ನಮ್ಮ ಮತ್ತೊಂದು ಬಲೂನ್‌ ಆಕಸ್ಮಿಕವಾಗಿ ದಾರಿ ತಪ್ಪಿ ಲ್ಯಾಟಿನ್‌ ಅಮೆರಿಕಕ್ಕೆ ಹೋಗಿದೆ: ಚೀನಾ

ಬಲೂನಿನ ಗುಣಲಕ್ಷಣಗಳನ್ನು ಹೋಲುವ ವಸ್ತುವನ್ನು ಪತ್ತೆಹಚ್ಚಲಾಗಿದೆ ಮತ್ತು ಅದು ರಾಷ್ಟ್ರೀಯ ವಾಯುಪ್ರದೇಶದಿಂದ ಹೊರಡುವವರೆಗೂ ಮೇಲ್ವಿಚಾರಣೆ ಮಾಡಲ್ಪಟ್ಟಿದೆ ಎಂದು ಕೊಲಂಬಿಯಾದ ವಾಯುಪಡೆ ವರದಿ ಮಾಡಿತ್ತು.

china says another balloon accidentally strayed into latin america ash

ಬೀಜಿಂಗ್ (ಫೆಬ್ರವರಿ 6, 2023) : ಇತ್ತೀಚೆಗಷ್ಟೇ ಅಮೆರಿಕದಲ್ಲಿ 3 ಬಸ್‌ ಗಾತ್ರದ ಚೀನಾದ ಶಂಕಿತ ಗೂಢಚಾರ ಬಲೂನ್‌ ಅನ್ನು ಹೊಡೆದುರುಳಿಸಲಾಗಿದೆ. ಈ ಬೆನ್ನಲ್ಲೇ, ಲ್ಯಾಟಿನ್ ಅಮೆರಿಕದಲ್ಲಿ ಹಾರುತ್ತಿರುವ ಬಲೂನ್‌ ಸಹ ನಮ್ಮದೇ ಎಂದು ಚೀನಾ ಸೋಮವಾರ ಒಪ್ಪಿಕೊಂಡಿದೆ. ವಾಷಿಂಗ್ಟನ್ ಮತ್ತು ಬೊಗೋಟಾ ಮೊದಲು ಈ ಬಲೂನ್‌ ಅನ್ನು ಗುರುತಿಸಿತ್ತು. ಚೀನಾದ ಎರಡನೇ ಶಂಕಿತ ಬಲೂನ್ ಲ್ಯಾಟಿನ್ ಅಮೆರಿಕದಾದ್ಯಂತ ಕಾಣಿಸಿಕೊಂಡಿದೆ ಎಂದು ಪೆಂಟಗನ್ ಶುಕ್ರವಾರ ಹೇಳಿತ್ತು. 

ಬಲೂನಿನ (Balloon) ಗುಣಲಕ್ಷಣಗಳನ್ನು ಹೋಲುವ ವಸ್ತುವನ್ನು ಪತ್ತೆಹಚ್ಚಲಾಗಿದೆ ಮತ್ತು ಅದು ರಾಷ್ಟ್ರೀಯ ವಾಯುಪ್ರದೇಶದಿಂದ ಹೊರಡುವವರೆಗೂ ಮೇಲ್ವಿಚಾರಣೆ ಮಾಡಲ್ಪಟ್ಟಿದೆ ಎಂದು ಕೊಲಂಬಿಯಾದ ವಾಯುಪಡೆ (Columbia Air Space) ಸಹ ವರದಿ ಮಾಡಿದೆ. ವಸ್ತುವಿನ ಮೂಲವನ್ನು ಸ್ಥಾಪಿಸಲು ಇತರ ದೇಶಗಳು ಮತ್ತು ಸಂಸ್ಥೆಗಳೊಂದಿಗೆ ಸಮನ್ವಯದಲ್ಲಿ ತನಿಖೆಗಳನ್ನು ನಡೆಸುತ್ತಿದೆ ಎಂದೂ ವಾಯುಪಡೆ ಹೇಳಿತ್ತು.

ಇದನ್ನು ಓದಿ: ಸ್ಪೈ ಬಲೂನ್ ಹೊಡೆದುರುಳಿಸಿದ ಅಮೆರಿಕ: ದೊಡ್ಡಣ್ಣನಿಗೆ ಎಚ್ಚರಿಕೆ ಕೊಟ್ಟ ಚೀನಾ

ಬಳಿಕ, ಬೀಜಿಂಗ್‌ನ ವಿದೇಶಾಂಗ ಸಚಿವಾಲಯ (Beijing Foreign Ministry) ಸೋಮವಾರ ಈ ವಸ್ತುವು "ಚೀನಾದಿಂದ (China) ಬಂದಿದೆ" ಮತ್ತು ಇದು ನಾಗರಿಕ ಸ್ವಭಾವ ಮತ್ತು ವಿಮಾನ ಪರೀಕ್ಷೆಗಳಿಗೆ ಬಳಸಲಾಗಿದೆ ಎಂದು ಹೇಳಿದೆ. ಅಲ್ಲದೆ, ಅದರ ಕುಶಲತೆಯು ಸೀಮಿತವಾಗಿರುವುದರ ಜೊತೆಗೆ ಹವಾಮಾನ ಶಕ್ತಿಗಳಿಂದ ಪ್ರಭಾವಿತವಾಗಿದೆ, ಈ ಹಿನ್ನೆಲೆ, ವಾಯುನೌಕೆಯು ಅದರ ನಿರೀಕ್ಷಿತ ಕೋರ್ಸ್‌ನಿಂದ ಬಹಳವಾಗಿ ವಿಚಲಿತವಾಯಿತು ಮತ್ತು ಆಕಸ್ಮಿಕವಾಗಿ ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ವಾಯುಪ್ರದೇಶವನ್ನು ಪ್ರವೇಶಿಸಿತು ಎಂದೂ ವಕ್ತಾರ ಮಾವೋ ನಿಂಗ್ ಪತ್ರಿಕಾಗೋಷ್ಠಿಯಲ್ಲಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಅಲ್ಲದೆ, ಚೀನಾ ಜವಾಬ್ದಾರಿಯುತ ದೇಶವಾಗಿದೆ ಮತ್ತು ಯಾವಾಗಲೂ ಅಂತಾರಾಷ್ಟ್ರೀಯ ಕಾನೂನಿಗೆ ಕಟ್ಟುನಿಟ್ಟಾಗಿ ಬದ್ಧವಾಗಿದೆ ಎಂದೂ ಅವರು ಹೇಳಿದರು. ನಾವು ಸಂಬಂಧಿತ ಪಕ್ಷಗಳೊಂದಿಗೆ ಸಂವಹನ ನಡೆಸಿದ್ದೇವೆ ಮತ್ತು ಸೂಕ್ತವಾಗಿ ನಿರ್ವಹಿಸುತ್ತಿದ್ದೇವೆ ಹಾಗೂ ಯಾವುದೇ ದೇಶಕ್ಕೆ ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದೂ ವಕ್ತಾರ ಮಾವೋ ನಿಂಗ್ ತಿಳಿಸಿದರು. 

ಇದನ್ನೂ ಓದಿ: ಅಮೆರಿಕ ಮಾತ್ರವಲ್ಲ, ಕೆನಡಾ, ಲ್ಯಾಟಿನ್‌ ಅಮೆರಿಕದಲ್ಲೂ ಚೀನಾದ ಗುಪ್ತಚರ ಬಲೂನ್‌ ಪ್ರತ್ಯಕ್ಷ!

ಈ ಮಧ್ಯೆ, ಅಮೆರಿಕದಲ್ಲಿ ಬಲೂನ್‌ ಪತ್ತೆಯಾದ ಬೆನ್ನಲ್ಲೇ ಭಾನುವಾರ ಬೀಜಿಂಗ್‌ಗೆ ಆಗಮಿಸಬೇಕಿದ್ದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್, ತಮ್ಮ ಯೋಜಿತ ಚೀನಾ ಭೇಟಿಯನ್ನು ರದ್ದುಗೊಳಿಸಿದ್ದಾರೆ. ಇನ್ನು, ಬಲೂನ್ ಅನ್ನು ಹೊಡೆದುರುಳಿಸಿದ ಬಗ್ಗೆ ಚೀನಾ ಭಾನುವಾರ ಕೋಪವನ್ನು ವ್ಯಕ್ತಪಡಿಸಿತು, ಇದು ಮಾನವರಹಿತ ಹವಾಮಾನ ಕಣ್ಗಾವಲು ವಿಮಾನವಾಗಿದ್ದು ಅದು ದಾರಿ ತಪ್ಪಿ ಬಂದಿದೆ ಎಂದು ಸಮರ್ಥಿಸಿಕೊಂಡಿತ್ತು. 

ಬಲೂನ್‌ ಹೊಡೆದುರುಳಿಸಿದ್ದು ಏಕೆ..?
ಬೇಹುಗಾರಿಕಾ ಉದ್ದೇಶದಿಂದ ಚೀನಾ ಕಳುಹಿಸಿತ್ತು ಎನ್ನಲಾದ, 3 ಬಸ್‌ ಗಾತ್ರದ ಬಲೂನ್‌ವೊಂದನ್ನು ಅಮೆರಿಕ ಹೊಡೆದುರುಳಿಸಿದ್ದು, ಆ ಬಲೂನ್‌ನಲ್ಲಿ ಇರುವ ಉಪಕರಣಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನ ಆರಂಭಿಸಿದೆ. ಅಮೆರಿಕದ ಈ ನಡೆಗೆ ಚೀನಾದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಮೆರಿಕ ಬಳಿ ಹಾರಾಡಿದ್ದು ಬೇಹುಗಾರಿಕಾ ಬಲೂನ್‌ ಅಲ್ಲ, ಹವಾಮಾನ ಮಾಹಿತಿ ಸಂಗ್ರಹಿಸುವ ಬಲೂನ್‌ ಅದು. ಅಮೆರಿಕದ ವರ್ತನೆಗೆ ಪ್ರತಿಯಾಗಿ ತಕ್ಕ ತಿರುಗೇಟು ನೀಡುವ ಹಕ್ಕನ್ನು ಕಾದಿರಿಸಿಕೊಂಡಿದ್ದೇವೆ ಎಂದು ಡ್ರ್ಯಾಗನ್‌ ರಾಷ್ಟ್ರ ಗುಡುಗಿದೆ. ಈ ಬೆಳವಣಿಗೆಯಿಂದ ಈಗಾಗಲೇ ಹಳಸಿರುವ ಅಮೆರಿಕ- ಚೀನಾ ಸಂಬಂಧ ಮತ್ತಷ್ಟು ಹದಗೆಟ್ಟಂತಾಗಿದೆ.

ಚೀನಾದ ಬಲೂನ್‌ವೊಂದು ಹಾರುತ್ತಾ ಬರುತ್ತಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು. ಹೀಗಾಗಿ ಹೊಡೆದುರುಳಿಸಲು ನಾನೇ ಹೇಳಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರು ತಿಳಿಸಿದ್ದರು. ಬಳಿಕ ಅಮೆರಿಕ ಅಧ್ಯಕ್ಷರ ಸೂಚನೆ ಮೇರೆಗೆ ವರ್ಜೀನಿಯಾದ ಲಾಂಗ್ಲಿ ವಾಯುಪಡೆಯಿಂದ ಯುದ್ಧ ವಿಮಾನ ಬಳಸಿ ಒಂದು ಕ್ಷಿಪಣಿ ಹಾರಿಸಲಾಯಿತು. ಆ ಕ್ಷಿಪಣಿ ಬಲೂನ್‌ ಅನ್ನು ನಾಶಪಡಿಸಿತು. 

ಅಮೆರಿಕದ ದಕ್ಷಿಣ ಕರೋಲಿನಾ ಕರಾವಳಿಯಿಂದ 9.65 ಕಿ.ಮೀ. ದೂರದಲ್ಲಿ ಬಲೂನ್‌ ಪತನವಾಯಿತು. ಇದೀಗ ಬಲೂನ್‌ನಲ್ಲಿದ್ದ ಉಪಕರಣಗಳನ್ನು ವಶಪಡಿಸಿಕೊಳ್ಳಲು ಅಮೆರಿಕ ತಂಡಗಳನ್ನು ರಚಿಸಿದೆ. ಯಾವ ಉಪಕರಣಗಳು ಆ ಬಲೂನ್‌ನಲ್ಲಿದ್ದವು ಎಂದು ಗೊತ್ತಾದರೆ ಅದರ ನೈಜ ಉದ್ದೇಶ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.

Latest Videos
Follow Us:
Download App:
  • android
  • ios