ಚೀನಾ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದೆ. ಚೀನಾ ಕಾಂಡೋಮ್ ಮೇಲೆ ತೆರಿಗೆ ವಿಧಿಸಿದೆ. 30 ವರ್ಷಗಳ ನಂತ್ರ ಚೀನಾ ತೆಗೆದುಕೊಂಡ ಈ ನಿರ್ಧಾರ ಎಲ್ಲರನ್ನು ಅಚ್ಚರಿಗೊಳಿಸಿದೆ. ಅಷ್ಟಕ್ಕೂ ಕಾರಣ ಏನು?

ಬೆಲೆ ಹೆಚ್ಚಾದಾಗ ಅದ್ರ ಖರೀದಿ ಕಡಿಮೆ ಆಗುತ್ತೆ. ಹಾಗಾಗಿಯೇ ಚೀನಾ (China), ಕಾಂಡೋಮ್ ವಿಷ್ಯದಲ್ಲಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. 30 ವರ್ಷಗಳ ನಂತ್ರ ಚೀನಾ ಮೊದಲ ಬಾರಿ ಕಾಂಡೋಮ್ ಮತ್ತು ಇತರ ಗರ್ಭನಿರೋಧಕ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ. ಚೀನಾ ಈ ನಿರ್ಧಾರ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಚೀನಾದ ಹೊಸ ತೆರಿಗೆ ನವೀಕರಣದ ಪ್ರಕಾರ, 1993 ರಿಂದ ವಿನಾಯಿತಿ ಪಡೆದ ಉತ್ಪನ್ನಗಳಿಗೆ ಈಗ ಶೇಕಡಾ 13 ರಷ್ಟು ತೆರಿಗೆ ವಿಧಿಸಲಾಗುತ್ತದೆ.

30 ವರ್ಷಗಳ ನಂತ್ರ ಕಾಂಡೋಮ್ ಮೇಲೆ ತೆರಿಗೆ (tax)

1993ರಲ್ಲಿ ಚೀನಾದಲ್ಲಿ ಕುಟುಂಬಕ್ಕೊಂದು ಮಗು ನೀತಿ ಜಾರಿಯಲ್ಲಿತ್ತು. ಜನಸಂಖ್ಯೆ ನಿಯಂತ್ರಣ ಚೀನಾದ ಮುಖ್ಯ ಗುರಿಯಾಗಿತ್ತು. ಜನನ ಪ್ರಮಾಣದ ನಿಯಂತ್ರಣಕ್ಕೆ ಮುಂದಾಗಿದ್ದ ಚೀನಾ, ಕಾಂಡೋಮ್ ಹಾಗೂ ಗರ್ಭನಿರೋಧಕ ಉತ್ಪನ್ನಗಳಿಗೆ ತೆರಿಗೆ ವಿನಾಯಿತಿ ನೀಡಿತ್ತು. ಆದ್ರೀಗ ಇವುಗಳ ಮೇಲೆ ತೆರಿಗೆ ವಿಧಿಸಲು ಚೀನಾ ಮುಂದಾಗಿದೆ. ಶೇಕಡಾ 13 ರಷ್ಟು ತೆರಿಗೆ ವಿಧಿಸಲು ಮುಂದಾಗಿದೆ. ಅಲ್ದೆ ಚೀನಾ, ಶಿಶುಪಾಲನಾ ಮತ್ತು ಕುಟುಂಬಕ್ಕೆ ಸಂಬಂಧಿತ ಸೇವೆಗಳನ್ನು ವ್ಯಾಟ್ನಿಂದ ವಿನಾಯಿತಿ ನೀಡಿದೆ. ಈ ಪಟ್ಟಿಯಲ್ಲಿ ನರ್ಸರಿಗಳು, ಶಿಶುವಿಹಾರಗಳು, ವೃದ್ಧರ ಆರೈಕೆ ಸೌಲಭ್ಯಗಳು, ಅಂಗವಿಕಲ ಸೇವೆಗಳು ಮತ್ತು ವಿವಾಹ ಸಂಬಂಧಿತ ಸೇವೆಗಳು ಸೇರಿವೆ. ಈ ವಿನಾಯಿತಿಗಳು ಜನವರಿಯಲ್ಲಿ ಜಾರಿಗೆ ಬರಲಿವೆ.

ಕನ್ನಡಿಗ ಹಿರೇಮಠ ವಿಶ್ವದ ಕಿರಿಯ ಸ್ವಯಂ ಸಿರಿವಂತ: ಜಕರ್‌ಬರ್ಗ್‌ಗಿದ್ದ ಪಟ್ಟ ಆದರ್ಶ್‌ಗೆ!

ಚೀನಾದ ಈ ನಿರ್ಧಾರದ ಹಿಂದಿದೆ ಮಹತ್ವದ ಕಾರಣ

ಮೊದಲೇ ಹೇಳಿದಂತೆ ಜನಸಂಖ್ಯೆ ನಿಯಂತ್ರಣಕ್ಕೆ ಚೀನಾ ಒಂದು ಮಗು ನೀತಿಯನ್ನು ಹಿಂದೆ ಜಾರಿಗೆ ತಂದಿತ್ತು. ಕಳೆದ ಮೂರು ವರ್ಷಗಳಿಂದ ಚೀನಾ ಜನಸಂಖ್ಯೆ ಕಡಿಮೆಯಾಗ್ತಿದೆ. 2024 ರಲ್ಲಿ ಕೇವಲ 9.54 ಮಿಲಿಯನ್ ಮಕ್ಕಳ ಜನನವಾಗಿದೆ. ದೇಶದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸುವ ಉದ್ದೇಶವನ್ನು ಚೀನಾ ಹೊಂದಿದೆ. ಇದೇ ಕಾರಣಕ್ಕೆ ಕಾಂಡೋಮ್ ಮೇಲೆ ತೆರಿಗೆ ವಿಧಿಸಲು ಮುಂದಾಗಿದೆ. ಬೆಲೆ ಹೆಚ್ಚಾದಂತೆ ಖರೀದಿ ಕಡಿಮೆ ಆಗುತ್ತೆ ಎಂಬುದು ಚೀನಾ ಸರ್ಕಾರದ ನಂಬಿಕೆ.

ಚೀನಾದಲ್ಲಿ ಜನನ ಪ್ರಮಾಣ ಕಡಿಮೆ ಆಗಲು ವೆಚ್ಛ ಹೆಚ್ಚಳ ಕಾಣವಾಗಿದೆ. 2024 ರ ಇನ್ಸ್ಟಿಟ್ಯೂಟ್ ಆಫ್ ಯೂತ್ ಪಾಪ್ಯುಲೇಷನ್ ರಿಸರ್ಚ್ ವರದಿಯ ಪ್ರಕಾರ, ಮಗುವನ್ನು 18 ವರ್ಷ ವಯಸ್ಸಿನವರೆಗೆ ಬೆಳೆಸಲು 538,000 ಯುವಾನ್ ($115,995) ಗಿಂತ ಹೆಚ್ಚು ವೆಚ್ಚವಾಗ್ತಿದೆ. ನಿಧಾನಗತಿ ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗದಲ್ಲಿ ಏರಿಳಿತದಿಂದ ಭಯಗೊಂಡಿರುವ ಯುವಕರು ಮಕ್ಕಳನ್ನು ಪಡೆಯಲು ಹಿಂದೇಟು ಹಾಕ್ತಿದ್ದಾರೆ. ಹೊಸ ತೆರಿಗೆ ನೀತಿ ಜನಸಂಖ್ಯೆ ಹೆಚ್ಚಳಕ್ಕೆ ಗಮನಾರ್ಹ ಕೊಡುಗೆ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Pakistan Rebuilds Airbase: ಆಪರೇಷನ್ ಸಿಂದೂರ್ ವೇಳೆ ಭಾರತ ಧ್ವಂಸ ಮಾಡಿದ್ದ ಪಾಕ್ ವಾಯುನೆಲೆ ಮರು ನಿರ್ಮಾಣ!

ಚೀನಾ, ಇತ್ತೀಚಿನ ವರ್ಷಗಳಲ್ಲಿ ಅನೇಕ ಬದಲಾವಣೆ ಮಾಡಿದೆ. ನಗದು ಸಬ್ಸಿಡಿಗಳನ್ನು ಪರಿಚಯಿಸಿದೆ. ಮಕ್ಕಳ ಆರೈಕೆ ಆಯ್ಕೆಗಳನ್ನು ವಿಸ್ತರಿಸಿದೆ. ಮಾತೃತ್ವ ಮತ್ತು ಪಿತೃತ್ವ ರಜೆಯನ್ನು ವಿಸ್ತರಿಸಿದೆ. ವೈದ್ಯಕೀಯವಾಗಿ ಅಗತ್ಯ ಎಂದು ಪರಿಗಣಿಸದ ಗರ್ಭಪಾತಗಳನ್ನು ಕಡಿಮೆ ಮಾಡಲುಮಾರ್ಗಸೂಚಿಗಳನ್ನು ಹೊರಡಿಸಿದೆ. ಚೀನಾದ ಹೊಸ ತೆರಿಗೆ ನೀತಿ ಜನಸಂಖ್ಯೆಯನ್ನು ಹೆಚ್ಚು ಮಾಡ್ಬಹುದು ಆದ್ರೆ ಸಾರ್ವಜನಿಕ ಆರೋಗ್ಯ ಸಮಸ್ಯೆ ಹೆಚ್ಚಾಗುವ ಅಪಾಯವಿದೆ. ಚೀನಾದಲ್ಲಿ HIV ಪ್ರಕರಣಗಳು ತೀವ್ರವಾಗಿ ಏರಿವೆ. ಹೆಚ್ಚಿನ ಹೊಸ ಸೋಂಕುಗಳು ಅಸುರಕ್ಷಿತ ಲೈಂಗಿಕತೆಗೆ ಸಂಬಂಧಿಸಿದ್ದು, ಕಾಂಡೋಮ್ ಮೇಲಿನ ತೆರಿಗೆ ಇದನ್ನು ಇನ್ನಷ್ಟು ಹೆಚ್ಚಿಸುವ ಅಪಾಯವಿದೆ.