ಸಾವು ಬದುಕಿನ ಹೋರಾಟದಲ್ಲಿ ಚೀನಾ ಪತ್ರಕರ್ತೆ; ವುಹಾನ್ ಸತ್ಯ ಹೇಳಿ ಅರೆಸ್ಟ್ ಆಗಿದ್ದ ಝಾಂಗ್!
- ವುಹಾನ್ ಕೊರೋನಾ ಸತ್ಯ ಹೇಳಿದ ಪತ್ರಕರ್ತರನ್ನೇ ಟಾರ್ಗೆಟ್ ಮಾಡಿದ ಚೀನಾ
- ಕೊರೋನಾ ವರದಿ ಮಾಡಿದ ಹಲವು ಪತ್ರಕರ್ತರು ನಾಪತ್ತೆ
- ವುಹಾನ್ ವಸ್ತುಸ್ಥಿತಿ ವರದಿ ಮಾಡಿದ್ದ ಪತ್ರಕರ್ತೆ ಬಂಧಿಸಿದ್ದ ಚೀನಾ
- ಸಾವು ಬದುಕಿನ ನಡುವಿನ ಹೋರಾಟದಲ್ಲಿ ವುಹಾನ್ ಪತ್ರಕರ್ತೆ
ಬೀಜಿಂಗ್(ನ.05): ಕೊರೋನಾ ವೈರಸ್(Coronavirus) ಚೀನಾ ಹುಟ್ಟುಹಾಕಿದ ವೈರಸ್ ಅನ್ನೋ ಮಾತು ಹಲವು ಬಾರಿ ಸಾಬೀತಾಗಿದೆ. ಆದರೆ ಚೀನಾ(China) ಮಾತ್ರ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಇದರ ನಡುವೆ ಚೀನಾದ ಕೊರೋನಾ ಕುತಂತ್ರ ಬಯಲು ಮಾಡಲು ಯತ್ನಿಸಿದ ಚೀನಾ ಪತ್ರಕರ್ತರು(Journalist) ಹಲವರು ನಾಪತ್ತೆಯಾಗಿದ್ದಾರೆ, ಹಲವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಇದೀಗ ವುಹಾನ್ ಕೊರೋನಾ ವಸ್ತುಸ್ಥಿತಿ ವರದಿ ಮಾಡಿ ಬಂಧನಕ್ಕೊಳಗಾಗಿದ್ದ ಪತ್ರಕರ್ತೆ ಇದೀಗ ಜೈಲಿನಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ.
India- China Tension:ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದಲ್ಲಿ ಚೀನಾದ 100 ಮನೆಗಳ ಹಳ್ಳಿ!
ಝಾಂಗ್ ಝಾನ್ ಅನ್ನೋ 38ರ ಹರೆಯದ ಪತ್ರಕರ್ತೆ ವುಹಾನ್ ಕೊರೋನಾ ಕುರಿತು ವರದಿ ಮಾಡಿದ್ದರು. ಇದು ಚೀನಾದ ಕೆಂಗಣ್ಣಿಗೆ ಕಾರಣವಾಗಿತ್ತು. ಚೀನಾ ಹಾಗೂ ಸರ್ಕಾರದ ವಿರುದ್ಧ ವರದಿ ಮಾಡಿದ ಕಾರಣಕ್ಕೆ ಪತ್ರಕರ್ತೆಯನ್ನು ಬಂಧಿಸಲಾಗಿತ್ತು. ಫೆಬ್ರವರಿ 2020ರಲ್ಲಿ ಝಾಂಗ್ ವುಹಾನ್‌ಗೆ ತೆರಳಿ ವರದಿ ಮಾಡಿದ್ದರು. ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿ ಹರಿಬಿಟ್ಟಿದ್ದರು. ಈ ನಡೆ ಚೀನಾವನ್ನು ಮತ್ತಷ್ಟು ಕೆರಳಿಸಿತ್ತು.
2020ರ ಮೇ ತಿಂಗಳಲ್ಲಿ ಪತ್ರಕರ್ತೆಯನ್ನು ಚೀನಾ ಸರ್ಕಾರ ಬಂಧಿಸಿತ್ತು. ದೇಶದ ವಿರುದ್ಧ ಮಾತನಾಡಿದ ಆರೋಪ ಹೊರಿಸಿ 4 ವರ್ಷ ಜೈಲು ಶಿಕ್ಷೆ ವಿಧಿಸಿತು. ಜೈಲಿನಲ್ಲೂ ಚೀನಾ ಇನ್ನಿಲ್ಲದ ಚಿತ್ರಹಿಂಸೆ ನೀಡಲಾಗಿತ್ತು. ಜೈಲಿನಲ್ಲಿದ್ದ ಝಾಂಗ್ ಝಾನ್ ಆರೋಗ್ಯ ಕ್ಷೀಣಿಸತೊಡಗಿದೆ.
ಕೊರೋನಾ ವೈರಸ್ ಸೋರಿಕೆ ಅಗಿದ್ದು ವುಹಾನ್ ಲ್ಯಾಬಿಂದ!
ಇತ್ತ ತಪ್ಪೆ ಮಾಡದ ತನ್ನ ಜೈಲಿನಲ್ಲಿ ಕೂಡಿಟ್ಟ ಚೀನಾ ಸರ್ಕಾರದ ವಿರುದ್ಧ ಪತ್ರಕರ್ತೆ ಝಾಂಗ್ ಉಪವಾಸ ಸತ್ಯಾಗ್ರಹ ಆರಂಭಿಸಿದರು. ಜೈಲಿನಲ್ಲೇ ಉಪವಾಸ ಸತ್ಯಗ್ರಹ ಆರಂಭಿಸಿದ ಝಾಂಗ್ ಆರೋಗ್ಯ ಮತ್ತಷ್ಟು ಕ್ಷೀಣಿಸಿತು. ತನ್ನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನು ಮುಂದುವರಿಸಿದ್ದರು. ಆದರೆ ಚೀನಾ ಮಾತ್ರ ಯಾವುದೇ ದಯೆ ತೋರಲಿಲ್ಲ.
ಇದೀಗ ಝಾಂಗ್ ಆರೋಗ್ಯ ಸಂಪೂರ್ಣ ಕ್ಷೀಣಿಸಿದೆ. ಸಾವು ಬದುಕಿನ ನಡುವೆ ಹೋರಾಡುತ್ತಿರುವ ಝಾಂಗ್ ಝಾನ್ ಬಿಡುಗಡೆ ಮಾಡುವಂತೆ ಕುಟುಂಬಸ್ಥರು ಚೀನಾ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಝಾಂಗ್ ಹೆಚ್ಚು ದಿನ ಬದುಕುವ ಸಾಧ್ಯತೆ ಇಲ್ಲ. ಆಕೆಯನ್ನು ತಕ್ಷಣವೇ ಬಿಡುಗಡೆ ಮಾಡಿ ಎಂದು ಕುಟುಂಬ ಮನವಿ ಮಾಡಿದೆ.
ಝಾಂಗ್ ಉಪವಾಸ ಸತ್ಯಾಗ್ರಹ ಮಾಡಿರುವ ಕಾರಣ ಆಕೆಯ ಆರೋಗ್ಯ ಹದಗೆಟ್ಟಿದೆ. ಹೀಗಾಗಿ ತಕ್ಷಣ ಬಿಡುಗಡೆ ಮಾಡಿ ಆಕೆಯ ಆರೈಕೆಗೆ ಅವಕಾಶ ನೀಡಬೇಕು ಎಂದು ಝಾಂಗ್ ಸಹೋದರ ಮನವಿ ಮಾಡಿದ್ದಾನೆ. ಕಳೆದ 3 ವಾರದಿಂದ ಝಾಂಗ್ ಭೇಟಿಯಾಗಲು ಅವಕಾಶ ನೀಡುತ್ತಿಲ್ಲ. ಆಕೆಯ ಆರೋಗ್ಯ ಕುರಿತು ಯಾವುದೇ ಮಾಹಿತಿ ನೀಡುತ್ತಿಲ್ಲ. ನಮ್ಮ ಆತಂಕ ಹೆಚ್ಚಾಗಿದೆ ಎಂದು ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ.
ವುಹಾನ್‌ನಿಂದಲೇ ಕೊರೋನಾ ಸೃಷ್ಟಿ ಆರೋಪಕ್ಕೆ ಮತ್ತಷ್ಟು ಪುಷ್ಟಿ!
ಝಾಂಗ್ ಝಾನ್ ವಿರುದ್ಧ ಚೀನಾ ಸರ್ಕಾರ ದೇಶ ದ್ರೋಹ ಆರೋಪ ಹೊರಿಸಿದೆ. ದೇಶ ವಿರೋಧಿ ಚಟುವಟಿಕೆ ಸೇರಿದಂತೆ ಹಲವು ಆರೋಪಗಳನ್ನು ಹೊತ್ತಿರುವ ಪತ್ರಕರ್ತೆ ಬಿಡುಗಡೆ ಅಸಾಧ್ಯ ಎಂದು ಚೀನಾ ಹೇಳಿದೆ. ಚೀನಾ ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ ತಪ್ಪಿದ್ದಲ್ಲ. ಅದರಲ್ಲೂ ದೇಶ ದ್ರೋಹ ತಪ್ಪಾಗಿರುವ ಕಾರಣ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು, ಕ್ಷಮೆ ನೀಡಲು ಸಾಧ್ಯವಿಲ್ಲ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು ಹೇಳಿದ್ದಾರೆ. ಚೀನಾ ಸರ್ಕಾರಕ್ಕೆ ಪತ್ರಕರ್ತರು ಹಲವು ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ.
ಪತ್ರಕರ್ತೆ ಝಾಂಗ್ ಝನ್ ಜೊತೆ ಚೆನ್ ಖ್ವೈಶ್, ಫಂಗ್ ಬಿನ್, ಲೀ ಜೆಹುವಾ ಅವರನ್ನು ಚೀನಾ ಸರ್ಕಾರ ಅರೆಸ್ಟ್ ಮಾಡಲಾಗಿತ್ತು. ಹಲವು ಚೀನಾ ಪತ್ರಕರ್ತರು ನಾಪತ್ತೆಯಾಗಿದ್ದಾರೆ. ಕೆಲವಪು ನಿಗೂಢವಾಗಿ ಸಾವನ್ನಪ್ಪಿದ್ದಾರೆ.