ನವದೆಹಲಿ(ಡಿ.18): ನೆರೆ ರಾಷ್ಟ್ರದ ಜೊತೆ ಭಾರತ ಉತ್ತಮ ಸಂಬಂಧ ಇಟ್ಟುಕೊಳ್ಳಲು ಬಯಸುತ್ತದೆ. ಆದರೆ ನೇಪಾಳ ಇದೀಗ ಚೀನಾ ಸಂಗ ಮಾಡೋ ಮೂಲಕ ತಪ್ಪು ಹೆಜ್ಜೆ ಇಡುತ್ತಿದೆ. ಚೀನಾ ಜೊತೆ ಹಲವು ಒಪ್ಪಂದ ಮಾಡಿಕೊಂಡಿರುವ ನೇಪಾಳಕ್ಕೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಎಚ್ಚರಿಸಿದ್ದಾರೆ.

ಗಡಿ ಸಮಸ್ಯೆ ಲಾಭ ಪಡೆಯಲು ಮುಂದಾದರೆ ತಕ್ಕ ಶಾಸ್ತಿ; ಪಾಕ್‌ಗೆ ಬಿಪಿನ್ ರಾವತ್ ಎಚ್ಚರಿಕೆ!

ಶ್ರೀಲಂಕಾದಿಂದ ನೇಪಾಳ ಸಾಕಷ್ಟು ಕಲಿಯಬೇಕಿದೆ. ಜೊತೆಗೆ ಚೀನಾದಿಂದ ಜಾಗರೂಕರಾಗಿರಬೇಕಿದೆ ಎಂದು ಬಿಪಿನ್ ರಾವತ್ ಸಲಹೆ ನೀಡಿದ್ದಾರೆ. ನೇಪಾಳ ಅಂತಾರಾಷ್ಟ್ರೀಯ ಒಪ್ಪಂದ ಮಾಡಿಕೊಳ್ಳಲು, ಇತರ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಮುಕ್ತವಾಗಿದೆ. ಆದರೆ ನೇಪಾಳ ಜೊತೆ ಕೆಲ ಯೋಜನೆಗಳಿಗೆ ಸಹಿ ಹಾಕಿರುವ ಚೀನಾ, ಭಾರತದ ವಿರುದ್ಧವಾಗಿ ವರ್ತಿಸುತ್ತಿದೆ ಎಂದು ರಾವತ್ ಹೇಳಿದ್ದಾರೆ.

ಸೇನೆ ಬಳಸಿ ಚೀನಾ ಗಡಿ ಖ್ಯಾತೆ ಬಗೆಹರಿಸಲು ಭಾರತ ಮುಕ್ತವಾಗಿದೆ: ತೀಕ್ಷ್ಣ ಎಚ್ಚರಿಕೆ ನೀಡಿದ CDS ರಾವತ್!..

ನೇಪಾಳ ಗಡಿ ಆಕ್ರಮಿಸಿಕೊಳ್ಳುತ್ತಿರುವ ಚೀನಾ, ರಸ್ತೆ ಅಭಿವೃದ್ಧಿ ಮಾಡುತ್ತಿದೆ. ನೇಪಾಳದಲ್ಲಿ ಕಾರಿಡಾರ್ ಯೋಜನೆ ಮೂಲಕ ಚೀನಾ, ಭಾರತದ ವಿರುದ್ಧ ಕತ್ತಿ ಮಸೆಯುತ್ತಿದೆ. ಈ ಸೂಕ್ಷ್ಮತೆಯನ್ನು ನೇಪಾಳ ಅರ್ಥಮಾಡಿಕೊಳ್ಳಬೇಕು ಎಂದು ರಾವತ್ ಹೇಳಿದ್ದಾರೆ.