Asianet Suvarna News Asianet Suvarna News

Coronavirus in Fruits: ಡ್ರ್ಯಾಗನ್‌ ಫ್ರೂಟ್‌ಗೂ ಕೊರೋನಾ: ಚೀನಾ ಮಾರ್ಕೆಟ್‌ ಬಂದ್‌!

ಮುಂದಿನ ತಿಂಗಳಿಂದ ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾ ಆಯೋಜನೆಗೆ ಚೀನಾ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಚೀನಾದಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾದ ಡ್ರ್ಯಾಗನ್‌ ಹಣ್ಣುಗಳಲ್ಲೂ ಕೊರೋನಾ ವೈರಸ್‌ ಅಂಶಗಳು ಪತ್ತೆಯಾಗಿದೆ.
 

China shuts down supermarkets after finding Coronavirus traces in a fruit gvd
Author
Bangalore, First Published Jan 8, 2022, 9:25 AM IST

ಬೀಜಿಂಗ್‌ (ಜ. 08): ಮುಂದಿನ ತಿಂಗಳಿಂದ ಚಳಿಗಾಲದ ಒಲಿಂಪಿಕ್ಸ್‌ ಕ್ರೀಡಾ ಆಯೋಜನೆಗೆ ಚೀನಾ ಸರ್ಕಾರ ಮುಂದಾಗಿರುವ ಬೆನ್ನಲ್ಲೇ, ಚೀನಾದಲ್ಲಿ ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳಲಾದ ಡ್ರ್ಯಾಗನ್‌ ಹಣ್ಣುಗಳಲ್ಲೂ (Dragon Fruit) ಕೊರೋನಾ ವೈರಸ್‌ (CoronaVirus) ಅಂಶಗಳು ಪತ್ತೆಯಾಗಿದೆ.

ಈ ಹಿನ್ನೆಲೆಯಲ್ಲಿ ಮಾರಾಟಕ್ಕಾಗಿ ಈ ಹಣ್ಣುಗಳನ್ನು ಖರೀದಿಸಿದ ಎಲ್ಲಾ ಸೂಪರ್‌ ಮಾರ್ಕೆಟ್‌ಗಳನ್ನು ಚೀನಾ ಸರ್ಕಾರ ಬಂದ್‌ ಮಾಡಿಸಿದೆ. ಅಲ್ಲದೆ ಜ.26ರವರೆಗೆ ವಿಯೆಟ್ನಾಂನಿಂದ ಹಣ್ಣುಗಳ ಆಮದಿಗೆ ನಿರ್ಬಂಧ ಹೇರಲಾಗಿದೆ. ಈ ಹಣ್ಣುಗಳನ್ನು ಈಗಾಗಲೇ ಖರೀದಿಸಿರುವವರು ಮನೆಯಲ್ಲೇ ಕ್ವಾರಂಟೈನ್‌ (Home Quarantine) ಆಗುವಂತೆ ಸೂಚಿಸಲಾಗಿದೆ.

ಝೆಜಿಯಾಂಗ್‌ ಮತ್ತು ಜಿಯಾಂಗ್‌ಕ್ಸಿ ಪ್ರಾಂತ್ಯ ಸೇರಿದಂತೆ 9 ನಗರಗಳಿಂದ ಸಂಗ್ರಹಿಸಲಾದ ಡ್ರ್ಯಾಗನ್‌ ಹಣ್ಣುಗಳಲ್ಲಿ ವೈರಸ್‌ ಪತ್ತೆಯಾಗಿರುವುದು ಖಚಿತವಾಗಿದೆ ಎಂದು ವರದಿಗಳು ತಿಳಿಸಿದೆ. ಅಲ್ಲದೆ ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಎಲ್ಲಾ ಆಹಾರ ಪದಾರ್ಥಗಳು ಮತ್ತು ಹಣ್ಣುಗಳನ್ನು ತೀವ್ರ ಪರೀಕ್ಷೆಗೊಳಪಡಿಸಲಾಗುತ್ತಿದೆ. ಜತೆಗೆ ಹಣ್ಣುಗಳಿಂದ ಕೊರೋನಾ ವ್ಯಾಪಿಸುವ ಬಗ್ಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ಆದಾಗ್ಯೂ, ಮುಂಜಾಗ್ರತಾ ಕ್ರಮ ಕೈಗೊಂಡಿದೆ.

Coronavirus : ನಾವಂದುಕೊಂಡಂತಿಲ್ಲ ಓಮಿಕ್ರೋನ್,  WHO ಕೊಟ್ಟ ಶಾಕಿಂಗ್ ಮಾಹಿತಿ

ಮುಂದಿನ ತಿಂಗಳಲ್ಲಿ ಚಳಿಗಾಲದ ಒಲಿಂಪಿಕ್ಸ್‌ ಆಯೋಜನೆಗೆ ನಿರ್ಧರಿಸಿರುವ ಚೀನಾ ಸರ್ಕಾರ, ಇದಕ್ಕಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಹೆಚ್ಚು ಸೋಂಕು ದಾಖಲಾಗುತ್ತಿರುವ ನಗರಗಳಲ್ಲಿ ಸೀಮಿತ ಲಾಕ್‌ಡೌನ್‌ ಹೇರಲಾಗಿದೆ. ಹೆನಾನ್‌ ಪ್ರಾಂತ್ಯದ ಯುಝೌ ನಗರದಲ್ಲಿ ಇತ್ತೀಚೆಗಷ್ಟೇ ಲಾಕ್‌ಡೌನ್‌ ತೆರವುಗೊಳಿಸಲಾಗಿದೆ. ಆದಾಗ್ಯೂ ಜನರು ಸಾರ್ವಜನಿಕ ವಾಹಗಳಾದ ಬಸ್ಸು, ಟ್ಯಾಕ್ಸಿ ಸೇವೆ, ಮಾಲ್‌ಗಳು ಸೇರಿದಂತೆ ಹೆಚ್ಚು ಜನ ಸೇರುವ ಇನ್ನಿತರ ಪ್ರದೇಶಗಳಿಗೆ ಭೇಟಿ ನೀಡದಂತೆ ಎಚ್ಚರಿಕೆ ನೀಡಲಾಗಿದೆ.

ಚೀನಾಗೆ ಶಾಕ್ ಕೊಟ್ಟ ಅಮೆರಿಕ: ಮುಂದಿನ ವರ್ಷ ಚೀನಾದ ರಾಜಧಾನಿ ಬೀಜಿಂಗ್‌ನಲ್ಲಿ (Beijing) ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ (Winter Olympics 2022) ತನ್ನ ಅಧಿಕಾರಿಗಳನ್ನು ಕಳುಹಿಸದಿರಲು ಅಮೆರಿಕ ನಿರ್ಧರಿಸಿದೆ. ಮಾನವ ಹಕ್ಕುಗಳ (Human Rights) ವಿರುದ್ಧ ಚೀನಾ ನಡೆಸುತ್ತಿರುವ ದೌರ್ಜನ್ಯದಿಂದಾಗಿ ಅಮೆರಿಕ ಈ ನಿರ್ಧಾರ ಕೈಗೊಂಡಿದೆ. ರಾಜತಾಂತ್ರಿಕ ಬಹಿಷ್ಕಾರಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಬೀಜಿಂಗ್ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಶ್ವೇತಭವನ (The White House)ಈ ಘೋಷಣೆ ಮಾಡಿದೆ. 

ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಕ್ಕೆ ಬೈಡೆನ್ (Joe Biden) ಆಡಳಿತವು ತನ್ನ ಯಾವುದೇ ಅಧಿಕಾರಿಗಳನ್ನು ಅಥವಾ ರಾಜತಾಂತ್ರಿಕ ನಿಯೋಗವನ್ನು ಕಳುಹಿಸುವುದಿಲ್ಲ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸವಿ ಹೇಳಿದ್ದಾರೆ. ಅಮೆರಿಕದ ಕ್ರೀಡಾಪಟುಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಾವು ಅವರೊಂದಿಗೆ ಇದ್ದೇವೆ ಎಂದೂ ತಿಳಿಸಿದ್ದಾರೆ.

Vaccination 150 Cr: ದೇಶದಲ್ಲಿ 150 ಕೋಟಿ ಡೋಸ್, ಇದು ಭಾರತದ ಸಾಧನೆ ಎಂದ ಪ್ರಧಾನಿ ಮೋದಿ

ಈ ಹಿಂದೆಯೂ ಬಹಿಷ್ಕಾರ: ಇದು ಒಲಿಂಪಿಕ್ ಕ್ರೀಡಾಕೂಟವನ್ನು ಬಹಿಷ್ಕರಿಸುವ (Boycott) ಮೊದಲ ಪ್ರಕರಣವಲ್ಲ ಎಂಬುವುದು ಉಲ್ಲೇಖನೀಯ. 1980 ರಲ್ಲಿ ಶೀತಲ ಸಮರದ ಸಮಯದಲ್ಲಿ ಅಮೆರಿಕ ಕೊನೆಯ ಬಾರಿಗೆ ಮಾಸ್ಕೋ ಒಲಿಂಪಿಕ್ಸ್‌ನ್ನು ಸಂಪೂರ್ಣವಾಗಿ ಬಹಿಷ್ಕರಿಸಿತು. 1956 (ಮೆಲ್ಬೋರ್ನ್), 1964 (ಟೋಕಿಯೊ), 1976 (ಮಾಂಟ್ರಿಯಲ್), 1980 (ಮಾಸ್ಕೋ), 1984 (ಲಾಸ್ ಏಂಜಲೀಸ್) ಮತ್ತು 1988 (ಸಿಯೋಲ್) ರಲ್ಲಿ ಯುದ್ಧ, ಆಕ್ರಮಣಶೀಲತೆ ಮತ್ತು ವರ್ಣಭೇದ ನೀತಿಯಂತಹ ಕಾರಣಗಳಿಂದ ವಿವಿಧ ದೇಶಗಳು ಒಲಿಂಪಿಕ್ ಕ್ರೀಡಾಕೂಟವನ್ನು ಬಹಿಷ್ಕರಿಸಿವೆ.

Follow Us:
Download App:
  • android
  • ios