Asianet Suvarna News Asianet Suvarna News

India- China Tension:ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದಲ್ಲಿ ಚೀನಾದ 100 ಮನೆಗಳ ಹಳ್ಳಿ!

  • ಅಮೆರಿಕದ ಭದ್ರತಾ ಇಲಾಖೆ ವರದಿಯಲ್ಲಿ ಉಲ್ಲೇಖ
  • ಭಾರತದ ಭೂಭಾಗದಲ್ಲಿ ಚೀನಾದಿಂದ ಹಳ್ಳಿ ನಿರ್ಮಾಣ
  • ಭಾರತದ ಗಡಿಯೊಳಕ್ಕೆ ನುಗ್ಗಿ ಹಳ್ಳಿ ನಿರ್ಮಿಸಿದ ಚೀನಾ
China built 100 home village in Arunachal Pradesh taking incremental tactical actions says US Defence Report ckm
Author
Bengaluru, First Published Nov 5, 2021, 6:19 AM IST
  • Facebook
  • Twitter
  • Whatsapp

ನವದೆಹಲಿ(ನ.05): ಭಾರತದ(India) ಜತೆ ಕಾಲು ಕೆರೆದು ಕಾದಾಟಕ್ಕೆ ಇಳಿಸುವ ನೆರೆಯ ಚೀನಾ(China) ಅರುಣಾಚಲ ಪ್ರದೇಶ(Arunachal Pradesh) ರಾಜ್ಯದೊಳಗೆ 100 ಮನೆಗಳನ್ನು ಹೊಂದಿದ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ ಎಂದು ಅಮೆರಿಕದ ಭದ್ರತಾ ಇಲಾಖೆ ಹೇಳಿದೆ.

ಚೀನಾದ ಬುಡಕ್ಕೆ ಬೆಂಕಿ, ದೋಸ್ತಿಗೆ ಶಾಕ್ ಕೊಟ್ಟ ಐಸಿಸ್-ಏ..!

ಅಮೆರಿಕದ ಭದ್ರತಾ ಇಲಾಖೆಯ ವರದಿಯ ‘ಚೀನಾ-ಭಾರತ ಗಡಿ ಬಿಕ್ಕಟ್ಟು’ ಅಧ್ಯಾಯದಲ್ಲಿ, ‘2020ರ ವೇಳೆಗೆ ಚೀನಾದ ಪೀಪಲ್‌ ರಿಪಬ್ಲಿಕ್‌ ಸರ್ಕಾರವು, ಟಿಬೆಟ್‌ ಸ್ವಾಯತ್ತ ಪ್ರಾಂತ್ಯದ ವಿವಾದಿತ ಪ್ರದೇಶ ಮತ್ತು ಭಾರತದ ಅವಿಭಾಜ್ಯ ಅಂಗ ಅರುಣಾಚಲ ಪ್ರದೇಶದ ಪೂರ್ವ ಸೆಕ್ಟರ್‌ನ ವಾಸ್ತವ ಗಡಿ ರೇಖೆಯ ನಡುವೆ 100 ಮನೆಗಳನ್ನು(Home Village) ಒಳಗೊಂಡ ಗ್ರಾಮವೊಂದನ್ನು ನಿರ್ಮಾಣ ಮಾಡಿದೆ’ ಎಂದು ಹೇಳಿದೆ.

ಕೋವಿಡ್‌ ಮೂಲ: ಅಮೆರಿಕ ವರದಿಗೆ ಚೀನಾ ಸಿಡಿಮಿಡಿ!

ಒಂದು ದಶಕಕ್ಕಿಂತಲೂ ಹೆಚ್ಚಿನ ಅವಧಿಯಿಂದ ಚೀನಾ ಈ ಭಾಗದಲ್ಲಿ ಸಣ್ಣ ಸೇನಾ ತುಕಡಿಯನ್ನು ನಿಯೋಜಿಸಿತ್ತು. ಆದರೆ 2020ರಲ್ಲಿ ಗ್ರಾಮ ಅಭಿವೃದ್ಧಿಪಡಿಸಿದ ಬಳಿಕ ಚೀನಾ, ರಸ್ತೆ ನಿರ್ಮಾಣ ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಯೋಜನೆಗಳನ್ನು ಕೈಗೊಳ್ಳುತ್ತಿದೆ. ತನ್ಮೂಲಕ ಭಾರತದ ಗಡಿಯೊಳಗೆ ಚೀನಾ ಹಿಂದೆಂದಿಗಿಂತಲೂ ತನ್ನ ಇರುವಿಕೆಯನ್ನು ಹೆಚ್ಚು ಸಕ್ರಿಯಗೊಳಿಸಿದೆ. ಹೀಗಾಗಿ ಪರಿಸ್ಥಿತಿ ತೀರ ಭಿನ್ನವಾಗಿದೆ. ಗಡಿ ಬಿಕ್ಕಟ್ಟು ಕುರಿತಾಗಿ ಭಾರತ-ಚೀನಾ ಮಧ್ಯೆ ಸರಣಿ ಮಾತುಕತೆಗಳು ನಡೆದಿವೆ. ಆದಾಗ್ಯೂ, ತನ್ನ ಚತುರತೆಯಿಂದಾಗಿ ಗಡಿ ವಾಸ್ತವ ಪ್ರದೇಶದಲ್ಲಿ ತನ್ನ ಚಟುವಟಿಕೆಗಳನ್ನು ಮುಂದುವರಿಸುತ್ತಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಚೀನಾ ಮೇಲೆ ನಿಗಾಕ್ಕೆ ‘ಲೋಕಲ್‌ ಅಸ್ತ್ರ’!

ಅಮೆರಿಕಾ ರಕ್ಷಣಾ ಇಲಾಖೆ ಈ ವರದಿಯನ್ನು ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿಸಿದೆ. ಹಲವು ಸ್ಫೋಟಕ ಮಾಹಿತಿಗಳನ್ನು ಅಮೆರಿಕ ಡಿಫೆನ್ಸ್ ಈ ವರದಿಯಲ್ಲಿ ಉಲ್ಲೇಖಿಸಿದೆ. ಶಾಂತಿ ಭಂಗ ತರಬಲ್ಲ LOCಗಳ ಕುರಿತು ಅಮೆರಿಕ ಡೆಫೆನ್ಸ್ ವರದಿ ಮಾಡಿದೆ. ಭಾರತದ ಭೂಭಾಗವಾಗಿರುವ ದಕ್ಷಿಣ ಮೆಕ್‌ಮಹೊನ್ ಬಳಿ ಚೀನಾ ಹಳ್ಳಿ ನಿರ್ಮಿಸಿದೆ.

ಅರುಣಾಚಲ ಪ್ರದೇಶದ ಸುಬಾನ್ಸಿರಿ ಜಿಲ್ಲೆಯಲ್ಲಿ ಈ ಹಳ್ಳಿಗಳ ನಿರ್ಮಾಣವಾಗಿದೆ. ಇದೇ ಪ್ರದೇಶದಲ್ಲಿ ಭಾರತ ಹಾಗೂ ಚೀನಾ 1962ರಲ್ಲಿ ಯುದ್ಧ ಮಾಡಿತ್ತು. ಚೀನಾ ಹಳ್ಳಿ ನಿರ್ಮಾಣ ಮಾಡಿ ಇದು ಚೀನಾದ ಭಾಗಗ ಎಂದು ಬಿಂಬಿಸಿದೆ. ಈ ಹಳ್ಳಿಗಳ ಪಕ್ಕದಲ್ಲೆ ಸೇನಾ ಕ್ಯಾಂಪ್ ಕೂಡ ನಿರ್ಮಿಸಿದೆ. ಇನ್ನು ಚೀನಾ ಇದಕ್ಕಾಗಿ ರಸ್ತೆ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಮಾಡಿದೆ.

ಭಾರತದ ಜೊತೆಗಿನ ಅರುಣಾಚಲ  ಗಡಿ ನಿಯಂತ್ರಣ ರೇಖೆಯ ಕಮಾಂಡರ್ ಮಾತುಕತೆಯಲ್ಲಿ ಪಾಲ್ಗೊಳ್ಳುತ್ತಾ, ಅತ್ತ ಸದ್ದಿಲ್ಲದೆ ಹಳ್ಳಿ ನಿರ್ಮಿಸಿದೆ. ಅರುಣಾಚಲ ಪ್ರದೇಶ ಹಾಗೂ ಸಿಕ್ಕಿಂ ಗಡಿಗಳಲ್ಲಿ ಚೀನಾ ಉಪಟಳ ಹೆಚ್ಚಾಗುತ್ತಿದೆ.   ಇತ್ತ ಲಡಾಖ್ ಪ್ರಾಂತ್ಯದಲ್ಲಿ 2020ರಿಂದ ಚೀನಾ ಸಂಘರ್ಷ ನಡೆಸುತ್ತಲೇ ಇದೆ.

ಲಡಾಖ್(Ladakh standoff) ಪ್ರಾಂತ್ಯದಲ್ಲಿ ಭಾರತ ಹಾಗೂ ಚೀನಾ ನಡುವಿನ ಸಂಘರ್ಷ ಕಳೆದ ವರ್ಷ ಜೂನ್ ತಿಂಗಳಲ್ಲಿ ತಾರಕಕ್ಕೇರಿತ್ತು.  ಗಲ್ವಾನ್ ಕಣಿವೆಯಲ್ಲಿ(Galwan Valle) ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತಿಯಾಗಿ ಭಾರತದ ದಾಳಿಗೆ 40ಕ್ಕೂ ಹೆಚ್ಚು ಯೋಧರು ಸಾವನ್ನಪ್ಪಿದ್ದರು. ಆದರೆ ಚೀನಾ ಯೋಧರು ಸಾವನ್ನಪ್ಪಿದ ಮಾಹಿತಿಯನ್ನು ಗೌಪ್ಯವಾಗಿ ಇಟ್ಟಿದೆ. 

ಗಲ್ವಾನ್ ಕಣಿವೆ ಸಂಘರ್ಷದ ಬಳಿಕ ಚೀನಾ ಮೇಲಿನ ಆಕ್ರೋಶ ಹೆಚ್ಚಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸಲಾಯಿತು. ಚೀನಾ ಕಂಪನಿಗಳ ಜೊತೆ ಒಪ್ಪಂದ ಮುರಿದು ಬಿತ್ತು. ಟಿಲಿಕಾಂ ಒಪ್ಪಂದ ಪಡೆದಿದ್ದ ಚೀನಾ ಕಂಪನಿಗಳಿಂದ ಒಪ್ಪಂದ ರದ್ದು ಮಾಡಲಾಯಿತು.  ಚೀನಾದಿಂದ ಆಮದು ದಿಢೀರ್ ಕುಸಿತಗೊಂಡಿತು. ಭಾರತದ ಪ್ರತಿ ಹಬ್ಬದ ಸಂದರ್ಭದಲ್ಲಿ ಚೀನಾ ಹೆಚ್ಚು ವಹಿವಾಟು ನಡೆಸುತ್ತಿತ್ತು. ಇದೀಗ ಇದರ ಪ್ರಮಾಣ ತಗ್ಗಿದೆ. 

Follow Us:
Download App:
  • android
  • ios