Asianet Suvarna News Asianet Suvarna News

ದೇಶದಲ್ಲಿ ಜನಸಂಖ್ಯೆ ಇಳಿಕೆಯಿಂದಾಗಿ ಮಹತ್ವದ ನಿರ್ಧಾರ ಪ್ರಕಟಿಸಿದ ಚೀನಾ

ಚೀನಾದಲ್ಲಿ ಕುಸಿಯುತ್ತಿರುವ ಜನಸಂಖ್ಯೆ ಮತ್ತು ಕಾರ್ಮಿಕರ ಕೊರತೆಯನ್ನು ಎದುರಿಸಲು ಇಲ್ಲಿನ ಸರ್ಕಾರ ಮಹತ್ವದ ನಿರ್ಧಾರವನ್ನು  ತೆಗೆದುಕೊಂಡಿದೆ. ಇಲ್ಲಿನ ಸಂಸತ್ತು ಅನುಮೋದನೆ ನೀಡಿದೆ.

China government increases retirement age mrq
Author
First Published Sep 14, 2024, 9:45 AM IST | Last Updated Sep 14, 2024, 9:45 AM IST

ಬೀಜಿಂಗ್‌: ವೃದ್ಧರ ಸಂಖ್ಯೆ ವೃದ್ಧಿಸುತ್ತಿರುವ ಚೀನಾದಲ್ಲಿ ಜನಸಂಖ್ಯೆ ಕುಸಿಯುತ್ತಿದ್ದು, ಕೆಲಸಗಾರರ ಸಂಖ್ಯೆಯಲ್ಲಿಯೂ ಇಳಿಕೆಯಾಗುತ್ತಿದೆ. ಪರಿಣಾಮವಾಗಿ ನೌಕರರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಲು ಇಲ್ಲಿನ ಸಂಸತ್ತು ಅನುಮೋದನೆ ನೀಡಿದ್ದು, ಇದು ಮುಂದಿನ ವರ್ಷ ಜನವರಿಯಿಂದ ಜಾರಿಗೆ ಬರಲಿದೆ.

ಇದರ ಪ್ರಕಾರ ಪುರುಷರ ನಿವೃತ್ತಿ ವಯಸ್ಸನ್ನು 63 ವರ್ಷಕ್ಕೆ ಹಾಗೂ ಮಹಿಳೆಯರ ನಿವೃತ್ತಿಯನ್ನು ಅವರ ವೃತ್ತಿಗನುಗುಣವಾಗಿ 55 ಹಾಗೂ 58ಕ್ಕೆ ಏರಿಸಲಾಗುವುದು. ಪ್ರಸ್ತುತ ಪುರುಷರು 60ನೇ ವಯಸ್ಸಿಗೆ ನಿವೃತ್ತಿ ಆಗುತ್ತಿದ್ದಾರೆ. ಶ್ರಮದ (ಬ್ಲೂ ಕಾಲರ್‌) ಕೆಲಸ ಮಾಡುವ ಮಹಿಳೆಯರು 50 ಮತ್ತು ಕಚೇರಿಗಳಲ್ಲಿ (ವೈಟ್‌ ಕಾಲರ್‌) ಕೆಲಸ ಮಾಡುವ ಮಹಿಳೆಯರು 55 ವಯಸ್ಸಿಗೆ ನಿವೃತ್ತಿ ಹೊಂದುತ್ತಿದ್ದಾರೆ.

ಜಗತ್ತಿನ 90% ಕರೆನ್ಸಿ ತಯಾರಿಸುತ್ತಿದ್ದ ಶ್ರೀಮಂತ ವಿಮಾನದಲ್ಲಿದ್ದುದು ಹೈಜಾಕರ್‌ಗಳಿಗೆ ಗೊತ್ತೇ ಇರಲಿಲ್ಲ!

‘ಜನಸಂಖ್ಯೆ ಇಳಿಕೆ ಕಾರಣ ಕೆಲಸಗಾರರ ಸಂಖ್ಯೆ ಕುಸಿಯುತ್ತಿದೆ. ನಿವೃತ್ತಿ ವಯಸ್ಸಿಗೆ ಹತ್ತಿರಾಗುತ್ತಿರುವವರ ಸಂಖ್ಯೆ ಅಧಿಕವಾಗಿದ್ದು, ಪಿಂಚಣಿ ನಿಧಿ ನೀಡಲು ಕಷ್ಟವಾಗುತ್ತಿದೆ. ಆದಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಚೀನಾದ ಜನಸಂಖ್ಯೆ ಮತ್ತು ಆರ್ಥಿಕತೆಯ ಮೇಲೆ ಅದು ಬೀರುವ ಪ್ರಭಾವದ ಬಗ್ಗೆ ಸಂಶೋಧನೆ ನಡೆಸಿದ ಆಸ್ಟ್ರೇಲಿಯಾದ ವಿಕ್ಟೋರಿಯಾ ವಿಶ್ವವಿದ್ಯಾಲಯದ ಹಿರಿಯ ಸಂಶೋಧಕ ಕ್ಸಿಯುಜಿಯಾನ್ ಪೆಂಗ್ ಹೇಳಿದ್ದಾರೆ.

ಪ್ರಸ್ತುತ ಭಾರತ 142 ಕೋಟಿ ಜನಸಂಖ್ಯೆ ಹೊಂದಿದ್ದರೆ, 2ನೇ ಸ್ಥಾನಕ್ಕೆ ಕುಸಿದಿರುವ ಚೀನಾದಲ್ಲಿ 141 ಕೋಟಿ ಜನಸಂಖ್ಯೆ ಇದೆ. ಮುಂದಿನ ದಿನಗಳಲ್ಲಿ ಚೀನಾ ಜನಸಂಖ್ಯೆ ಇನ್ನೂ ಕುಸಿಯುವ ಅಂದಾಜಿದೆ.

ಅಮೆರಿಕಾ ರಾಜಕೀಯ: ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆ ಬಗ್ಗೆಯೇ ಚರ್ಚೆ, ಬೆಲೆ ಎಷ್ಟು?

Latest Videos
Follow Us:
Download App:
  • android
  • ios