Asianet Suvarna News Asianet Suvarna News

ದೇಶ ತೊರೆಯುವ ಕಂಪನಿಗಳಿಗೆ ಚೀನಾದಿಂದ ಕೋಲಾರ ಬೆದರಿಕೆ!

ಚೀನಾವೂ ತನ್ನ ದೇಶದಲ್ಲಿರುವ ವಿದೇಶಿ ಕಂಪನಿಗಳಿಗೆ ಕೋಲಾರದ ಹೆಸರಿನಲ್ಲಿ ಬೆದರಿಕೆ ಒಡ್ಡಲಾಗಿದೆ. 

china warns foreign Companies with kolar example snr
Author
Bengaluru, First Published Dec 19, 2020, 7:18 AM IST

ನವದೆಹಲಿ (ಡಿ.19): ವಿಶ್ವಕ್ಕೇ ಕೊರೋನಾ ಹಬ್ಬಿಸಿದ ಕಾರಣದಿಂದಾಗಿ ಚೀನಾ ತೊರೆದು ಭಾರತದಂತಹ ರಾಷ್ಟ್ರಗಳಿಗೆ ಸ್ಥಳಾಂತರಗೊಳ್ಳಲು ಹಲವು ಕಂಪನಿಗಳು ಮುಂದಾಗಿರುವಾಗಲೇ, ಕರ್ನಾಟಕದ ಕೋಲಾರದ ವಿಸ್ಟ್ರಾನ್‌ ಕಂಪನಿಯಲ್ಲಿ ಕಳೆದ ಶನಿವಾರ ನಡೆದ ಗಲಾಟೆಯನ್ನು ತೋರಿಸಿ ಚೀನಾ ಬೆದರಿಕೆ ಹಾಕುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಭಾರತದಲ್ಲಿ ನಡೆದ ಕಾರ್ಮಿಕರ ಗಲಾಟೆ ವಿಚಾರದಲ್ಲಿ ಮೂಗು ತೂರಿಸುವ ಮೂಲಕ ಚೀನಾ ಮತ್ತೊಮ್ಮೆ ಉದ್ಧಟತನ ಮೆರೆದಿದೆ.

ಚೀನಾದಲ್ಲಿ ಕಂಪನಿಗಳಿಗೆ ಅತ್ಯಂತ ಸ್ಥಿರವಾದ ಕಾರ್ಮಿಕ ಮಾರುಕಟ್ಟೆಇದೆ. ಭಾರತದ ವಿಸ್ಟ್ರಾನ್‌ ಘಟಕ(ಕೋಲಾರದಲ್ಲಿದೆ)ದಲ್ಲಿ ನಡೆದ ಧ್ವಂಸಕ ಕೃತ್ಯ ಚೀನಾದಿಂದ ತಮ್ಮ ಉತ್ಪಾದನಾ ಘಟಕಗಳನ್ನು ಸ್ಥಳಾಂತರಿಸಲು ಮುಂದಾಗುತ್ತಿರುವ ಕಂಪನಿಗಳಿಗೆ ಸಂಭಾವ್ಯ ಅಪಾಯ ಎಂದು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ಮುಖವಾಣಿಯಾಗಿರುವ ‘ಗ್ಲೋಬಲ್‌ ಟೈಮ್ಸ್‌’ ಮುಖ್ಯ ವರದಿಗಾರ್ತಿ ಖಿಂಗ್‌ಖಿಂಗ್‌ ಚೆನ್‌ ಎಚ್ಚರಿಸಿದ್ದಾರೆ.

ಶ್ರೀಲಂಕಾದಿಂದ ಕಲಿಯಬೇಕು, ಚೀನಾದಿಂದ ಜಾಗರೂಕರಾಗಿಬೇಕು; ನೇಪಾಳಕ್ಕೆ ರಾವತ್ ಸಲಹೆ! ..

ಆ್ಯಪಲ್‌ ಕಂಪನಿಯ ಮತ್ತೊಂದು ಪಾಲುದಾರ ಕಂಪನಿಯಾದ ಫಾಕ್ಸ್‌ಕಾನ್‌ ತಮ್ಮ ಉತ್ಪಾದನಾ ಘಟಕವನ್ನು ಭಾರತಕ್ಕೆ ಸ್ಥಳಾಂತರಿಸಿದ್ದಕ್ಕೆ ಈಗ ಪಶ್ಚಾತ್ತಾಪ ಪಡುತ್ತಿದೆಯೇ ಎಂದು ಕೇಳಿದ್ದಾರೆ. ಚೀನಾದಿಂದ ಉತ್ಪಾದನಾ ಘಟಕಗಳನ್ನು ಭಾರತದಂತಹ ದೇಶಗಳಿಗೆ ಸ್ಥಳಾಂತರಿಸಿದರೆ ಇಂತಹ ಗಲಾಟೆಗಳಿಗೆ ಒಳಗಾಗಿ ನಷ್ಟಎದುರಿಸಬೇಕಾಗುತ್ತದೆ ಎಂದು ಅವರು ಸೂಚ್ಯವಾಗಿ ಹೇಳಿದ್ದಾರೆ.

ಭಾರತದಲ್ಲಿ ನಡೆದ ಗಲಾಟೆಯ ವಿಷಯದಲ್ಲಿ ಚೀನಾ ಮೂಗು ತೂರಿಸಿರುವುದರಿಂದ ಬೇರೆ ರೀತಿಯ ವಿಶ್ಲೇಷಣೆಗಳು ಕೇಳಿಬರುವಂತಾಗಿದೆ. ಕೋಲಾರದ ಗಲಾಟೆಯಲ್ಲಿ ಕಮ್ಯುನಿಸ್ಟ್‌ ಬೆಂಬಲಿತ ಕಾರ್ಮಿಕ ಸಂಘಟನೆಗಳ ಕೈವಾಡ ಇರುವುದು ಸಾಬೀತಾಗಿರುವ ಹಿನ್ನೆಲೆಯಲ್ಲಿ ಕಮ್ಯುನಿಸ್ಟರ ಆಡಳಿತವಿರುವ ಚೀನಾದ ನಡೆ ಬಗ್ಗೆ ಸಂದೇಹ ಮೂಡಲು ಆರಂಭಿಸಿದೆ. ಭಾರತದಲ್ಲಿನ ಹೂಡಿಕೆ ವಾತಾವರಣ ಹಾಳು ಮಾಡಲು ಚೀನಾ ಏನಾದರೂ ಯತ್ನಿಸುತ್ತಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಕೋಲಾರದಲ್ಲಿ ಗಲಾಟೆ ನಡೆದಿದ್ದು ವಿಸ್ಟ್ರಾನ್‌ ಘಟಕದಲ್ಲಿ. ಅದು ತೈವಾನ್‌ ಮೂಲದ ಕಂಪನಿ. ತೈವಾನ್‌ಗೂ ಚೀನಾಗೂ ಆಗಿ ಬರುವುದಿಲ್ಲ ಎಂಬ ಕಾರಣವನ್ನು ಕೆಲವರು ನೀಡುತ್ತಿದ್ದಾರೆ.

Follow Us:
Download App:
  • android
  • ios