ಚೀನಾ(ಜೂ.20): ಭಾರತೀಯ ಯೋಧರ ಮೇಲೆ ದಾಳಿ ಮಾಡಿದ ಚೀನಾ ವಿರುದ್ಧ ಭಾರತದೆಲ್ಲೆಡೆ ಆಕ್ರೋಶ ಹೆಚ್ಚಾಗುತ್ತಿದೆ. ವಿದೇಶದಲ್ಲಿರುವ ಭಾರತೀಯರು ಚೀನಾ ದಾಳಿಯನ್ನು ಖಂಡಿಸಿದ್ದಾರೆ. ಇದೇ ರೀತಿ ಚೀನಾದಲ್ಲಿ ಕಲಿಯುತ್ತಿರುವ ಭಾರತೀಯ ವಿದ್ಯಾರ್ಥಿಗಳು, ಚೀನಾ ಆಕ್ರಮಣವನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದರು. ಇದೀಗ ಚೀನಾ ವಿಶ್ವವಿದ್ಯಾಲಯ ಭಾರತೀಯ ವಿದ್ಯಾರ್ಥಿಗಳಿಗೆ ಖಡಕ್ ವಾರ್ನಿಂಗ್ ನೀಡಿದೆ. 

10ರಲ್ಲಿ ನಾಲ್ವರು ಭಾರತೀಯರು ಚೀನಾ ಫೋನ್‌ಗೆ ಗುಡ್‌ಬೈ; ಸಮೀಕ್ಷೆ ಬಹಿರಂಗ!...

ಜೈಂಗ್ಸು ಯುನಿವರ್ಸಿಟಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ಭಾರತೀಯ ವಿದ್ಯಾರ್ಥಿಗಳು ಚೀನಾ ದಾಳಿಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಓರ್ವ ವಿದ್ಯಾರ್ಥಿ ಪೋಸ್ಟ್ ವೈರಲ್ ಆಗಿತ್ತು. ತಕ್ಷಣವೇ ಜೈಂಗ್ಸು ವಿಶ್ವವಿದ್ಯಾಲಯ, ವಿದ್ಯಾರ್ಥಿಗೆ ಖಡಕ್ ವಾರ್ನಿಂಗ್ ನೀಡಿದೆ. 

ಭಾರೀತಯಿ ವಿದ್ಯಾರ್ಥಿಯನ್ನು ಅಮಾನತು ಮಾಡುವುದಾಗಿ ಹೇಳಿದೆ. ಚೀನಾ ದೇಶದಲ್ಲಿದ್ದು, ಚೀನಾ ವಿರೋಧಿಸುವರು ದೇಶ ದ್ರೋಹ ಮಾಡಿದಂತೆ ಎಂದು ವಿಶ್ವವಿದ್ಯಾಲಯ ಹೇಳಿದೆ. ಇತ್ತ ಭಾರತೀಯ ವಿದ್ಯಾರ್ಥಿ ಕ್ಷಮೆ ಕೇಳಿದ್ದಾನೆ. ಆದರೆ ವಿಶ್ವವಿದ್ಯಾಲಯ ಇದೀಗ ಈ ರೀತಿ ಚೀನಾ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿಗಳ ಮಾಹಿತಿ ಕಲೆ ಹಾಕಿ ಬಳಿಕ ಕ್ರಮ ಕೈಗೊಳ್ಳಲು ಮುಂದಾಗಿದೆ.