ನವದೆಹಲಿ(ಜು.06): ಭಾರತದ ಮೇಲೆ ಕಾಲು ಕೆರೆದು ಸರಿಯಾಗಿ ಒದೆ ತಿಂದಿರುವ ಚೀನಾ ಇದೀಗ ಮತ್ತೆ ಹಿಂಬಾಗಿಲ ಮೂಲಕ ಭಾರತವನ್ನು ಕೆಣಕಲು ಮುಂದಾಗಿದೆ. ಗಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆ ನೀಡಿದ ತಿರುಗೇಟಿಗೆ ಚೀನಾ ತಣ್ಣಗಾಗಿದೆ. ಇತ್ತ ಕೇಂದ್ರ ಸರ್ಕಾರ ಆ್ಯಪ್ ಬ್ಯಾನ್ ಮಾಡಿ ಹೊಡೆತ ನೀಡಿದರೆ, ನಾಗರಿಕರು ಚೀನಾ ವಸ್ತು ಬಹಿಷ್ಕರಿಸಿ ಹೊಡೆತ ನೀಡಿದ್ದಾರೆ. ಒಂದರ ಮೇಲೊಂದರಂತೆ ಆಘಾತ ಅನುಭವಿಸಿದ ಚೀನಾ, ಇದೀಗ ಪಾಕಿಸ್ತಾನದ ಮೂಲಕ ಭಾರತವನ್ನು ಕೆಣಕುವ ಪ್ರಯತ್ನ ಮಾಡುತ್ತಿದೆ. 

ಚೀನಾ ಬೆನ್ನಲ್ಲೇ ಪಾಕ್ ತಯಾರಿ; ಏಕಕಾಲಕ್ಕೆ ಎರಡೂ ಗಡಿಯಲ್ಲಿ ಹೆಚ್ಚಿದ ಆತಂಕ!..

ಎಕನಾಮಿಕ್ ಕಾರಿಡಾರ್ ಸುರಕ್ಷತೆಗೆ ಚೀನಾ ಇದೀಗ ಪಾಕಿಸ್ತಾನಕ್ಕೆ 4 ಆಟ್ಯಾಕ್ ಡ್ರೋನ್ ನೀಡುತ್ತಿದೆ. ಬಲೂಚಿಸ್ತಾನದಲ್ಲಿನ ಗಡ್ವಾರ್ ಪಾಕ್ ಸೇನಾ ಪೋರ್ಟ್‌ನಲ್ಲಿ 4 ಡ್ರೋನ್‌ಗಳು ಕಾರ್ಯನಿರ್ವಹಿಸಲಿದೆ. ಗದ್ವಾರ್ ಪಾಕ್ ಸೇನಾ ನೆಲೆಯಲ್ಲಿ ಚೀನಾ ಸೇನೆ ಕೂಡ ಸೇರಿಕೊಳ್ಳಲಿದೆ. ಬಲೂಚಿಸ್ತಾನ ಪಾಕ್ ಆಕ್ರಮಿತ ಕಾಶ್ಮೀರದ ಭಾಗವಾಗಿದ್ದು, ಈ ಮೂಲಕ ಭಾರತದ  ಸೇನಾ ಚಲನವಲಗಳ ಮಾಹಿತಿ ಕಲೆ ಹಾಕುವ ಕುತಂತ್ರವೂ ಅಡಗಿದೆ.

ಭಾರತದ ಗಡಿಯಲ್ಲಿ 20,000 ಪಾಕ್‌ ಸೈನಿಕರ ನಿಯೋಜನೆ!

ಚೀನಾ ನಿರ್ಮಿತ ಆಟ್ಯಾಕ್ ಡ್ರೋನ್ ಸರ್ಫೇಸ್ ಮಿಸೈಲ್ ಸೇರಿದಂತೆ ಅತ್ಯಾದುನಿಕ ಸೌಲಭ್ಯ ಹೊಂದಿದೆ. ದಶಗಳಿಂದ ಚೀನಾ ಹಲವು ದೇಶಗಳಿಗೆ ಆಟ್ಯಾಕ್ ಡ್ರೋನ್ ಪೂರೈಕೆ ಮಾಡುತ್ತಿದೆ. 2008 ರಿಂದ 2018ರ ವರೆಗೆ ಚೀನಾ ನಿರ್ಮಿತ ಆಟ್ಯಾಕ್ ಡ್ರೋನ್, ಕಜಕಿಸ್ತಾನ, ಯುಎಇ, ಅಲ್ಜೇರಿಯಾ, ತರ್ಕಮೆನಿಸ್ತಾನ ಸೇರಿದಂತೆ ಹಲವು ದೇಶಗಳಿಗೆ ರಫ್ತು ಮಾಡಿದೆ. 

ಪಾಕಿಸ್ತಾನಕ್ಕೆ ಡ್ರೋನ್ ಪೂರೈಕೆಯಿಂದ ಇದೀಗ ಭಾರತ ಅಲರ್ಟ್ ಆಗಿದೆ. ಕಾರಿಡಾರ್ ಹೆಸರಲ್ಲಿ ಪಾಕಿಸ್ತಾನ ಹಾಗೂ ಚೀನಾ ಭಾರತದ ಸೇನೆ ನೆಲೆಗಳ ಮಾಹಿತಿ ಕದಿಯುವ ಸಾಧ್ಯತೆ ಇದೆ. ಹೀಗಾಗಿ ಭಾರತೀಯ ವಾಯುಸೇನೆ ಈಗಾಗಲೇ ಅಲರ್ಟ್ ಆಗಿದೆ.