Asianet Suvarna News Asianet Suvarna News

ಜೀವಂತ ಕೈದಿಗಳ ಅಂಗಾಂಗ ಕಟ್, ಅಂಗಾಂಗ ಕಸಿಗಾಗಿ ಇದೆಂತಹಾ ಕ್ರೌರ್ಯ?

* ಅಂಗಾಂಗ ಕಸಿಗಾಗಿ ಈ ಅಂಗಗಳ ಬಳಕೆ

* ರಾಜಕೀಯ ಕೈದಿಗಳ ಮೇಲೆ ದೌರ್ಜನ್ಯ

* ಜೀವಂತ ಕೈದಿಗಳ ಅಂಗಾಂಗ ಕತ್ತರಿಸುತ್ತಿದೆ ಚೀನಾ!

Chinese medics killed death row inmates by taking hearts Report pod
Author
Bangalore, First Published Apr 8, 2022, 8:30 AM IST

ಕ್ಯಾನ್‌ಬೆರಾ(ಏ.08): ಚೀನಾದಲ್ಲಿ ಜೀವಂತವಿರುವ ಕೈದಿಗಳ ಅಂಗಾಂಗಗಳನ್ನು ಕತ್ತರಿಸಿ ಕಸಿಗಾಗಿ ಬಳಸಲಾಗುತ್ತಿದೆ ಎಂಬ ಭೀಕರ ವಿಚಾರವು ಬೆಳಕಿಗೆ ಬಂದಿದೆ. ಆಸ್ಪ್ರೇಲಿಯನ್‌ ನ್ಯಾಶನಲ್‌ ವಿಶ್ವವಿದ್ಯಾಲಯದ ಸಂಶೋಧಕರು ಚೀನಾದ ನಡೆಸುತ್ತಿರುವ ಕ್ರೌರ್ಯದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಮೃತಪಟ್ಟಅಥವಾ ಮೆದುಳು ನಿಷ್ಕಿ್ರಯವಾದ ವ್ಯಕ್ತಿಯ ಅಂಗಾಗಗಳನ್ನು ಕತ್ತರಿಸಿ ಕಸಿ ಮಾಡಲು ಅನುಮತಿಯಿದೆ. ಆದರೆ ಚೀನಾದಲ್ಲಿ ಪ್ರಮುಖವಾಗಿ ಫಾಲುನ್‌ ಗಾಂಗ್‌ ಅಥವಾ ಅಲ್ಪಸಂಖ್ಯಾತ ಉಯಿಗುರ್‌ ಸಮುದಾಯಗಳಂತಹ ಅಲ್ಪಸಂಖ್ಯಾತ ರಾಜಕೀಯ ಗುಂಪುಗಳಿಗೆ ಸೇರಿದ ಕೈದಿಗಳು ಜೀವಂತವಾಗಿರುವಾಗಲೇ ಅವರ ಹೃದಯ ಹಾಗೂ ಶ್ವಾಸಕೋಶಗಳಂತಹ ಅಂಗಾಂಗಗಳನ್ನು ತೆಗೆಯಲಾಗುತ್ತಿದೆ ಎನ್ನುವ ವಿಚಾರವನ್ನು ಆಸ್ಪ್ರೇಲಿಯಾ ವಿವಿಯ ಮ್ಯಾಥಿವ್‌ ರಾಬರ್ಚ್‌ಸನ್‌ ಎಂಬುವವರು ಅಮೆರಿಕದ ಜರ್ನಲ್‌ನಲ್ಲಿ ಪ್ರಕಟಿಸಿದ್ದಾರೆ.

ತುಮಕೂರಿನ ಪ್ರಸಿದ್ಧ ‘ಸಿದ್ದು’ ಹಲಸಿಗೆ ಕರಾವಳಿಯಲ್ಲಿ ಕಸಿ..!

‘ಚೀನಾದಲ್ಲಿ ಸುಮಾರು 71 ಕೈದಿಗಳ ಹೃದಯವನ್ನು ತೆಗೆದು ಕಸಿಗಾಗಿ ಬಳಕೆ ಮಾಡಲಾಗಿದೆ. ಆದರೆ ಈ ಕೈದಿಗಳು ಮೃತಪಟ್ಟಿದ್ದರೇು ಅಥವಾ ಅವರ ಮೆದುಳು ನಿಷ್ಟಿ್ರಯವಾಗಿತ್ತು ಎಂಬ ಬಗ್ಗೆ ಯಾವುದೇ ಸ್ಪಷ್ಟಉಲ್ಲೇಖಗಳಿರಲಿಲ್ಲ. ಈ ಹಿನ್ನೆಲೆಯಲ್ಲಿ ಚೀನಾದ ವೈದ್ಯರು ಜೀವಂತ ಕೈದಿಗಳ ಶಸ್ತ್ರಚಿಕಿತ್ಸೆ ನಡೆಸಿ ಅಂಗಾಂಗಗಳನ್ನು ಕತ್ತರಿಸಿದ್ದಾರೆ. ಹೀಗಾಗಿ ಅಂಗಾಂಗಗಳನ್ನು ಕತ್ತರಿಸಿದ್ದಕ್ಕಾಗಿಯೇ ಕೈದಿಗಳು ಮೃತಪಟ್ಟಿದ್ದಾರೆ ಎನ್ನಬಹುದು’ ಎಂದು ರಾಬರ್ಚ್‌ಸನ್‌ ವರದಿಯಲ್ಲಿ ಹೇಳಿದ್ದಾರೆ.

ಅಂಗಾಂಗಗಳ ಶಸ್ತ್ರಚಿಕಿತ್ಸೆಯಿಂದಾಗಿಯೇ ಮೃತಪಟ್ಟಕೈದಿಗಳ ಸಂಖ್ಯೆ ಇನ್ನಷ್ಟುಹೆಚ್ಚಾಗಿರಬಹುದು ಎಂದು ರಾಬರ್ಚ್‌ಸನ್‌ ಅಂದಾಜಿಸಿದ್ದಾರೆ. ಕಳೆದ ಮೂರು ದಶಕಗಳಿಂದಲೂ ಕೈದಿಗಳ ಯಕೃತ್ತು, ಕಿಡ್ನಿ ಮೊದಲಾದ ಅಂಗಾಂಗಗಳನ್ನು ಕತ್ತರಿಸಲಾಗುತ್ತಿದೆ ಎನ್ನಲಾಗಿದೆ. ಈ ಮೊದಲು 2019ರಲ್ಲಿ ಅಂತಾರಾಷ್ಟ್ರೀಯ ನ್ಯಾಯಮಂಡಳಿಯು ಕೂಡಾ ಚೀನಾ ಕೈದಿಗಳ ಅಂಗಾಂಗಗಳನ್ನು ಬಲವಂತವಾಗಿ ಕತ್ತರಿಸುತ್ತದೆ ಎಂಬ ವಿಚಾರವನ್ನು ಕಂಡುಕೊಂಡಿತ್ತು. ಆದರೆ ಈ ಆರೋಪವನ್ನು ಚೀನಾ ಅಲ್ಲಗಳೆದಿತ್ತು. ಅಮೆರಿಕ ಹಾಗೂ ಬ್ರಿಟನ್‌ನಂತಹ ದೇಶಗಳಲ್ಲಿ ರೋಗಿಗಳಿಗೆ ಅಂಗಾಂಗಗಳ ಕಸಿ ಮಾಡಿಸಿಕೊಳ್ಳಲು ತಿಂಗಳು, ವರ್ಷಗಟ್ಟಲೇ ಕಾಯಬೇಕಾಗುತ್ತದೆ. ಅದೇ ಚೀನಾದಲ್ಲಿ ಕಸಿಗಾಗಿ ಅಂಗಾಂಗಗಳು ಕೆಲವೇ ವಾರದಲ್ಲಿ ಲಭ್ಯವಾಗುತ್ತವೆ ಎನ್ನಲಾಗಿದೆ.

ಬ್ಲ್ಯಾಕ್‌ ಫಂಗಸ್‌ ರೋಗಿಗಳಿಗೆ ಬೇಕು ಕೃತಕ ಅಂಗ ಕಸಿ : ಜೋಡಣೆ ಭಾರೀ ದುಬಾರಿ

ಏಷ್ಯಾದಲ್ಲೇ ಮೊದಲು: ಬೆಂಗ್ಳೂರು ಮಗುವಿಗೆ ಚೆನ್ನೈನಲ್ಲಿ ಕರುಳು ಕಸಿ

ಬೆಂಗಳೂರಿನ 4 ವರ್ಷದ ಮಗುವಿಗೆ ಸಣ್ಣ ಕರುಳು ಕಸಿ ಶಸ್ತ್ರ ಚಿಕಿತ್ಸೆಯನ್ನು(Small Intestine Transplant Surgery) ಚೆನ್ನೈನ(Chennai) ರೇಲಾ ಆಸ್ಪತ್ರೆಯ(Rela Hospital ) ವೈದ್ಯರು ಯಶಸ್ವಿಯಾಗಿ ನಡೆಸಿದ್ದಾರೆ. ಇದು ಏಷ್ಯಾದಲ್ಲೇ(Asia) ಅತಿ ಚಿಕ್ಕ ವಯಸ್ಸಿನ ಮಗುವಿಗೆ ನಡೆಸಿದ ಕಸಿ ಚಿಕಿತ್ಸೆಯಾಗಿದೆ.

ಪದೇ ಪದೇ ವಾಂತಿಯಾಗುತ್ತಿದ್ದ ಕಾರಣ ಗುಹಾನ್‌ ಎಂಬ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆಯ ವೇಳೆ ಸಣ್ಣ ಕರುಳಿಗೆ ರಕ್ತ ಪೂರೈಕೆಯಾಗುತ್ತಿಲ್ಲ(Blood Supply), ಹಾಗಾಗಿ ಕರಳು ಕಸಿ ಮಾಡಬೇಕೆಂದು ಇದಕ್ಕಾಗಿ ರೇಲಾ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಲಾಗಿತ್ತು. ರೇಲಾ ಆಸ್ಪತ್ರೆಯಲ್ಲಿ ಸತತ 7 ಗಂಟೆಗಳ ಶಸ್ತ್ರಚಿಕಿತ್ಸೆಯ ನಂತರ ಸಣ್ಣ ಕರುಳು ಕಸಿ ಮಾಡುವಲ್ಲಿ ವೈದ್ಯರು(Doctors) ಯಶಸ್ವಿಯಾಗಿದ್ದಾರೆ. ಇದು ಏಷ್ಯಾ ಬುಕ್‌ ಆಫ್‌ ರೆಕಾರ್ಡ್ಸ್‌ನಲ್ಲಿ(Asia Book of Records) ದಾಖಲಾಗಿದೆ. ಇದಕ್ಕೆ ಸಂಬಂಧಿಸಿದ ಪ್ರಮಾಣಪತ್ರವನ್ನು ಆಸ್ಪತ್ರೆಯ ಮುಖ್ಯಸ್ಥರಿಗೆ ಹಸ್ತಾಂತರಿಸಲಾಗಿದೆ.

Covid 19 Treatment : ಶ್ವಾಸಕೋಶ ಕಸಿ ಇಲ್ಲದೇ ಗುಣಮುಖ: ಏಷ್ಯಾದಲ್ಲೇ ಮೊದಲು

ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕಿದ್ದ ತಡೆ ನಿವಾರಣೆ

ಬೆಂಗಳೂರು(Bengaluru): ಎಸ್‌ಡಿಎಸ್‌ ಕ್ಷಯ ರೋಗ ಮತ್ತು ರಾಜೀವ್‌ ಗಾಧಿ ಎದೆರೋಗಗಳ ಆಸ್ಪತ್ರೆಯ ಆವರಣದಲ್ಲಿ ‘ಗ್ಯಾಸ್ಟ್ರೋ ಎಂಟಾಲಜಿ ಮತ್ತು ಆರ್ಗನ್ಸ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಸ್ಪತ್ರೆ’ ಕಟ್ಟಡ ನಿರ್ಮಾಣ ಮಾಡಲು ರಾಜ್ಯ ಸರ್ಕಾರ(Government of Karnataka) ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌(High Court) ವಜಾಗೊಳಿಸಿದೆ. ಸರ್ಕಾರದ ನಿರ್ಧಾರ ಪ್ರಶ್ನಿಸಿ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಆರ್‌.ಚಂದ್ರಶೇಖರ ಮತ್ತು ವೈದ್ಯ ಬಿ.ರುದ್ರಪ್ಪ ಅವರು 2017ರಲ್ಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ ಅರ್ಜಿ ಕುರಿತು ಕೆಲ ಕಾಲ ವಾದ-ಪ್ರತಿವಾದ ಆಲಿಸಿದ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ಯಾವ ಜಾಗದಲ್ಲಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂಬ ಬಗ್ಗೆ ಸರ್ಕಾರ, ಸಂಬಂಧಪಟ್ಟ ಸರ್ಕಾರಿ ಇಲಾಖೆಗಳು ಮತ್ತು ತಜ್ಞರು ನಿರ್ಧಾರ ಮಾಡಬೇಕು. ಉದ್ದೇಶಿತ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆದ್ದರಿಂದ ಅರ್ಜಿ ಪುರಸ್ಕರಿಸಲು ಯಾವುದೇ ಸೂಕ್ತ ಕಾರಣ ಇಲ್ಲ ಎಂದು ತಿಳಿಸಿತು.

ಅಲ್ಲದೆ, ಉದ್ದೇಶಿತ ಗ್ಯಾಸ್ಟ್ರೋ ಎಂಟಾಲಜಿ ಮತ್ತು ಆರ್ಗನ್ಸ್‌ ಟ್ರಾನ್ಸ್‌ಪ್ಲಾಂಟೇಷನ್‌ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಮತ್ತು ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ಹೈಕೋರ್ಟ್‌ ಇದೇ ವೇಳೆ ನಿರ್ದೇಶಿಸಿ ಅರ್ಜಿ ವಜಾಗೊಳಿಸಿತು.

Follow Us:
Download App:
  • android
  • ios