Asianet Suvarna News Asianet Suvarna News

ಭಾರೀ ಮಳೆಯಿಂದಾಗಿ ಕುಸಿದ ಹೆದ್ದಾರಿ, 19 ಮಂದಿ ಸಾವು

ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಮೀಝೌ ನಗರದಲ್ಲಿ ಹೆದ್ದಾರಿಯ 17.9 ಮೀಟರ್ ಉದ್ದ ಕುಸಿತ ಕಂಡ ಬೆನ್ನಲ್ಲಿಯೇ 18 ಕಾರುಗಳು ಪ್ರಪಾತಕ್ಕೆ ಬಿದ್ದಿವೆ. ಈ ಘಟನೆಯಲ್ಲಿ 19 ಮಂದಿ ಸಾವು ಕಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

China Guangdong 19 killed as highway collapses san
Author
First Published May 1, 2024, 4:44 PM IST

ನವದೆಹಲಿ (ಮೇ.1): ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿಯ ಒಂದು ಭಾಗ ಕುಸಿದು ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಮತ್ತು 30 ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿಸಿಟಿವಿಯಿಂದ ಲಭ್ಯವಾದ  ಪ್ರಾಥಮಿಕ ಮಾಹಿತಿಯ ಪ್ರಕಾರ, ಹೆದ್ದಾರಿ ಕುಸಿದ ಕಾರಣ ಒಟ್ಟು 18 ವಾಹನಗಳು ಪ್ರಪಾತಕ್ಕೆ ಬಿದ್ದಿದ್ದವು. ಇದರಲ್ಲಿ ಒಟ್ಟು 49 ಜನರು ಸೇರಿದ್ದರ. ಇದರಲ್ಲಿ ಹತ್ತೊಂಬತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಮೂವತ್ತು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಹೆಚ್ಚಿನವರಿಗೆ ಗಾಯ ಗಂಭೀರವಲ್ಲ ಎಂದು ಹೇಳಲಾಗಿದೆ.  ಚಯಾಂಗ್ ವಿಭಾಗದ ಎಕ್ಸಿಟ್‌ನಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿರುವ ಗುವಾಂಗ್‌ಡಾಂಗ್‌ನ ಮೈಡಾ ಎಕ್ಸ್‌ಪ್ರೆಸ್‌ವೇಯಲ್ಲಿ ಡಾಬುದಿಂದ ಫುಜಿಯಾನ್‌ಗೆ ಹೋಗುವ ದಿಕ್ಕಿನಲ್ಲಿ ಕೆ 11 + 900 ಮೀ ಬಳಿ ಮಧ್ಯಾರಾತ್ರಿ 2.10ರ ಸಮಯದಲ್ಲಿ ಕುಸಿತ ಸಂಭವಿಸಿದೆ. ಕುಸಿದ ರಸ್ತೆಯ ಮೇಲ್ಮೈ ಸುಮಾರು 17.9 ಮೀಟರ್ ಉದ್ದವಿದ್ದು, ಸುಮಾರು 184.3 ಚದರ ಮೀಟರ್ ವಿಸ್ತೀರ್ಣವನ್ನು ಹೊಂದಿದೆ.

ದಕ್ಷಿಣ ಚೀನಾದಲ್ಲಿ ಬುಧವಾರ ಮುಂಜಾನೆ ಹೆದ್ದಾರಿಯ ಒಂದು ಭಾಗವು ಕುಸಿದು ಕನಿಷ್ಠ 19 ಜನರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ, ಪ್ರದೇಶವು ಇತ್ತೀಚಿನ ದಿನಗಳಲ್ಲಿ ಭಾರೀ ಮಳೆಯನ್ನು ಕಂಡಿತ್ತು. ಅದೇ ಕಾರಣದಿಂದ ಈ ಘಟನೆ ಆಗಿರಬಹುದು ಎನ್ನಲಾಗಿದೆ.

ನೌಕಾಪಡೆ ಮುಖ್ಯಸ್ಥನಾಗಿ ಅಧಿಕಾರ ಸ್ವೀಕರಿಸಿದ ದಿನೇಶ್ ತ್ರಿಪಾಠಿ: ಅಮ್ಮನ ಪಾದಕ್ಕೆರಗಿ ಆಶೀರ್ವಾದ ಪಡೆದ ಅಡ್ಮಿರಲ್

ಪ್ರತ್ಯಕ್ಷದರ್ಶಿಗಳು ಸ್ಥಳೀಯ ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯ ಪ್ರಕಾರ, ಮಧ್ಯಾರಾತ್ರಿ ಅವರು ದೊಡ್ಡ ಶಬ್ದವನ್ನು ಕೇಳಿದರು . ಇದರ ಬೆನ್ಮಲ್ಲಿಯೇ ಹೆದ್ದಾರಿ ಕುಸಿದಿರುವುದು ಗಮನಕ್ಕೆ ಬಂದಿತ್ತು ಎಂದು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳಲ್ಲಿ ವೀಡಿಯೊ ಮತ್ತು ಫೋಟೋಗಳು ಪ್ರಕಾರ, ಘಟನಾ ಸ್ಥಳದಲ್ಲಿ ಹೊಗೆ ಮತ್ತು ಬೆಂಕಿಯನ್ನು ತೋರಿಸಿದೆ.  ಹೆದ್ದಾರಿ ಹಳಿಗಳು ಜ್ವಾಲೆಗೆ ಕೆಳಕ್ಕೆ ಉರುಳಿವೆ. ಹೆದ್ದಾರಿಯಿಂದ ಕೆಳಗಿಳಿಯುವ ಇಳಿಜಾರಿನಲ್ಲಿ ಬಿದ್ದಿರುವ ಕಾರುಗಳೂ ಕಂಡಿವೆ.

ಪಬ್ಲಿಕ್ ಟಾಯ್ಲೆಟ್‌ನಲ್ಲೇ ಸ್ವಯಂ ಮೂತ್ರ ಪರೀಕ್ಷೆ: ಏನಾದ್ರೂ ರೋಗವಿದ್ದರೆ ರಿಪೋರ್ಟ್ ತಕ್ಷಣವೇ ನಿಮ್ಮ ಕೈಗೆ!

 

 

Latest Videos
Follow Us:
Download App:
  • android
  • ios