ಮೂವರು ಕೊರೋನಾ ವೈರಸ್ ಸೋಂಕಿಗೆ ಬಲಿ ಚೀನಾದಲ್ಲಿ ಮತ್ತೆ ಕೋವಿಡ್ ಆತಂಕ ಹೆಚ್ಚಳ ಪ್ರತಿ ದಿನ 20 ಸಾವಿರಕ್ಕೂ ಹೆಚ್ಚು ಕೇಸ್ ಪತ್ತೆಯಾಗುತ್ತಿದೆ  

ಬೀಜಿಂಗ್‌(ಏ.19): ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ದೊಡ್ಡ ಪ್ರಮಾಣದಲ್ಲಿ ಒಮಿಕ್ರೋನ್‌ ಸೋಂಕು ಹರಡತೊಡಗಿದ ನಂತರ ಇದೇ ಮೊದಲ ಬಾರಿ ಮೂವರು ಸೋಂಕಿಗೆ ಬಲಿಯಾಗಿದ್ದಾರೆ. ಇದು ಈ ಅಲೆಯಲ್ಲಿ ಶಾಂಘೈನಲ್ಲಿ ಕೋವಿಡ್‌ನಿಂದ ಸಂಭವಿಸಿದ ಮೊದಲ ಸಾವಿನ ಪ್ರಕರಣವಾಗಿದೆ. 

ಎರಡು ವಾರದಿಂದ ಶಾಂಘೈನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಇತ್ತು. ಅದಕ್ಕೆ ಜನಾಕ್ರೋಶವೂ ವ್ಯಕ್ತವಾಗಿತ್ತು. ಈಗ ಲಾಕ್‌ಡೌನ್‌ ಸಡಿಲಿಸಲಾಗುತ್ತಿದ್ದು, ಲಸಿಕೆ ಪಡೆಯದ 89ರಿಂದ 91 ವರ್ಷದ ನಡುವಿನ ಮೂವರು ಹಿರಿಯ ನಾಗರಿಕರು ಕೊರೋನಾ ಸಂಬಂಧಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಸೋಮವಾರ ತಿಳಿಸಿದೆ. ಚೀನಾದಲ್ಲಿ ಭಾನುವಾರ 20639 ಹೊಸ ಕೋವಿಡ್‌ ಕೇಸು ಪತ್ತೆಯಾಗಿದ್ದು, ಈ ಪೈಕಿ 19831 ಕೇಸು ಕೇವಲ ಶಾಂಘೈ ಒಂದರಲ್ಲೇ ದಾಖಲಾಗಿದೆ.

Covid 19 cases ದೆಹಲಿ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ, ಎಚ್ಚರಿಕೆ ಸಂದೇಶ ರವಾನೆ!

ಶಾಂಘೈ ಲಾಕ್ಡೌನ್‌ನಿಂದ ಕಂಗೆಟ್ಟಜನರಿಂದ ಲೂಟಿ
ಚೀನಾದ ಪ್ರಮುಖ ವಾಣಿಜ್ಯ ನಗರಿ ಶಾಂಘೈಯಲ್ಲಿ ಕಠಿಣ ಕೋವಿಡ್‌ ಲಾಕ್‌ಡೌನ್‌ ಘೋಷಣೆಯಾಗಿ ಹಲವು ದಿನಗಳೇ ಕಳೆದಿವೆ. ಈ ವೇಳೆ ಸರ್ಕಾರ ಅಗತ್ಯ ವಸ್ತುಗಳಿಗೆ ಸೂಕ್ತ ವ್ಯವಸ್ಥೆ ಮಾಡಲು ವಿಫಲವಾಗಿದ್ದು, ಜನರು ಆಹಾರ, ನೀರು ಸೇರಿ ಅಗತ್ಯವಸ್ತುಗಳಿಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಹಸಿವಿನಿಂದ ಕಂಗೆಟ್ಟಜನತೆ ಕೋವಿಡ್‌ ನಿರ್ಬಂಧಗಳನ್ನು ಉಲ್ಲಂಘಿಸಿ ಮನೆಯಿಂದ ಹೊರಬಂದಿದ್ದು, ಆಹಾರ ಪದಾರ್ಥಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಲೂಟಿ ಮಾಡತೊಡಗಿದ್ದಾರೆ. ರಸ್ತೆಯಲ್ಲೇ ಭದ್ರತಾ ಪಡೆಗಳ ಜತೆ ಮಾರಾಮಾರಿ ನಡೆಯುತ್ತಿದೆ.

ಶಾಂಘೈನಲ್ಲಿ ಹಾಹಾಕಾರ, ಲೂಟಿ:
ಚೀನಾದ ಶಾಂಘೈನಲ್ಲಿ ನಿತ್ಯ ಸುಮಾರು 30 ಸಾವಿರ ಕೋವಿಡ್‌ ಕೇಸು ದಾಖಲಾಗುತ್ತಿವೆ. ಈ ಹಿನ್ನೆಲೆಯಲ್ಲಿ ‘ಶೂನ್ಯ ಸಹಿಷ್ಣುತೆ’ ನೀತಿಯನ್ನು ಚೀನಾ ಸರ್ಕಾರ ಘೋಷಿಸಿತ್ತು ಹಾಗೂ ಶಾಂಘೈ ನಗರದ ಸುಮಾರು 2.6 ಕೋಟಿ ಜನರನ್ನು ಕಡ್ಡಾಯವಾಗಿ ಮನೆಯಲ್ಲೇ ಕ್ವಾರೆಂಟೈನ್‌ ಆಗುವಂತೆ ಸೂಚಿಸಿ, ಮನೆ ಬಾಗಿಲಿಗೆ ಆಹಾರ ತಲುಪಿಸುವುದಾಗಿ ಹೇಳಿತ್ತು.

ಹೊರಗಡೆ ಸಿಗದ ಆಹಾರ : ಅನ್ನಕ್ಕಾಗಿ ಜೈಲು ಸೇರುತ್ತಿರುವ ಚೀನಿಯರು

ಶಾಂಘೈಯಲ್ಲಿ 2 ವಾರಗಳ ಕಠಿಣ ಲಾಕ್‌ಡೌನ್‌ ನಿರ್ಬಂಧಗಳನ್ನು ಹಿಂಪಡೆಯಲಾಗಿದ್ದು, ಕೆಲವು ಜನರಿಗೆ ಹೊರಗಡೆ ಓಡಾಡಲು ಅನುಮತಿ ನೀಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಆಹಾರವಿಲ್ಲದೇ ಕಂಗೆಟ್ಟು ಜನರೇ ನಿಯಮ ಉಲ್ಲಂಘಿಸಿ ಸೂಪರ್‌ ಮಾರ್ಕೆಟ್‌ಗಳನ್ನು ಲೂಟಿ ಮಾಡಿದ ಘಟನೆಗಳು ವರದಿಯಾದ ಬೆನ್ನಲ್ಲೇ ನಿಯಮಗಳನ್ನು ಕೊಂಚ ಸಡಲಿಸಲಾಗಿದೆ.

ಚೀನಾದ ಸರ್ಕಾರ ಎಷ್ಟುಜನರಿಗೆ ಹೊರಗಡೆ ಓಡಾಡುವುದಕ್ಕೆ ಅನುಮತಿ ನೀಡಿದೆ ಎಂಬುದು ಸ್ಪಷ್ಟಪಡಿಸಿಲ್ಲವಾದರೂ, ಸೂಪರ್‌ ಮಾರ್ಕೆಟ್‌ ಹಾಗೂ ಔಷಧಾಲಯಗಳನ್ನು ತೆರೆದಿಡಲು ಅನುಮತಿಯನ್ನು ನೀಡಿದೆ ಎಂದು ತಿಳಿದುಬಂದಿದೆ. ಕೋವಿಡ್‌ ಕೇಸುಗಳಲ್ಲಿ ಏರಿಕೆಯಾದ ಹಿನ್ನೆಲೆಯಲ್ಲಿ ಮಾಚ್‌ರ್‍ 28 ರಿಂದ 2.6 ಕೋಟಿ ಜನರು ವಾಸಿಸುವ ಶಾಂಘೈ ನಗರದಲ್ಲಿ ಚೀನಾ ಸರ್ಕಾರ ಲಾಕ್‌ಡೌನ್‌ ಘೋಷಿಸಿತ್ತು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮನೆಯಲ್ಲೇ ಇರಬೇಕು ಎಂದು ಸೂಚಿಸಲಾಗಿದ್ದು, ತಮ್ಮ ಸಾಕುಪ್ರಾಣಿಗಳನ್ನು ಹೊರಗಡೆ ವಿಹಾರಕ್ಕೆ ಕರೆದುಕೊಂಡು ಹೋಗದಂತೆ ನಿರ್ಬಂಧ ಹೇರಲಾಗಿತ್ತು.

ಸೋಂಕು ಏರಿಕೆ
ನಿರ್ಬಂಧ ಸಡಲಿಕೆ ನಡುವೆ ಚೀನಾದಲ್ಲಿ ಕೋವಿಡ್‌ ಪ್ರಕರಣದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಸೋಮವಾರ ಮಧ್ಯರಾತ್ರಿಯವರೆಗೆ 24,659 ದೈನಂದಿನ ಕೋವಿಡ್‌ ಕೇಸುಗಳು ವರದಿಯಾಗಿವೆ. ಅಲ್ಲದೇ 23,387 ಸೋಂಕಿತರಿಗೆ ಕೋವಿಡ್‌ ಪಾಸಿಟಿವ್‌ ವರದಿಯಾದರೂ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ. ಅದೇ ಶಾಂಘೈನಲ್ಲಿ 23,346 ಕೋವಿಡ್‌ ಕೇಸು ದಾಖಲಾಗಿದ್ದು, 998 ಸೋಂಕಿತರಿಗೆ ರೋಗಲಕ್ಷಣಗಳಿಲ್ಲ. ಕೋವಿಡ್‌ ಅಲೆ ಆರಂಭದಿಂದಲೂ ಶಾಂಘೈನಲ್ಲಿ ಒಟ್ಟು 2 ಲಕ್ಷ ಕೇಸುಗಳು ದಾಖಲಾಗಿದ್ದರೂ, ಯಾವುದೇ ಸಾವು ವರದಿಯಾಗಿಲ್ಲ ಎಂಬುದು ವಿಶೇಷವಾಗಿದೆ.