Asianet Suvarna News Asianet Suvarna News

Covid cases ಚೀನಾದಲ್ಲಿ ಕೋವಿಡ್‌ಗೆ ಇಬ್ಬರು ಬಲಿ: 1 ವರ್ಷದಲ್ಲೇ ಮೊದಲು!

- 2021ರ ಜನವರಿ ಬಳಿಕ ಒಂದೂ ಸಾವು ಸಂಭವಿಸಿರಲಿಲ್ಲ
- 2157 ಕೋವಿಡ್‌ ಕೇಸು, ಮೊನ್ನೆಗಿಂತ ಕೊಂಚ ಕಮ್ಮಿ
- ದ. ಕೊರಿಯಾದಲ್ಲಿ 3.81 ಲಕ್ಷ ಕೇಸು, 319 ಸಾವು

China Reports First 2 Covid Deaths triggered highest case count since pandemic onset ckm
Author
Bengaluru, First Published Mar 20, 2022, 4:05 AM IST

ಬೀಜಿಂಗ್‌(ಮಾ.20): ಚೀನಾ ಹಾಗೂ ದಕ್ಷಿಣ ಕೊರಿಯಾದಲ್ಲಿ ಕೊರೋನಾ ಆರ್ಭಟ ಮುಂದುವರೆದಿದೆ. ಚೀನಾದಲ್ಲಿ 2021 ಜನವರಿ ನಂತರ ಮೊದಲ ಬಾರಿ ಇಬ್ಬರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದಾರೆ.‘ದೇಶದಲ್ಲಿ ಸುಮಾರು 1 ವರ್ಷಕ್ಕೂ ಅಧಿಕ ಕಾಲ ಯಾವುದೇ ಸಾವು ಸಂಭವಿಸಿರಲಿಲ್ಲ. ಆದರೆ ಶನಿವಾರ ಒಂದೇ ದಿನ 2 ಸಾವುಗಳು ವರದಿಯಾಗಿವೆ. ಎರಡೂ ಸಾವುಗಳು ಈಶಾನ್ಯ ಚೀನಾದ ಜಿಲಿನ್‌ ಪ್ರಾಂತ್ಯದಲ್ಲಿ ಸಂಭವಿಸಿವೆ. ಮೃತಪಟ್ಟಇಬ್ಬರೂ ವ್ಯಕ್ತಿಗಳು ವೃದ್ಧರಾಗಿದ್ದು, ಅವರಲ್ಲಿ ಒಬ್ಬರು ಕೋವಿಡ್‌ ಲಸಿಕೆ ತೆಗೆದುಕೊಂಡಿರಲಿಲ್ಲ’ ಎಂದು ಚೀನಾದ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದರೊಂದಿಗೆ ಈವರೆಗೆ ದೇಶದಲ್ಲಿ ಒಟ್ಟು 4,638 ಜನರು ಕೋವಿಡ್‌ ಸೋಂಕಿಗೆ ಬಲಿಯಾದಂತಾಗಿದೆ.

ಚೀನಾದಲ್ಲಿ ಶನಿವಾರ 2,157 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ಇಳಿದಿದೆ. ಶುಕ್ರವಾರ 2388 ಕೇಸುಗಳು ದಾಖಲಾಗಿದ್ದವು. ಮಾಚ್‌ರ್‍ ಆರಂಭದಿಂದ ಈವರೆಗೆ ದೇಶದಲ್ಲಿ ಒಟ್ಟು 29,000 ಸಕ್ರಿಯ ಸೋಂಕಿತರು ಇದ್ದಾರೆ. ಬಹುತೇಕ ಸೋಂಕುಗಳು ಜಿಲಿನ್‌ ಪ್ರಾಂತ್ಯದಲ್ಲೇ ಕಂಡು ಬಂದಿದ್ದರಿಂದ ಇಲ್ಲಿ ಪ್ರಯಾಣದ ಮೇಲೆ ನಿರ್ಬಂಧ ಹೇರಲಾಗಿದೆ. 2019ರಲ್ಲಿ ಚೀನಾದ ವುಹಾನ್‌ನಲ್ಲಿ ಕೊರೋನಾ ಮಹಾಮಾರಿ ಆರಂಭವಾಗಿತ್ತು.

Covid Cases ಮಹಾರಾಷ್ಟ್ರಕ್ಕೆ ಕೊರೋನಾ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ, ಮತ್ತೆ ಆತಂಕ!

ಕೊರಿಯಾದಲ್ಲಿ 3.81 ಲಕ್ಷ ಕೇಸು:
ಇದೇ ವೇಳೆ, ದ. ಕೊರಿಯಾದಲ್ಲಿ ಶನಿವಾರ 3.81 ಲಕ್ಷ ಹೊಸ ಪ್ರಕರಣಗಳು ದಾಖಲಾಗಿವೆ ಹಾಗೂ 319 ಸೋಂಕಿತರು ಬಲಿಯಾಗಿದ್ದಾರೆ. ಹೊಸ ಪ್ರಕರಣಗಳ ಸಂಖ್ಯೆ ಶುಕ್ರವಾರಕ್ಕೆ ಹೋಲಿಸಿದರೆ ಕೊಂಚ ತಗ್ಗಿದೆ. ದೇಶದಲ್ಲಿ ಶುಕ್ರವಾರ 4 ಲಕ್ಷ ಹಾಗೂ ಗುರುವಾರ 6 ಲಕ್ಷ ಕೋವಿಡ್‌ ಕೇಸುಗಳು ದಾಖಲಾಗಿದ್ದವು.

ಕೋವಿಡ್‌ ಅಂತ್ಯ ಇನ್ನೂ ದೂರವಿದೆ: ಡಬ್ಲ್ಯುಎಚ್‌ಒ 
ಕೋವಿಡ್‌ ಸಾಂಕ್ರಾಮಿಕದ ಅಂತ್ಯ ಇನ್ನೂ ದೂರದಲ್ಲಿದೆ. ನಾವಿನ್ನೂ ಈ ಪಿಡುಗಿನ ನಡು ಭಾಗದಲ್ಲಿದ್ದೇವೆ. ಹೀಗಾಗಿ ಎಲ್ಲಾ ದೇಶಗಳು ಎಚ್ಚರ ವಹಿಸುವುದು ಅಗತ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮತ್ತೊಮ್ಮೆ ಎಚ್ಚರಿಕೆ ನೀಡಿದೆ.ಈ ಕುರಿತು ಹೇಳಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ವಕ್ತಾರೆ ಮಾರ್ಗರೆಟ್‌ ಹ್ಯಾರಿಸ್‌, ‘ನಾವಿನ್ನೂ ಕೋವಿಡ್‌ ಸಾಂಕ್ರಾಮಿಕದ ಅಂತ್ಯದಿಂದ ಬಹು ದೂರದಲ್ಲಿದ್ದೇವೆ. ಕಳೆದ ವಾರ ವಿಶ್ವದಾದ್ಯಂತ ಹೊಸ ಪ್ರಕರಣಗಳಲ್ಲಿ ಏರಿಕೆಯಾಗಿರುವುದೇ ಇದಕ್ಕೆ ಸಾಕ್ಷಿ’ ಎಂದು ಎಚ್ಚರಿಕೆ ನೀಡಿದ್ದಾರೆ.

Coroanavirus: ಯುರೋಪ್‌ನಲ್ಲಿ ಒಮಿಕ್ರೋನ್‌ 2ನೇ ಅಲೆ, ರಾಜ್ಯಗಳಿಗೆ ಕೇಂದ್ರದಿಂದ ಮಹತ್ವದ ಸೂಚನೆ

ಸತತ ಒಂದು ತಿಂಗಳ ಇಳಿಕೆ ಬಳಿಕ ಕಳೆದ ವಾರ ವಿಶ್ವದಲ್ಲಿ ಹೊಸ ಪ್ರಕರಣಗಳಲ್ಲಿ ದಿಢೀರ್‌ ಏರಿಕೆ ಕಂಡುಬಂದಿತ್ತು. ಭಾರೀ ವೇಗದಲ್ಲಿ ಹರಡುವ ಸಾಮರ್ಥ್ಯ ಹೊಂದಿರುವ ಕೊರೋನಾದ ರೂಪಾಂತರಿ ತಳಿ ಒಮಿಕ್ರೋನ್‌ ವೈರಸ್‌ ಹಾವಳಿ, ಒಮಿಕ್ರೋನ್‌ನ ಉಪತಳಿ ಬಿಎ.2 ಪ್ರಮಾಣ ಹೆಚ್ಚಳ, ಸೋಂಕು ಇಳಿಕೆಯಾದ ಕಾರಣ ಹಲವು ದೇಶಗಳಲ್ಲಿ ಸಾರ್ವಜನಿಕ ನಿರ್ಬಂಧ ಕ್ರಮಗಳನ್ನು ಹಿಂದಕ್ಕೆ ಪಡೆದಿದ್ದು, ಕೆಲವು ದೇಶಗಳಲ್ಲಿ ಲಸಿಕೆ ನೀಡಿಕೆ ಪ್ರಮಾನ ಕಡಿಮೆ ಇರುವುದು ಸೋಂಕು ಏರಿಕೆಗೆ ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.

ಹಿಂದಿನ ವಾರಕ್ಕೆ ಹೋಲಿಸಿದರೆ ಮಾ.7-13ರ ಅವಧಿಯಲ್ಲಿ ಹೊಸ ಕೇಸಿನಲ್ಲಿ ಶೆ.8ರಷ್ಟುಏರಿಕೆಯಾಗಿತ್ತು. ಈ ಅವಧಿಯಲ್ಲಿ 1.1 ಕೋಟಿ ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು 43000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಅದರಲ್ಲೂ ಚೀನಾ, ದಕ್ಷಿಣ ಕೊರಿಯಾ, ಜರ್ಮನಿ, ರಷ್ಯಾ, ವಿಯೆಟ್ನಾಂ ಸೇರಿದಂತೆ ಹಲವು ದೇಶಗಳಲ್ಲಿ ಪ್ರಕರಣಗಳು ಭಾರೀ ಸಂಖ್ಯೆಯಲ್ಲಿ ಏರಿಕೆಯಾಗಿವೆ.

ವಿಶ್ವ ಆರೋಗ್ಯ ಸಂಸ್ಥೆಯ ಈ ಹಿಂದಿನ ಲೆಕ್ಕಾಚಾರದ ಅನ್ವಯ, 2022ರ ಅಂತ್ಯಕ್ಕೆ ಕೊರೋನಾ ಹಾವಳಿ ಕಡೆಯಾಗಬೇಕಿತ್ತು. ಆದರೆ ಜಾಗತಿಕ ಮಟ್ಟದಲ್ಲಿ ಒಟ್ಟಾರೆ ಲಸಿಕೆ ವಿತರಣೆ ಶೇ.70ರಷ್ಟಿದ್ದರೆ ಇದು ಸಾಧ್ಯ ಎಂದಿತ್ತು. ಆದರೆ ಇನ್ನೂ ಹಲವು ದೇಶಗಳಲ್ಲಿ ಕೋವಿಡ್‌ ಲಸಿಕೆ ವಿತರಣೆ ಶೇ.50ರಷ್ಟನ್ನೂ ದಾಟದೇ ಇರುವುದು ಸಾಂಕ್ರಾಮಿಕ ಅಂತ್ಯಕ್ಕೆ ಅಡ್ಡಿಯಾಗಿದೆ.ಇದುವರೆಗೂ ವಿಶ್ವದಲ್ಲಿ 47 ಕೋಟಿ ಜನರಿಗೆ ಸೋಂಕು ತಗುಲಿದ್ದು, 60 ಲಕ್ಷ ಜನರು ಸಾವನ್ನಪ್ಪಿದ್ದಾರೆ. ಜೊತೆಗೆ 1092 ಕೋಟಿ ಡೋಸ್‌ ಲಸಿಕೆ ವಿತರಣೆಯಾಗಿದೆ.

Follow Us:
Download App:
  • android
  • ios