Asianet Suvarna News Asianet Suvarna News

Covid 19 cases ದೆಹಲಿ, ಮಹಾರಾಷ್ಟ್ರ ಸೇರಿ 5 ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ, ಎಚ್ಚರಿಕೆ ಸಂದೇಶ ರವಾನೆ!

  • ಐದು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಳ
  • ಹೆಚ್ಚಾಯ್ತು BA.1 ಹಾಗೂ BA.2 ವೇರಿಯೆಂಟ್ ಆತಂಕ
  • ಯಾವ ರಾಜ್ಯಗಳಲ್ಲಿ ಕೊರೋನಾ ಹೆಚ್ಚಳ
Delhi to Maharastra 5 states reports surge in COVID 19 cases registered a spike in daily cases ckm
Author
Bengaluru, First Published Apr 15, 2022, 8:18 PM IST

ನವದೆಹಲಿ(ಏ.15): ಚೀನಾ, ಯುರೋಪ್ ಸೇರಿದಂತೆ ಕೆಲ ರಾಷ್ಟ್ರಗಳಲ್ಲಿ ಒಮಿಕ್ರಾನ್ ವೇರಿಯೆಂಟ್ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಇದರ ನಡುವೆ ಭಾರತದಲ್ಲಿ ಇಳಿಮುಖವಾಗಿದ್ದ ಕೊರೋನಾ ಪ್ರಕರಣ ಇದೀಗ ಕೆಲ ರಾಜ್ಯಗಳಲ್ಲಿ ಏರಿಕೆ ಕಂಡಿದೆ. ದೆಹಲಿ, ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ ಐದು ರಾಜ್ಯಗಳಲ್ಲಿ ಕೊರೋನಾ ಪ್ರಕರಣ ಹೆಚ್ಚಳವಾಗಿದೆ.

ದೆಹಲಿ:
ದೆಹಲಿಯಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ ಶೇಕಡಾ 0.5 ರಿಂದ 2.7ಕ್ಕೆ ಏರಿಕೆಯಾಗಿದೆ. ಇದು ಕೇವಲ ಒಂದು ವಾರದಲ್ಲಿ ಆಗಿರುವ ಏರಿಕೆಯಾಗಿದೆ. ಸೋಮವಾರ 137 ಪ್ರಕರಣ ಪತ್ತೆಯಾಗಿತ್ತು, ಬುಧವಾರ 299 ಕೇಸ್ ಹಾಗೂ ಇದೀಗ 325 ಪ್ರಕರಣ ಪತ್ತೆಯಾಗಿದೆ.

ಹರ್ಯಾಣ
ಕಳೆದ 14 ದಿನಗಳಲ್ಲಿ 1,200 ಪ್ರಕರಣ ಹರ್ಯಾಣದಲ್ಲಿ ಪತ್ತೆಯಾಗಿದೆ. ಇದರಲ್ಲಿ 1,000 ಪ್ರಕರಣ ಗುರುಗ್ರಾಂ ಜಿಲ್ಲೆಯಲ್ಲಿ ಪತ್ತೆಯಾಗಿದೆ. ಸದ್ಯ ಹರ್ಯಾಣದಲ್ಲಿನ ಕೊರೋನಾ ಪಾಸಿಟಿವಿಟಿ ರೇಟ್ 2.72 ಶೇಕಡಾ ಹೆಚ್ಚಳವಾಗಿದೆ. ಫೆಬ್ರವರಿ 28 ರಂದು 0.41 ಪಾಸಿಟಿವಿಟ್ ರೇಟ್‌ನಿಂದ ಗಣನೀಯ ಹೆಚ್ಚಳವಾಗಿದೆ.

IPL 2022 ಟೂರ್ನಿಗೆ ಅಂಟಿಕೊಂಡ ಕೊರೋನಾ, ಡೆಲ್ಲಿ ತಂಡದಲ್ಲಿ ಮೊದಲ ಕೇಸ್ ಪತ್ತೆ

ಮಿಜೋರಾಮ್
ಏಪ್ರಿಲ್ 14 ರಂದು ಮಿಜೋರಾಮ್‌ನಲ್ಲಿ 78 ಕೊರೋನಾ ಪ್ರಕರಣ ಪತ್ತೆಯಾಗಿದೆ. ದಿನದಿಂದ ದಿನಕ್ಕೆ ಮಿಜೋರಾಮ್‌ನಲ್ಲಿ ಪ್ರಕರಣ ಹೆ್ಚಾಗುತ್ತಿದೆ. ಮಿಜೋರಾಮ್ ಕೋವಿಡ್ ಒಟ್ಟು ಪ್ರಕರಣ 2,25,901ಕ್ಕೆ ಏರಿಕೆಯಾಗಿದೆ.

ಗುಜರಾತ್
ಗುಜರಾತ್‌ನಲ್ಲಿ ಏಪ್ರಿಲ್ 14 ರಂದ ಹೊಸ 11 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಒಟ್ಟು ಪ್ರಕರಣ ಸಂಖ್ಯೆ 12,24,118ಕ್ಕೆ ಏರಿಕೆಯಾಗಿದೆ. ಇದರಲ್ಲಿ 12,13,023 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದಿಲ್ಲಿ ರಾಜಧಾನಿ ವಲಯದಲ್ಲ ಕೋವಿಡ್‌ ಕೇಸುಗಳಲ್ಲಿ ಹೆಚ್ಚಳ, ದೈನಂದಿನ ಕೇಸುಗಳು ಶೇ.50ರಷ್ಟು ಏರಿಕೆ!

ಮಹಾರಾಷ್ಟ್ರ
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣ ಸಂಖ್ಯೆ ಏರಿಕೆಯಾಗಿದೆ. ಹೆಚ್ಚಿನ ಪ್ರಕರಣಗಳು ಮುಂಬೈಲ್ಲೇ ದಾಖಲಾಗಿದೆ.

ಈ ತಿಂಗಳಲ್ಲಿ ಕೋವಿಡ್‌ಗೆ ಕೇವಲ ಮೂರೇ ಸಾವು 
ರಾಜ್ಯದಲ್ಲಿ ಬುಧವಾರ 55 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಸತತ ಐದು ದಿನಗಳಿಂದ ಕೋವಿಡ್‌ ಸಾವು ವರದಿ ಆಗಿಲ್ಲ. ಈ ತಿಂಗಳಲ್ಲಿ ಮೂರು ಸಾವು ದಾಖಲಾಗಿದೆ. ಇದೇ ವೇಳೆ 10,423 ಮಂದಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದು ಶೇ. 0.52 ಪಾಸಿಟಿವಿಟಿ ದರ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 46, ಧಾರವಾಡ 4, ಮೈಸೂರು 2, ಚಿತ್ರದುರ್ಗ, ದಕ್ಷಿಣ ಕನ್ನಡ, ಬೆಂಗಳೂರು ಗ್ರಾಮಾಂತರ ತಲಾ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ. ರಾಜ್ಯದಲ್ಲಿ 62 ಮಂದಿ ಚೇತರಿಸಿಕೊಂಡಿದ್ದಾರೆ. ಸದ್ಯ 1,438 ಸಕ್ರಿಯ ಪ್ರಕರಣಗಳಿವೆ. ರಾಜ್ಯದ 14 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣಗಳಿಲ್ಲ. ಬೆಂಗಳೂರು ನಗರದಲ್ಲಿ ಅತಿ ಹೆಚ್ಚು 1,355 ಸೋಂಕಿತರಿದ್ದಾರೆ. ಈವರೆಗೆ ಒಟ್ಟು 39.46 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.04 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. ಈವರೆಗೆ ಒಟ್ಟು 40,057 ಮಂದಿ ಸಾವನ್ನಪ್ಪಿದ್ದಾರೆ.

ದ.ಕ.: ಒಂದು ಕೊರೋನಾ ಕೇಸ್‌
ಕೆಲವು ದಿನಗಳ ಬಳಿಕ ದ.ಕ.ಜಿಲ್ಲೆಯಲ್ಲಿ ಬುಧವಾರ ಒಂದು ಕೊರೋನಾ ಕೇಸ್‌ ಪತ್ತೆಯಾಗಿದೆ. ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಯಾವುದೇ ಸಾವು ಸಂಭವಿಸಿಲ್ಲ. ಪ್ರಸಕ್ತ ಐದು ಸಕ್ರಿಯ ಪ್ರಕರಣ ಇದೆ. ಜಿಲ್ಲೆಯ ಕೋವಿಡ್‌ ಪಾಸಿಟಿವಿಟಿ ರೇಟ್‌ ಶೇ.0.24ರಲ್ಲಿದೆ. ಇದುವರೆಗೆ ಒಟ್ಟು ಪಾಸಿಟಿವ್‌ ಕೇಸ್‌ಗಳ ಸಂಖ್ಯೆ 1,35,496ಕ್ಕೆ ಏರಿಕೆಯಾಗಿದ್ದು, 1,33,642 ಮಂದಿ ಡಿಸ್ಚಾಜ್‌ರ್‍ ಆಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಹೆಲ್ತ್‌ ಬುಲೆಟಿನ್‌ ತಿಳಿಸಿದೆ.

Follow Us:
Download App:
  • android
  • ios