ಲಿ ರಿಯಾಯ್ತಿ
ಬೀಜಿಂಗ್ (ಡಿ.25) : ಚೀನಾ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ಆದರೆ ಸರ್ಕಾರದ ಕಠಿಣ ಕ್ರಮಗಳ ಕಾರಣ ದೇಶದಲಿ ಜನಸಂಖ್ಯೆಯ ಪ್ರಮಾಣ ಕುಸಿಯುತ್ತಿದೆ. ಹೀಗಾಗಿ ಜಿಲಿನ್ ಪ್ರಾಂತ್ಯ ಮಕ್ಕಳನ್ನು ಹೊಂದುವ ದಂಪತಿಗೆ ಸಾಲ ಸೌಲಭ್ಯ ನೀಡಲು ಸರ್ಕಾರ ಆಸಕ್ತಿ ತೋರಿದೆ. ಜಿಲಿನ್ ಪ್ರಾಂತ್ಯದಲ್ಲಿ (Jilin province) ಜನಸಂಖ್ಯೆ ಇತರ ಎಲ್ಲಾ ಪ್ರಾಂತ್ಯಗಳಿಗಿಂತ ವೇಗವಾಗಿ ಕುಸಿಯುತ್ತಿದೆ. ಹೀಗಾಗಿ ಇಲ್ಲಿ ಜನಸಂಖ್ಯೆಯನ್ನು ಹೆಚ್ಚಳ ಮಾಡಲು ದಂಪತಿಗೆ ಸುಮಾರು 23.5 ಲಕ್ಷ ರು. ಸಾಲ ಸೌಲಭ್ಯ (Loan Facility) ನೀಡಲು ಆಸಕ್ತಿ ತೋರಿದೆ.
ಸರ್ಕಾರ ಈ ಯೋಜನೆಯನ್ನು ಯಾವ ರೀತಿ ಜಾರಿಗೆ ತರುತ್ತದೆ ಎಂಬುದರ ಕುರಿತು ಸ್ಪಷ್ಟವಾದ ಮಾಹಿತಿಯನ್ನು ನೀಡಿಲ್ಲ. ಆದರೆ ದಂಪತಿ ಹೊಂದುವ ಮಕ್ಕಳ ಆಧಾರದ ಮೇಲೆ ವಿವಿಧ ಬಡ್ಡಿದರಗಳಲ್ಲಿ ಬ್ಯಾಂಕುಗಳಿಂದ ಸಾಲ ಒದಗಿಸಬಹುದು ಎಂದು ಹೇಳಲಾಗಿದೆ. ಜನಸಂಖ್ಯೆ ಹೆಚ್ಚಳವನ್ನು ಪ್ರೋತ್ಸಾಹಿಸಲು ಈಗಾಗಲೇ ಜನಸಂಖ್ಯೆಗೆ ಸಂಬಂಧಿಸಿದ ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ತಾಯ್ತನದ ರಜೆಯ ಅವಧಿಯನ್ನು ಹೆಚ್ಚಳ ಮಾಡಲಾಗಿದೆ.
2ಕ್ಕಿಂತ ಹೆಚ್ಚು ಮಕ್ಕಳಾದರೆ ವ್ಯಾಪಾರದಲ್ಲಿ ರಿಯಾಯ್ತಿ!
ಈ ಕೊಡುಗೆ ಕೇವಲ ಜಿಲಿನ್ ಪ್ರಾಂತ್ಯದವರಿಗೆ ಮಾತ್ರ ಅನ್ವಯವಾಗುವುದಿಲ್ಲ. ಹೊರಗಿನಿಂದ ಬಂದು ಜಿಲಿನ್‌ನಲ್ಲಿ ನೆಲೆಸಸುವ, ಜನಿಸುವ ಮಕ್ಕಳನ್ನು ಜಿಲಿನ್ ಪ್ರಾಂತ್ಯದಲ್ಲೇ ನೋಂದಣಿ ಮಾಡಿಸುವವರಿಗೂ ಈ ಸೌಲಭ್ಯ ಅನ್ವಯವಾಗುತ್ತದೆ. ಎರಡು ಅಥವಾ ಮೂರು ಮಕ್ಕಳನ್ನು ಹೊಂದುವ ದಂಪತಿ ವ್ಯಾಪಾರ ಆರಂಭಿಸುವುದಾದರೆ ಅವರಿಗೆ ರಿಯಾಯಿತಿ (Discount) ನೀಡಲಾಗುತ್ತದೆ. ಜಿಲಿನ್‌ನಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಇದ್ದರೂ ಸಹ ಜನಸಂಖ್ಯೆ ಕೊರತೆಯಿಂದ ಆರ್ಥಿಕಾಭಿವೃದ್ದಿಯಲ್ಲಿ ಹಿಂದೆ ಬಿದ್ದಿದೆ. ದೇಶದ ಆರ್ಥಿಕತೆಗಿಂತ ಶೇ.9.8ರಷ್ಟುಹಿಂದುಳಿದಿದೆ.
ಜಿಲಿನ್ ನೀತಿಯಲ್ಲಿನ ಇತರ ಕ್ರಮಗಳು: ಇತರ ಪ್ರಾಂತ್ಯಗಳ ದಂಪತಿಗಳಿಗೆ ನಿವಾಸ ಪರವಾನಗಿಯನ್ನು ಪಡೆಯಲು ಅವಕಾಶ ನೀಡುವುದು, ಇದನ್ನು ಹುಕೌ (hukou) ಎಂದು ಕರೆಯಲಾಗುತ್ತದೆ. ಜತೆಗೆ ಅವರು ಮಕ್ಕಳನ್ನು ಹೊಂದಿದ್ದರೆ ಮತ್ತು ಅವರನ್ನು ಅಲ್ಲಿ ನೋಂದಾಯಿಸಿದ್ದರೆ ಜಿಲಿನ್‌ನಲ್ಲಿ ಸಾರ್ವಜನಿಕ ಸೇವೆಗಳನ್ನು ಪಡೆಯಲು ಅವಕಾಶ ಇತ್ಯಾದಿ.
ಮಾತೃತ್ವ ಮತ್ತು ಪಿತೃತ್ವ ರಜೆ ವಿಸ್ತರಣೆ!
ಇತರ ಹಲವು ಪ್ರಾಂತ್ಯಗಳಂತೆ ಜಿಲಿನ್ ಮಾತೃತ್ವ ಮತ್ತು ಪಿತೃತ್ವ ರಜೆಯನ್ನು ( maternity and paternity leave) ವಿಸ್ತರಿಸುತ್ತಿದೆ. ಮಹಿಳೆಯರಿಗೆ ಈ ಹಿಂದೆ ಇದ್ದ158 ದಿನಗಳ ರಜೆ ವಿಸ್ತರಿಸಿ ಒಟ್ಟು 180 ದಿನಗಳ ರಜೆ ಇರುತ್ತದೆ. ಪುರುಷರಿಗೆ ಈ ಹಿಂದೆ ಇದ್ದ15 ದಿನಗಳು ರಜೆ ವಿಸ್ತರಿಸಿ 25 ದಿನಗಳು ರಜೆ ಇರುತ್ತದೆ.
ದಂಪತಿಗಳು ತಮ್ಮ ಮಕ್ಕಳಿಗೆ ಮೂರು ವರ್ಷ ತುಂಬುವ ಮೊದಲು ಪ್ರತಿ ವರ್ಷವೂ 20 ದಿನಗಳ ಪೋಷಕರ ರಜೆಯನ್ನು ಪಡೆಯುತ್ತಾರೆ ಮತ್ತು ಬಿಡುಗೆಡಯಾದ ಡಾಕ್ಯುಮೆಂಟ್ ಪ್ರಕಾರ ಎರಡು ಮತ್ತು ಮೂರು ವಯಸ್ಸಿನ ಮಕ್ಕಳಿಗೆ ಡೇಕೇರ್ (daycare for) ಅನ್ನು ಸ್ಥಾಪಿಸಲು ಪ್ರಾಂತ್ಯವು ಶಿಶುವಿಹಾರಗಳನ್ನು ಪ್ರೋತ್ಸಾಹಿಸುತ್ತದೆ ಎಂದು ತಿಳಿದುಬಂದಿದೆ.
ಜಿಲಿನ್ ಚೀನಾದ "ರಸ್ಟ್ ಬೆಲ್ಟ್ - rust belt" ಪ್ರದೇಶದ ಭಾಗವಾಗಿದೆ, ಇದು ಭಾರೀ ಉದ್ಯಮ ಮತ್ತು ಕೃಷಿಗೆ ಹೆಸರುವಾಸಿಯಾಗಿದೆ. ಈ ಪ್ರದೇಶವು ಕಳೆದ ದಶಕದಲ್ಲಿ ಅತಿ ಹೆಚ್ಚು ಜನಸಂಖ್ಯೆಯ ಕುಸಿತ ಮತ್ತು ನಿಧಾನ ಆರ್ಥಿಕ ಬೆಳವಣಿಗೆಯನ್ನು ಕಂಡಿದೆ. ಜಿಲಿನ್ ಪ್ರಾಂತ್ಯದ ಆರ್ಥಿಕತೆಯು ಈ ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ 2020 ರ ಅದೇ ಅವಧಿಯಿಂದ 7.8% ರಷ್ಟು ವಿಸ್ತರಿಸಿದೆ, ಆದರೆ ಇದು ರಾಷ್ಟ್ರೀಯ ಸರಾಸರಿ 9.8% ಗಿಂತ ನಿಧಾನವಾಗಿದೆ.
ಇದನ್ನೂ ಓದಿ:
1) H-1B Visa: ಹೆಚ್-1 ಬಿ ಸೇರಿ ಹಲವು ವೀಸಾ ಅರ್ಜಿದಾರರ ಸಂದರ್ಶನ ಕೈಬಿಟ್ಟ ಅಮೆರಿಕ!
2) ಮೊದಲ ಬಾರಿ ಕೊಕಾಕೋಲಾದ ರುಚಿ ನೋಡಿದ ಕಂದನ ರಿಯಾಕ್ಷನ್ ನೋಡಿ
3) Fact Check: 1999 ರಲ್ಲೇ 'ಒಮಿಕ್ರೋನ್' ವಿಡಿಯೋ ಗೇಮ್ ರಚಿಸಿದ್ರಾ ಬಿಲ್ ಗೇಟ್ಸ್?