Asianet Suvarna News Asianet Suvarna News

ರೇವಣ್ಣಗೆ ಜಾಮೀನು ನೀಡಿ ಮೆಮೊ ಕೈಗೆ ನೀಡಲು ನಿರಾಕರಿಸಿದ ಕೋರ್ಟ್, ನಾಳೆ ರಿಲೀಸ್!

ರೇವಣ್ಣಗೆ ಜಾಮೀನು, ನಾಳೆ ಜೈಲಿನಿಂದ ರಿಲೀಸ್, ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ನಾಲ್ವರು ಅರೆಸ್ಟ್, ರೋಡ್ ಶೋ ಬಳಿಕ ಕಾಶಿ ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ ಮೋದಿ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
 

ಕಿಡ್ನಾಪ್ ಪ್ರಕರಣದಲ್ಲಿ ಹೆಚ್‌ಡಿ ರೇವಣ್ಣ ಕಳೆದ 5 ದಿನಗಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಸತತ ಕಾನೂನು ಹೋರಾಟದ ಮೂಲಕ ಹೆಚ್‌ಡಿ ರೇವಣ್ಣ ಜಾಮೀನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಂದು ಸಂಜೆ 6.40 ನಿಮಿಷಕ್ಕೆ ತೀರ್ಪು ಪ್ರಕಟಗೊಂಡಿತ್ತು. ಅದಾಗಲೇ ಸಮಯ ಕಳೆದುಹೋದ ಕಾರಣ, ಜಾಮೀನು ಸಿಕ್ಕರೂ ರೇವಣ್ಣ ಇಂದು ಜೈಲಿನಿಂದ ಬಿಡುಗಡೆಯಾಗಿಲ್ಲ. ಮೆಮೋ ಪ್ರತಿಯನ್ನು ಕೈಯಲ್ಲಿ ನೀಡಲು ಕೋರ್ಟ್ ನಿರಾಕರಿಸಿತು. ಹೀಗಾಗಿ ನಾಳೆ ರೇವಣ್ಣ ಬಿಡುಗಡೆಯಾಗಲಿದ್ದಾರೆ.  
 

Video Top Stories