ಟಿಬೆಟ್‌ನಲ್ಲಿ ಚೀನಾ ಸರ್ಕಾರದ ನಿಯಂತ್ರಣ ಹೆಚ್ಚಾಗಿದ್ದು, ಟಿಬೆಟಿಯನ್ ಸಂಸ್ಕೃತಿಯನ್ನು ಅಳಿಸುವ ಪ್ರಯತ್ನಗಳು ನಡೆಯುತ್ತಿವೆ. ಭಾಷೆ, ಧರ್ಮ, ಶಿಕ್ಷಣದ ಮೇಲೆ ಹಿಡಿತ ಸಾಧಿಸಲಾಗುತ್ತಿದೆ. ಟಿಬೆಟಿಯನ್ ಶಾಲೆಗಳಲ್ಲಿ ಮ್ಯಾಂಡರಿನ್ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ. ಮಠಗಳ ಮೇಲೆ ಕಣ್ಗಾವಲು ಇರಿಸಲಾಗಿದ್ದು, ಧಾರ್ಮಿಕ ನಾಯಕರ ನೇಮಕಾತಿಯಲ್ಲಿ ಚೀನಾ ಹಸ್ತಕ್ಷೇಪ ಮಾಡುತ್ತಿದೆ. ಡಿಜಿಟಲ್ ಕಣ್ಗಾವಲು ಹೆಚ್ಚಾಗಿದ್ದು, ಸಾಂಸ್ಕೃತಿಕ ಹಬ್ಬಗಳ ಮೇಲೆ ನಿರ್ಬಂಧ ಹೇರಲಾಗಿದೆ. ಈ ದಮನವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಖಂಡಿಸಲಾಗಿದೆ.

ಟಿಬೆಟ್ ಜಗತ್ತಿನ ಭಾಷಾವೈವಿಧ್ಯದ ಸ್ಥಳಗಳಲ್ಲಿ ಪ್ರಮುಖ ದೇಶವಾಗಿದೆ. ಆ ಭಾಷೆಗಳಲ್ಲಿ ಹಲವು ಅಳಿವಿನಂಚಿನಲ್ಲಿದೆ. ಟಿಬೆಟ್‌ನ ವಿಸ್ತಾರವಾದ ಪ್ರಸ್ಥಭೂಮಿಯ ತಿಳಿ ಗಾಳಿಯಲ್ಲಿ, ಶಾಂತ ಯುದ್ಧವು ಭುಗಿಲೆದ್ದಿದೆ. ಅದು ಶಸ್ತ್ರಾಸ್ತ್ರಗಳು ಅಥವಾ ಸೈನ್ಯಗಳೊಂದಿಗೆ ಅಲ್ಲ, ಬದಲಾಗಿ ಭಾಷೆ, ಶಿಕ್ಷಣ ಮತ್ತು ನೀತಿಯೊಂದಿನ ಯುದ್ಧವಾಗಿದೆ.

ಬೀಜಿಂಗ್ ಟಿಬೆಟ್ ಮೇಲೆ ನಿಯಂತ್ರಣ ಸಾಧಿಸಿದ ಆರು ದಶಕಗಳ ನಂತರ, ಚೀನಾ ಸರ್ಕಾರದ ಇತ್ತೀಚಿನ ತನ್ನ ಹೊಸ ಕಾರ್ಯತಂತ್ರಗಳ ಮೂಲಕ ಟಿಬೆಟ್‌ನ ವಿಶಿಷ್ಟ ಸಾಂಸ್ಕೃತಿಕ ಗುರುತನ್ನು ಅಳಿಸಿಹಾಕುವ ಗುರಿಯನ್ನು ಹೊಂದಿದ್ದು, ವ್ಯವಸ್ಥಿತ ಪ್ರಯತ್ನವನ್ನು ತೀವ್ರವಾಗಿ ಮಾಡುತ್ತಿದೆ.

ಭಾಷೆ, ಧರ್ಮ, ಸಾಂಸ್ಕೃತಿಕ ಹೆಗ್ಗುರುತುಗಳು ಮತ್ತು ಶಿಕ್ಷಣ ಇವುಗಳ ಮೇಲೆ ಹಿಡಿತ ಸಾಧಿಸುವುದು ಪ್ರಮುಖವಾದ ಮತ್ತು ಸ್ಪಷ್ಟವಾದ ಚೀನಾದ ಗುರಿ. ಈ ಪ್ರಯತ್ನಗಳು ಅನೇಕ ವೀಕ್ಷಕರು ಚೀನಾದ ವಿಧಾನವನ್ನು ಸಾಂಸ್ಕೃತಿಕ ಕ್ರಾಂತಿಯನ್ನು ನೆನಪಿಸುವ ಹೊಸ ರೂಪದ ಸಾಂಸ್ಕೃತಿಕ ನರಮೇಧ ಎಂದು ಎಂದು ಕರೆದಿದೆ. ಈ ಮೂಲಕ ಸೂಕ್ಷ್ಮವಾಗಿ ಅಧಿಕಾರಶಾಹಿ ವಿಧಾನಗಳ ಮೂಲಕ ಚೀನಾ ಕಾರ್ಯನಿರ್ವಹಿಸುತ್ತವೆ.

ಗಡಿ ಬಳಿ ಚೀನಾ 90 ಹಳ್ಳಿ ನಿರ್ಮಾಣ: ಭಾರತದ ವಿರುದ್ಧ ಸಂಚು?

ಅನೇಕ ತಲೆಮಾರುಗಳವರೆಗೆ ಟಿಬೆಟಿಯನ್ ಭಾಷೆಯು ಈ ಪ್ರದೇಶದ ಗುರುತಿನ ಹೃದಯಬಡಿತವಾಗಿತ್ತು, ಮಠಗಳು, ಮನೆಗಳು ಮತ್ತು ಮಾರುಕಟ್ಟೆಗಳಲ್ಲಿ ಪ್ರತಿಧ್ವನಿಸುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ, ಟಿಬೆಟಿಯನ್ ಶಾಲೆಗಳಲ್ಲಿ ಮ್ಯಾಂಡರಿನ್ ಚೈನೀಸ್ ಕಡ್ಡಾಯ ಬೋಧನಾ ಭಾಷೆಯಾಗಿದೆ, ಟಿಬೆಟಿಯನ್ ಭಾಷಾ ತರಗತಿಗಳನ್ನು ಬಾಹ್ಯ ವಿಷಯಕ್ಕೆ ಮಾರ್ಪಾಡು ಮಾಡಲಾಗಿದೆ.

ಕ್ವಿಂಗ್ಹೈ ಪ್ರಾಂತ್ಯದಂತಹ ನಗರ ಪ್ರದೇಶಗಳಲ್ಲಿ, ಟಿಬೆಟಿಯನ್ ಭಾಷೆಯ ಫಲಕಗಳು ಕ್ರಮೇಣ ಕಣ್ಮರೆಯಾಗುತ್ತಿವೆ, ಅವುಗಳ ಸ್ಥಾನವನ್ನು ಚೀನೀ ಅಕ್ಷರಗಳು ಆಕ್ರಮಿಸಿಕೊಳ್ಳುತ್ತಿದೆ.

ಟಿಬೆಟಿಯನ್ ಯುವಕರು ಹೆಚ್ಚಾಗಿ ಮ್ಯಾಂಡರಿನ್ ಭಾಷೆಯನ್ನು ಮಾತನಾಡುತ್ತಾರೆ, ಇದು ಚೀನಾದ ಶಿಕ್ಷಣ ವ್ಯವಸ್ಥೆಯ ಬಲವಂತದ ಪ್ರಯೋಗವನ್ನು ಪ್ರತಿಬಿಂಬಿಸುತ್ತದೆ. ಅಂತರರಾಷ್ಟ್ರೀಯ ಹಕ್ಕುಗಳ ವರದಿಗಳ ಪ್ರಕಾರ, ಸುಮಾರು ಒಂದು ಮಿಲಿಯನ್ ಟಿಬೆಟಿಯನ್ ಮಕ್ಕಳನ್ನು ವಸತಿ ಬೋರ್ಡಿಂಗ್ ಶಾಲೆಗಳಲ್ಲಿ ಇರಿಸಲಾಗಿದೆ.

ಭಾರತದ ಮಗ್ಗುಲಲ್ಲೇ ಸಿದ್ಧವಾಗುತ್ತಿದೆ ಚೀನಾದ 11.37 ಲಕ್ಷ ಕೋಟಿಯ ಜಲಾಸ್ತ್ರ!

ಈ ಬಗ್ಗೆ ಅಲ್ಲಿನ ಪಂಡಿತರು ಹೇಳುವ ಪ್ರಕಾರ ಚೀನಾದ ಉದ್ದೇಶ ಶಿಕ್ಷಣವನ್ನು ಸುಧಾರಿಸುವುದಲ್ಲ, ಬದಲಾಗಿ ತಮ್ಮ ಸಾಂಸ್ಕೃತಿಕ ಬೇರುಗಳಿಂದ ಸಂಪರ್ಕ ಕಡಿತಗೊಂಡ ಪೀಳಿಗೆಯನ್ನು ಬೆಳೆಸುವುದು. 

ಶತಮಾನಗಳ ಕಾಲ, ಟಿಬೆಟಿಯನ್ ಬೌದ್ಧಧರ್ಮವು ಆಧ್ಯಾತ್ಮಿಕ ಆಧಾರ ಮತ್ತು ಸಾಂಸ್ಕೃತಿಕ ಭಂಡಾರವಾಗಿ ಕಾರ್ಯನಿರ್ವಹಿಸಿತು. ಪ್ರಸ್ತುತ ಆ ಅಡಿಪಾಯವನ್ನು ನಿರಂತರವಾಗಿ ದುರ್ಬಲಗೊಳಿಸಲಾಗುತ್ತಿದೆ. ಒಂದು ಕಾಲದಲ್ಲಿ ಕಲಿಕೆ ಮತ್ತು ಆರಾಧನೆಯ ರೋಮಾಂಚಕ ಕೇಂದ್ರಗಳಾಗಿದ್ದ ಮಠಗಳು ಈಗ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಸನ್ಯಾಸಿಗಳು, ಬೌದ್ಧ ಬಿಕ್ಕುಗಳು ಬಲವಂತದ ರಾಜಕೀಯ ಬೋಧನೆಯನ್ನು ಎದುರಿಸುತ್ತಿದ್ದಾರೆ, ಚೀನೀ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠೆ ಮತ್ತು ದಲೈ ಲಾಮಾ ಅವರ ಸ್ಪಷ್ಟ ನಿರಾಕರಣೆಯನ್ನು ಒತ್ತಾಯಿಸುತ್ತಿದ್ದಾರೆ. ಸಾಂಪ್ರದಾಯಿಕ ಪ್ರಾರ್ಥನಾ ಧ್ವಜಗಳನ್ನು ನೇತು ಹಾಕುವಂತಹ ನಂಬಿಕೆಯ ಸಾಂಕೇತಿಕ ಕಾರ್ಯಗಳೇ ಚೀನಾದ ಗುರಿಯಾಗಿವೆ.

ಕಳೆದ ಐದು ವರ್ಷಗಳಲ್ಲಿ, ಬೌದ್ಧ ವಿದ್ವತ್ಪೂರ್ಣ ಕೇಂದ್ರಗಳೆಂದು ಹೆಸರುವಾಸಿಯಾದ ಯಾಚೆನ್ ಗಾರ್ ಮತ್ತು ಲರುಂಗ್ ಗಾರ್ ನಂತಹ ಟಿಬೆಟಿಯನ್ ಮಠಗಳು ವ್ಯಾಪಕವಾದ ವಿವಾದಕ್ಕೆ ಮತ್ತು ಬಲವಂತದ ಹೊರಹಾಕುವಿಕೆಯನ್ನು ಎದುರಿಸಿವೆ. ಚೀನಾದ ಉದ್ದೇಶ ಇಂತಹ ಪವಿತ್ರ ಕ್ಷೇತ್ರಗಳನ್ನು ಮುಚ್ಚುವುದೇ ಆಗಿದೆ.

ಚೀನಾವು ಟಿಬೆಟಿಯನ್ ಧಾರ್ಮಿಕ ನಾಯಕತ್ವದ ಮೇಲೆ ಸಕ್ರಿಯವಾಗಿ ನಿಯಂತ್ರಣ ಸಾಧಿಸಿದೆ, ವಿಶೇಷವಾಗಿ 11 ನೇ ಪಂಚೆನ್ ಲಾಮಾ ಅವರ ನೇಮಕಾತಿಯ ಮೂಲಕ, ದಲೈ ಲಾಮಾ ಗುರುತಿಸಿದ ಅಭ್ಯರ್ಥಿಯನ್ನು ತಿರಸ್ಕರಿಸಿ, ಬದಲಾಗಿ ತನ್ನದೇ ಆದ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ದಲೈ ಲಾಮಾ ಸೇರಿದಂತೆ ಭವಿಷ್ಯದ ಧಾರ್ಮಿಕ ನಾಯಕರ ಉತ್ತರಾಧಿಕಾರವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವುದು ಚೀನಾದ ತಂತ್ರ.

ಇದರ ಜೊತೆಗೆ ಚೀನಾದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳು ಟಿಬೆಟ್‌ನ ಭೌತಿಕ ಸಾಂಸ್ಕೃತಿಕ ಪರಂಪರೆಯ ಮೇಲೆ ನೇರವಾಗಿ ಪರಿಣಾಮ ಬೀರಿವೆ. ಜಲವಿದ್ಯುತ್ ಅಣೆಕಟ್ಟುಗಳು ಮತ್ತು ಕೈಗಾರಿಕಾ ಅಭಿವೃದ್ಧಿಗಳು ಸೇರಿದಂತೆ ಬೃಹತ್ ಮೂಲಸೌಕರ್ಯ ಯೋಜನೆಗಳಿಗೆ ಭೂಮಿಯನ್ನು ತೆರವುಗೊಳಿಸಲು ಕೆಲವು ಶತಮಾನಗಳಷ್ಟು ಹಳೆಯದಾದ ಸಾಂಪ್ರದಾಯಿಕ ಮಠಗಳನ್ನು ಕೆಡವಲಾಗಿದೆ. 

ಇತ್ತೀಚೆಗೆ, ಡ್ರಾಗೋ ಕೌಂಟಿಯಲ್ಲಿ ಇದ್ದ ಪೂಜ್ಯ ಬೌದ್ಧ ಬಿಕ್ಕುಗಳ ಪ್ರತಿಮೆಗಳನ್ನು ಧ್ವಂಸಗೊಳಿಸಲಾಯಿತು. ಇದು ಅಂತರರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಯಿತು.

ಟಿಬೆಟಿಯನ್ ಪರಂಪರೆಯ ತಾಣಗಳು, ಅವುಗಳ ಮೂಲ ಸಾಂಸ್ಕೃತಿಕ ಹಿನ್ನೆಲೆಯನ್ನು ಕಳೆದುಕೊಂಡು, ವಿಶಿಷ್ಟವಾದ ಚೀನೀ ವಾಸ್ತುಶಿಲ್ಪದ ಲಕ್ಷಣಗಳೊಂದಿಗೆ ಪುನರ್ನಿರ್ಮಿಸಲ್ಪಟ್ಟ ಪ್ರವಾಸಿ ಆಕರ್ಷಣೆಗಳಾಗಿ ರೂಪಾಂತರಗೊಳ್ಳುತ್ತಿರುವುದನ್ನು ಯುನೆಸ್ಕೋ ಮತ್ತು ಅಂತರರಾಷ್ಟ್ರೀಯ ಸಂರಕ್ಷಣಾ ಸಂಸ್ಥೆಗಳು ಆತಂಕದಿಂದ ಗಮನಿಸಿವೆ.

ಟಿಬೆಟ್‌ ಗೆ ಡಿಜಿಟಲ್‌ ಜೈಲು:
ಇನ್ನು ಟಿಬೆಟ್‌ ಅನ್ನು ಚೀನಾ ತನ್ನ ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಿದೆ. ಈ ಡಿಜಿಟಲ್ ಪೊಲೀಸ್ ರಾಜ್ಯವಾಗಿ ಪರಿವರ್ತಿಸಿದೆ. ವ್ಯಕ್ತಿಗಳು ಸ್ಪಷ್ಟವಾಗಿ ಕಾಣುವ ಕ್ಯಾಮಾರಾಗಳು, AI-ಚಾಲಿತ ಟ್ರ್ಯಾಕಿಂಗ್ ವ್ಯವಸ್ಥೆಗಳು ಮತ್ತು ಕಡ್ಡಾಯ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳು ಟಿಬೆಟಿಯನ್ನರ ಚಲನವಲನಗಳು, ಸಂಭಾಷಣೆಗಳು ಮತ್ತು ಅವರ ಭಾವನಾತ್ಮಕ ಸ್ಥಿತಿಗಳನ್ನು ಸಹ ಗಮನಿಸುತ್ತಲೇ ಇರುತ್ತದೆ.

ಟಿಬೆಟಿಯನ್ ಗುರುತಿನ ಕೇಂದ್ರಬಿಂದುವಾಗಿರುವ ಸಾಂಪ್ರದಾಯಿಕ ಹಬ್ಬಗಳು ಮತ್ತು ಸಾಂಸ್ಕೃತಿಕ ಕೂಟಗಳ ಮೇಲೆ ಭಾರೀ ಪೊಲೀಸ್ ಬಂದೋಬಸ್ತ್ ಮಾಡಲಾಗುತ್ತದೆ ಮತ್ತು ಅಧಿಕಾರಿಗಳು ಭಿನ್ನಾಭಿಪ್ರಾಯದ ಸಣ್ಣ ಸುಳಿವನ್ನು ಸಹ ತ್ವರಿತವಾಗಿ ಹತ್ತಿಕ್ಕುತ್ತಾರೆ.

ಚೀನಾದ ಸೈಬರ್ ಭದ್ರತಾ ಕಾನೂನುಗಳು ಟಿಬೆಟಿಯನ್ ಗುರುತು ಮತ್ತು ಸಂಸ್ಕೃತಿಯ ಕುರಿತ ಆನ್‌ಲೈನ್ ಚರ್ಚೆಗಳನ್ನು ಕೂಡ ಅಪರಾಧ ಎಂದಿದೆ. ಈ ಮೂಲಕ ಯಾವುದೇ ಅರ್ಥಪೂರ್ಣ ಡಿಜಿಟಲ್ ಪ್ರತಿರೋಧವನ್ನು ಪರಿಣಾಮಕಾರಿಯಾಗಿ ಮೌನಗೊಳಿಸಿವೆ.

ಇತ್ತೀಚಿನ ವರ್ಷಗಳಲ್ಲಿ ಟಿಬೆಟ್‌ನಲ್ಲಿ ಚೀನಾ ನಡೆಸುತ್ತಿರುವ ಸಾಂಸ್ಕೃತಿಕ ದಮನಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಯುನೈಟೆಡ್ ಸ್ಟೇಟ್ಸ್, ಜರ್ಮನಿ, ಯುನೈಟೆಡ್ ಕಿಂಗ್‌ಡಮ್, ಜಪಾನ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ರಾಷ್ಟ್ರಗಳ ಒಕ್ಕೂಟವು ವಿಶ್ವಸಂಸ್ಥೆಯ ವೇದಿಕೆಗಳಲ್ಲಿ ಟಿಬೆಟ್ ಪರವಾಗಿ ಧ್ವನಿ ಎತ್ತಿದೆ. ಚೀನಾದ ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಬಲವಂತದ ನೀತಿಯನ್ನು ಖಂಡಿಸಿದೆ. ಜೊತೆಗೆ ಟಿಬೆಟಿಯನ್ ವಕಾಲತ್ತು ಗುಂಪುಗಳು, ಮಾನವ ಹಕ್ಕುಗಳ ಸಂಘಟನೆಗಳೊಂದಿಗೆ ಜಾಗತಿಕ ಅಭಿಯಾನಗಳನ್ನು ಚೀನಾದ ವಿರುದ್ಧ ಹೆಚ್ಚಾಗಿ ಸಂಘಟಿಸುತ್ತಿವೆ.

ಚೀನಾದ ತೀವ್ರ ದಬ್ಬಾಳಿಕೆ ಮಧ್ಯೆಯೂ ಟಿಬೆಟಿಯನ್ ವಲಸೆಗಾರರು ತಮ್ಮ ಅಳಿವಿನಂಚಿನಲ್ಲಿರುವ ಪರಂಪರೆಯ ರಕ್ಷಕರಾಗಿ ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದ್ದಾರೆ.